ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈದುಂಬಿದ ಬಾಗಲೂರು ಕೆರೆ; ಕಣ್ಮನ ಸೆಳೆಯುವ ಚಿತ್ರಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 09 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಕೆ. ಸಿ. ವ್ಯಾಲಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವ ಯೋಜನೆ ಜಾರಿಗೆ ತರಲಾಗಿತ್ತು. ಈ ಯೋಜನೆಯಡಿ ಬಾಗಲೂರು ಕೆರೆ ಭರ್ತಿಯಾಗಿದ್ದು, ಮೈದುಂಬಿದ ಕೆರೆಯ ಚಿತ್ರಗಳು ಕಣ್ಮನ ಸೆಳೆಯುತ್ತಿದೆ.

ಮಾಜಿ ಸಚಿವ ಕೃಷ್ಣ ಬೈರೇಗೌಡ ಬಾಗಲೂರು ಕೆರೆ ತುಂಬಿರುವ ಚಿತ್ರಗಳನ್ನು ಟ್ವೀಟ್ ಮಾಡಿದ್ದಾರೆ. "ನಮ್ಮ ಕ್ಷೇತ್ರದ ಬಾಗಲೂರು ಕೆರೆ ತುಂಬಿರುವ ಒಂದು ರಮಣೀಯ ದೃಶ್ಯ. ಅಂದು ನಾವು ಕಂಡ ಕನಸು ಇಂದು ನನಸಾಗ ತೊಡಗಿದೆ" ಎಂದು ಹೇಳಿದ್ದಾರೆ.

ವಿಷವಾಗಿ ಕಾಡುತ್ತಿದೆ ಹತ್ತು ವರ್ಷದ ನಂತರ ತುಂಬಿದ ಆರದವಳ್ಳಿ ಕೆರೆವಿಷವಾಗಿ ಕಾಡುತ್ತಿದೆ ಹತ್ತು ವರ್ಷದ ನಂತರ ತುಂಬಿದ ಆರದವಳ್ಳಿ ಕೆರೆ

ಕೆ.ಸಿ. ವ್ಯಾಲಿ (ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆ) ಯೋಜನೆ ಅನ್ವಯ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಪೈಪ್ ಮೂಲಕ ಬೆಂಗಳೂರು ಉತ್ತರ ಭಾಗದ ಕೆರೆಗಳನ್ನು ತುಂಬಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿತ್ತು.

ಬೆಂಗಳೂರಿನ ಸುಬ್ರಹ್ಮಣ್ಯಪುರ ಕೆರೆ ಅತಿಕ್ರಮಣ ತೆರವಿಗೆ ಗಡುವು ಬೆಂಗಳೂರಿನ ಸುಬ್ರಹ್ಮಣ್ಯಪುರ ಕೆರೆ ಅತಿಕ್ರಮಣ ತೆರವಿಗೆ ಗಡುವು

ತುಂಬಿರುವ ಬಾಗಲೂರು ಕೆರೆ ನೀರನ್ನು ಕೃಷಿ ಚಟುವಟಿಕೆ ಮತ್ತು ಜಾನುವಾರುಗಳಿಗೆ ಮಾತ್ರ ಬಳಸಬಹುದಾಗಿದೆ. ತುಂಬಿರುವ ಕೆರೆಯ ಚಿತ್ರವನ್ನು ಮಾಜಿ ಸಚಿವರು ಟ್ವೀಟ್ ಮಾಡಿದ್ದಾರೆ.

ಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆಹುಳಿಮಾವು ಕೆರೆ ದುರಂತ: 50 ಸಾವಿರ ಪರಿಹಾರ ಘೋಷಣೆ

ಕೃಷ್ಣ ಬೈರೇಗೌಡರ ಟ್ವೀಟ್

ಕೃಷ್ಣ ಬೈರೇಗೌಡರ ಟ್ವೀಟ್

"ನಮ್ಮ ಕ್ಷೇತ್ರದ ಬಾಗಲೂರು ಕೆರೆ ತುಂಬಿರುವ ಒಂದು ರಮಣೀಯ ದೃಶ್ಯ. ಅಂದು ನಾವು ಕಂಡ ಕನಸು ಇಂದು ನನಸಾಗ ತೊಡಗಿದೆ. ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ KC ವ್ಯಾಲಿ ಯೋಜನೆಯಡಿ ಕೆರೆಗಳಿಗೆ ಬೆಂಗಳೂರಿನ ಸಂಸ್ಕರಿಸಿದ ನೀರನ್ನು ಪೈಪ್ ಲೈನ್ ಮೂಲಕ ಬೆಂಗಳೂರು ಉತ್ತರ ಭಾಗಕೆರೆಗಳನ್ನು ತುಂಬಿಸುವ ಕಾರ್ಯಕ್ರವನ್ನು ಹಂತಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದೆ" ಎಂದು ಹೇಳಿದ್ದಾರೆ.

65 ಕೆರೆಗಳು ಬರುತ್ತವೆ

65 ಕೆರೆಗಳು ಬರುತ್ತವೆ

ಕೆ. ಸಿ. ವ್ಯಾಲಿ ಯೋಜನೆಯಡಿ ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯ 12 ಕೆರೆ, ದೇವನಹಳ್ಳಿ ತಾಲೂಕಿನ 9 ಕೆರೆ, ಚಿಕ್ಕಬಳ್ಳಾಪುರ ಜಿಲ್ಲೆಯ 44 ಕೆರೆ ಸೇರಿ ಒಟ್ಟು 65 ಕೆರೆಗಳನ್ನು ತುಂಬಿಸಲಾಗುತ್ತದೆ. ಸದ್ಯ ಬಾಗಲೂರು ಕೆರೆ ತುಂಬಿದ್ದು, ಅದರ ಚಿತ್ರ ಇಲ್ಲಿದೆ.

ರೈತರಿಗೆ ಅನುಕೂಲ

ರೈತರಿಗೆ ಅನುಕೂಲ

ಕೆ. ಸಿ. ವ್ಯಾಲಿ ಯೋಜನೆಯಿಂದ ವರ್ಷಕ್ಕೆ ಸುಮಾರು 2.70 ಟಿಎಂಸಿ ನೀರು ಲಭ್ಯವಾಗಲಿದ್ದು, ಈ ನೀರಿನೊಂದಿಗೆ ಆ ಭಾಗದ ವಾರ್ಷಿಕ ವಾಡಿಕೆ ಮಳೆಯಿಂದ ಲಭ್ಯವಾಗುವ ನೀರು ಸೇರಿದಲ್ಲಿ ಅನೇಕ ಕೆರೆಗಳು ತುಂಬಲಿವೆ. ಇದರಿಂದಾಗಿ ರೈತರಿಗೆ ಅನುಕೂಲವಾಗಲಿದೆ.

ಏನಿದು ಯೋಜನೆ?

ಏನಿದು ಯೋಜನೆ?

ಶುದ್ಧೀಕರಿಸಿದ ಚರಂಡಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿನ ಕೆರೆಗಳಿಗೆ ಹರಿಸುವುದು ಕೆ. ಸಿ. ವ್ಯಾಲಿ ಯೋಜನೆಯಾಗಿದೆ. ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಉದ್ದೇಶದಿಂದ ಕೆ. ಸಿ. ವ್ಯಾಲಿ ಮತತು ಎಚ್‌. ಎನ್. ವ್ಯಾಲಿ (ಹೆಬ್ಬಾಳ- ನಾಗವಾರ) ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

English summary
Bagalur lake filled by Kolar - Challagatta (KC) valley project. Project initiated by Karnataka Govt to fill 126 lakes. Former minister tweeted lake photo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X