ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡೆಬಿಟ್ ಕಾರ್ಡ್ ಕಳ್ಳ ಎಟಿಎಂ ಅರುಣ್ ಸೆರೆ, 1.60 ಲಕ್ಷ ರೂ. ವಶ

|
Google Oneindia Kannada News

ಬೆಂಗಳೂರು, ಅ. 20: ಡೆಬಿಟ್ ಕಾರ್ಡ್‍ಗಳನ್ನು ಬದಲಾಯಿಸಿ ಹಣ ಡ್ರಾ ಮಾಡಿ ವಂಚಿಸುತ್ತಿದ್ದ ಆರೋಪಿಯ ಬಂಧಿಸಲಾಗಿದೆ. ಡೆಬಿಟ್ ಕಾರ್ಡ್‍ನಲ್ಲಿ ಖರೀದಿಸಿದ್ದ ಮೊಬೈಲ್ ಫೋನ್, ಚಿನ್ನಾಭರಣ ಮತ್ತು ನಗದು ಹಣ ಒಟ್ಟು 1.60 ಲಕ್ಷ ರೂ. ವಶ ಪಡೆಸಿಕೊಳ್ಳಲಾಗಿದೆ ಎಂದು ಬಾಗಲಗುಂಟೆ ಪೊಲೀಸರು ಹೇಳಿದ್ದಾರೆ.

ಬಾಗಲಗುಂಟೆ ಪೊಲೀಸ್ ಠಾಣಾ ಸರಹದ್ದಿನ ಪಿರ್ಯಾದುದಾರರಾದ ನಾಗಸಂದ್ರ ನಿವಾಸಿ ನಾಗರಾಜು(46) ಎಂಬುವರು ಅಕ್ಟೋಬರ್ 4 ರಂದು ಮಧ್ಯಾಹ್ನ 12-00 ಗಂಟೆಯ ಸಮಯದಲ್ಲಿ ಹೆಸರುಘಟ್ಟ ಮುಖ್ಯರಸ್ತೆಯ ತ್ರಿವೇಣಿ ಸ್ಕೂಲ್ ಪಕ್ಕದ ಕರ್ನಾಟಕ ಎಟಿಎಂ ಕೇಂದ್ರದಲ್ಲಿ ಹಣ ತುಂಬಲು ಹೋಗಿರುತ್ತಾರೆ. ಅವರ ಹಿಂಭಾಗದಲ್ಲಿ ನಿಂತಿದ್ದ ಅಸಾಮಿಯನ್ನು ಸಹಾಯ ಕೇಳಿದಾಗ ಸದರಿ ಅಸಾಮಿಯು ಪಿರ್ಯಾದುದಾರರ ಡೆಬಿಟ್ ಕಾರ್ಡ್ ಬದಲಾಗಿ ಬೇರೊಂದು ಡೆಬಿಟ್ ಕಾರ್ಡ್ ನೀಡಿ, ಪಿರ್ಯಾದುದಾರರ ಡೆಬಿಟ್ ಕಾರ್ಡ್‍ನಿಂದ 32,000/-ರೂ. ಗಳ ಹಣವನ್ನು ಡ್ರಾ ಮಾಡಿಕೊಂಡ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಮೋಸದ ಪ್ರಕರಣ ದಾಖಲಾಗಿರುತ್ತದೆ.

ಎಸಿಪಿ ರೀನಾ ಮಾರ್ಗದರ್ಶನ, ಜೆಸಿ ನಗರದಲ್ಲಿ 45 ಕೆಜಿ ಗಾಂಜಾ ವಶಎಸಿಪಿ ರೀನಾ ಮಾರ್ಗದರ್ಶನ, ಜೆಸಿ ನಗರದಲ್ಲಿ 45 ಕೆಜಿ ಗಾಂಜಾ ವಶ

ಈ ಪ್ರಕರಣದ ಆರೋಪಿಯಾದ ತುಮಕೂರು ಜಿಲ್ಲೆ ರಾಮಲಿಂಗಪುರದ ನಿವಾಸಿ ಅರುಣ್ ಕುಮಾರ್ ಅಲಿಯಾಸ್ ಎಟಿಎಂ ಅರುಣ್(30 ವರ್ಷ) ಎಂಬುವನನ್ನು ದಸ್ತಗಿರಿ ಮಾಡಲಾಗಿದೆ. ಆರೋಪಿಯು ಡೆಬಿಟ್ ಕಾರ್ಡ್‍ನಲ್ಲಿ ಖರೀದಿಸಿದ್ದ ಸುಮಾರು 1.6 ಲಕ್ಷ ರೂ. ಮೌಲ್ಯದ 2-ಮೊಬೈಲ್ ಫೋನ್‍ಗಳು, 3.07 ಗ್ರಾಂ ತೂಕದ ಚಿನ್ನದ ಒಡವೆಗಳು, ಡೆಬಿಟ್ ಕಾರ್ಡ್‍ನಿಂದ ಡ್ರಾ ಮಾಡಿದ್ದ ನಗದು ಹಣ 1,13,000/-ರೂ. ಕರ್ನಾಟಕ ಬ್ಯಾಂಕ್‍ನ 1-ಡೆಬಿಟ್ ಕಾರ್ಡ್ ಅನ್ನು ವಶಪಡಿಸಿಕೊಳ್ಳುವಲ್ಲಿ ಬಾಗಲಗುಂಟೆ ಪೊಲೀಸರು ಯಶಸ್ವಿಯಾಗಿರುತ್ತಾರೆ.

