ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 28: ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ ಮಧ್ಯೆ ಮೆಟ್ರೊ ರೈಲು ಸಂಚಾರ ವ್ಯತ್ಯಯ

|
Google Oneindia Kannada News

ಬೆಂಗಳೂರು ಮೇ 27: ಎಂ.ಜಿ. ರಸ್ತೆಯ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ಮೇ 28ರ ರಾತ್ರಿ 9.30ರಿಂದ ಸಂಚಾರ ಸ್ಥಗಿತಗೊಳಿಸಲಾಗುತ್ತಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮವು (ಬಿಎಂಆರ್‌ಸಿಎಲ್‌) ಎಂ.ಜಿ. ರಸ್ತೆ ಮತ್ತು ಟ್ರಿನಿಟಿ ನಿಲ್ದಾಣಗಳ ಮಧ್ಯೆ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿದೆ. ಹೀಗಾಗಿ ಈ ನಿರ್ವಹಣಾ ಕಾರ್ಯ ಮುಗಿಯುವವರೆಗೂ ಎಂ.ಜಿ. ರಸ್ತೆ ಮತ್ತು ಕೆಂಗೇರಿ ನಿಲ್ದಾಣದವರೆಗೆ ಮಾತ್ರ ನೇರಳೆ ಮಾರ್ಗದ ರೈಲು ಸಂಚಾರ ಇರುತ್ತದೆ. ಮೇ 29ರ ಭಾನುವಾರ ಬೆಳಗ್ಗೆಯಿಂದ ವೇಳಾಪಟ್ಟಿಯಂತೆ ರೈಲು ಸಂಚಾರ ಇರುತ್ತದೆ.

Baiyappanahalli-M.G. Road metro service to be curtailed from 9.30 p.m. on May 28

ಸಮಯ ಹೀಗಿದೆ:

ಶನಿವಾರ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿವರೆಗಿನ ಕೊನೆಯ ರೈಲು ರಾತ್ರಿ 8.40ಕ್ಕೆ ಹೊರಡುತ್ತದೆ. ಬೈಯಪ್ಪನಹಳ್ಳಿಯಿಂದ ಕೆಂಗೇರಿ ಕಡೆಗೆ ಹೊರಡುವ ರೈಲು ರಾತ್ರಿ 9.10ಕ್ಕೆ ಹೊರಡುತ್ತದೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿವರೆಗಿನ ಕೊನೆಯ ರೈಲು 9.10ಕ್ಕೆ ಹೊರಡಲಿದೆ. ಈ ಅವಧಿಯ ನಂತರ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಎಂ.ಜಿ. ರಸ್ತೆಯ ನಿಲ್ದಾಣದವರೆಗೆ ರೈಲುಗಳು ಸಂಚರಿಸುತ್ತವೆ. ಹಸಿರು ಮಾರ್ಗದ ಮೆಟ್ರೋ ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ವೇಳಾಪಟ್ಟಿ ಪ್ರಕಾರ ರೈಲು ಸಂಚಾರ ಇರುತ್ತದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆ ತಿಳಿಸಿದೆ.

Recommended Video

ಸಂಸ್ಕೃತಿ ಇದ್ದಲ್ಲಿ ಧರ್ಮ ಇರುತ್ತದೆ | Oneindia Kannada

English summary
Namma Metro services on the Purple Line will face disruptions on May 28 from 9.30 p.m. onwards as BMRCL will take up civil maintenance work.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X