ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯುಗಾದಿ : ಬೆಂಗಳೂರಲ್ಲಿ ಜಪಾನ್+ ಕನ್ನಡ ನೃತ್ಯ ವೈಭವ

By Mahesh
|
Google Oneindia Kannada News

ಬೆಂಗಳೂರು, ಮಾ.20: ಯುಗಾದಿ ಹಬ್ಬದ ಸಂದರ್ಭದಲ್ಲಿ 'ಬಹುರಂಗ್' ವಿಭಿನ್ನ ನೃತ್ಯ ಕಾರ್ಯಕ್ರಮವನ್ನು ಸದಾಶಿವ ನಗರದ ಫ್ಲವರ್ ಪಾರ್ಕ್ ಸಮಿತಿ ಆಯೋಜಿಸಿದೆ. ಮಾ.21ರ ಶನಿವಾರ ಲೋ ಲೆವಲ್ ಪಾರ್ಕ್, ಸ್ಯಾಂಕಿ ರಸ್ತೆಯಲ್ಲಿ ಆಸಕ್ತರಿಗೆ ರಸದೌತಣ ಸಿಗಲಿದೆ.

ಅಂತಾರಾಷ್ಟ್ರೀಯ ಖ್ಯಾತಿಯ ಅಭಿನವ ನೃತ್ಯ ಸಂಸ್ಥೆಯ ಖ್ಯಾತ ನೃತ್ಯಪಟುಗಳಾದ ನಿರುಪಮಾ ಹಾಗೂ ರಾಜೇಂದ್ರ ಮತ್ತು ದಿ ರಾಯಲ್ ಎಕೋ ಗ್ರೂಪ್, ಬೆಂಗಳೂರು (ಜಪಾನೀಸ್) ತಂಡಗಳು ಜಪಾನ್ ಹಾಗೂ ಕನ್ನಡ ಸಾಂಸ್ಕೃತಿಕ ನೃತ್ಯ ವೈಭವವನ್ನು ಪ್ರದರ್ಶಿಸಲಿದ್ದಾರೆ.[ಯುಗಾದಿ ಪ್ರಯುಕ್ತ ವಿಶೇಷ ಕೆಎಸ್ಆರ್‌ಟಿಸಿ ಬಸ್ಸು]

'ಬಹುರಂಗ್' -ಹೆಸರೇ ಸೂಚಿಸುವಂತೆ ಇದು ಹಲವು ರಂಗುಗಳ ಜೋಡಣೆ. ನೃತ್ಯ ಹಾಗೂ ಸಂಗೀತಗಳ ಸಮ್ಮೀಲನ, ಹೊಸತನದ ಹುರುಪನ್ನು ತುಂಬುವ ಕಾರ್ಯಕ್ರಮವಾಗಿ ರೂಪುಗೊಂಡಿದೆ. ಯುಗಾದಿಯ ಸಂದರ್ಭದಲ್ಲಿ ಹೊಸ ಉತ್ಸಾಹ ತುಂಬಲು ಇಂಥ ಕಾರ್ಯಕ್ರಮ ಅವಶ್ಯಕ.

Bahurang Japanese and Kannada performance Nirupama + Rajendra

ಖ್ಯಾತ ನೃತ್ಯಪಟು ನಿರುಪಮಾ ಹಾಗೂ ರಾಜೇಂದ್ರ ಅವರು 1994ರಲ್ಲಿ ಅಭಿನವ ಗುಪ್ತ ಹೆಸರಿನಲ್ಲಿ ಸ್ಥಾಪನೆಗೊಂಡ ಸಂಸ್ಥೆ ಅಭಿನವ ನೃತ್ಯ ಕಂಪನಿ ಪ್ರಸ್ತುತಪಡಿಸುವ ಈ ಕಾರ್ಯಕ್ರಮವನ್ನು ಲೋಟಸ್ ಹಾಗೂ ಕ್ರಿಸಾಂಥಮಮ್ ಟ್ರಸ್ಟ್, ವ್ಯಾಸ ಇಂಟರ್ ನ್ಯಾಷನಲ್ ಸ್ಕೂಲ್, ವಿಜಯ ಬ್ಯಾಂಕ್, ಸತ್ವಂ, ಹಾಗೂ ಹರೀಶ್ ಅಪ್ಪರೆಡ್ಡಿ ಆಯೋಜಿಸಿದ್ದಾರೆ.

ಸದಾಶಿವನಗರದ ಪಾರ್ಕ್ ಸಮಿತಿ ಕೈಗೊಂಡಿರುವ ಕ್ರಮಗಳಿಗೆ ಇಂಬು ನೀಡಲು ಈ ಕಾರ್ಯಕ್ರಮದ ಮೂಲಕ ಸ್ವಚ್ಛ ಮನಸ್ಸು, ಸುಂದರ ಹಸಿರು ವಿಶ್ವ ಎಂಬ ಕಲ್ಪನೆ ಮೂಡಿಸಲಾಗುವುದು. ಸ್ವಚ್ಛತೆ ಅಭಿಯಾನ, ಸಸಿ ನೆಡುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: +91 98458 24725
ವೆಬ್ ಸೈಟ್: www.bookurevent.com

English summary
Bahurang features a dance spectacle by Nirupama + Rajendra of internationally acclaimed Abhinava Dance Company and The Royal Echo Group, Bangalore (Japanese), will present a Japanese and Kannada performance on March 21, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X