Bagalagunte Police arrested Debit Card Thief

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆರೋಪಿಯು ಎಟಿಎಂ ಸೆಂಟರ್ಸ್ ಬಳಿ ನಿಂತುಕೊಂಡು ಹಣ ಡ್ರಾ ಮಾಡಲು ಬಂದು ಸಹಾಯ ಕೇಳುವ ಸಾರ್ವಜನಿಕರಿಗೆ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅವರ ಡೆಬಿಟ್ ಕಾರ್ಡ್‍ಗಳನ್ನು ಬದಲಾವಣೆ ಕೊಂಡು ಆ ಡೆಬಿಟ್ ಕಾರ್ಡ್‍ಅನ್ನು ಬಳಿಸಿಕೊಂಡು ಹಣ ಡ್ರಾ ಮಾಡುವುದಾಗಿ ತಿಳಿಸಿರುತ್ತಾನೆ. ಆರೋಪಿಯು 2017 ನೇ ಸಾಲಿನಲ್ಲಿ ಶಿರಾ ಪೊಲೀಸ್ ಠಾಣೆ-2, 2019 ನೇ ಸಾಲಿನಲ್ಲಿ ತುಮಕೂರು ಟೌನ್ ಪೊಲೀಸ್ ಠಾಣೆ-2, ಮಧುಗಿರಿ ಪೊಲೀಸ್ ಠಾಣೆ-2 ಮೋಸದ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿರುವುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.

ಆರೋಪಿಯ ಬಂಧನದಿಂದ ಬಾಗಲುಗುಂಟೆ ಪೊಲೀಸ್ ಠಾಣೆ-2, ಉತ್ತರ ವಿಭಾಗದ ಸೆನ್ ಕ್ರೈಂ ಪೊಲೀಸ್ ಠಾಣೆ -1 ಮತ್ತು ಪೀಣ್ಯ ಪೊಲೀಸ್ ಠಾಣೆಯ-1 ಒಟ್ಟು 4 ಮೋಸದ ಪ್ರಕರಣಗಳು ಪತ್ತೆಯಾಗಿರುತ್ತವೆ.

Bagalagunte Police arrested Debit Card Thief

Recommended Video

ನಾವು ತುಂಬಾ ಯೋಚ್ನೆ ಮಾಡೋಲ್ಲ , Festival Important | Oneindia Kannada

ಈ ಪ್ರಕರಣದಲ್ಲಿ ಶ್ರೀಮತಿ ರೀನಾ ಸುವರ್ಣ, ಎಸಿಪಿ, ಪ್ರಭಾರ ಯಶವಂತಪುರ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ವೆಂಕಟೇಗೌಡ, ಪೊಲೀಸ್ ಇನ್ಸ್ ಪೆಕ್ಟರ್, ಬಾಗಲಗುಂಟೆ ಪೊಲೀಸ್ ಠಾಣೆ ಹಾಗೂ ಪಿಎಸ್‍ಐ ಕುಮಾರ್.ಎಂ, ಶ್ರೀಕಂಠೇಗೌಡ.ಬಿ, ಆಂಜಿನಪ್ಪ, ಪ್ರಭು ಕೆ.ಎಲ್. ಲೋಕೇಶ್, ಸಂತೋಷ್‍ಕುಮಾರ್, ನಾಗೇಶ್ ರವರು ಹಾಗೂ ಹೆಚ್.ಸಿ.ರವರುಗಳಾದ ಹನುಮೇಗೌಡ, ಕುಮಾರಸ್ವಾಮಿ, ಶ್ರೀನಿವಾಸ್, ಪಂಚಾಕ್ಷರಿ, ರಜತ್‍ಕುಮಾರ್, ಪಿ.ಸಿ. ರವರುಗಳಾದ ಪ್ರಕಾಶ್ ಖಿಲಾರಿ, ಪುರುಷೋತ್ತಮ್ ರವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

English summary
Bagalagunte Police led by Yeshwanthpura ACP Reena Suvarna and team have arrested Debit Card Thief who had withdrawn Rs 1,13,000 from Karnataka Bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X