ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡೂಟಕ್ಕೆ ಹೆದರಿ ಸೋನಿಯಾ ಕಾರ್ಯಕ್ರಮ ಬದಲು!

|
Google Oneindia Kannada News

Sonia Gandhi
ಬೆಂಗಳೂರು, ಸೆ.28 : ಕರ್ನಾಟಕದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಡ್ಯಕ್ಕೆ ಆಗಮಿಸುತ್ತಿದ್ದಾರೆ. ಅ.4ರಂದು ಆಗಮಿಸಬೇಕಾಗಿದ್ದ ಸೋನಿಯಾ ಸೆ.30ರಂದೇ ಆಗಮಿಸುತ್ತಿದ್ದಾರೆ ಇದಕ್ಕೆ ಕಾರಣ ಬಾಡೂಟ ಎಂದರೆ ನೀವು ನಂಬುತ್ತಿರಾ? ನಂಬಲೇಬೇಕು.

ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಉಪ ಚುನಾವಣೆಯಲ್ಲಿ ಕರ್ನಾಟಕದ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಮತದಾರರಿಗೆ ಅಭಿನಂದನೆ ಸಲ್ಲಿಸಲು ಸೋನಿಯಾ ಮಂಡ್ಯ ಜಿಲ್ಲೆಗೆ ಆಗಮಿಸಿ ಅಭಿನಂದನೆ ಸಲ್ಲಿಸಲಿದ್ದಾರೆ.

ಮೊದಲು ಸೆ.30ರಂದು ಸೋನಿಯಾ ಗಾಂಧಿ ಮಂಡ್ಯಕ್ಕೆ ಆಗಮಿಸಲಿದ್ದಾರೆ ಎಂದು ಘೋಷಿಸಲಾಗಿತ್ತು. ನಂತರ ಅ.4ಕ್ಕೆ ಕಾರ್ಯಕ್ರಮ ಮುಂದೂಡಲಾಯಿತು. ಪುನಃ ಸೆ.30ರ ಸೋಮವಾರ ಆಗಮಿಸಲಿದ್ದಾರೆ ಎಂದು ಪ್ರಕಟಿಸಲಾಯಿತು. (ಸೆ.30ರಂದು ಕರ್ನಾಟಕಕ್ಕೆ ಸೋನಿಯಾ ಭೇಟಿ)

ಇಷ್ಟೆಲ್ಲಾ ಗೊಂದಲಗಳಿಗೆ ಕಾರಣವಾಗಿದ್ದು ಮಂಡ್ಯ ಜಿಲ್ಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಬಾಡೂಟ. ಹೌದು ಅ.4ರಂದು ಮಹಾಲಯ ಅಮಾವಾಸ್ಯೆ ಅಂದು ರಾಜ್ಯದಲ್ಲಿ ಜನರು ಬಾಡೂಟದಲ್ಲಿ ಬ್ಯುಸಿ ಆಗಿರುತ್ತಾರೆ. ಮಂಡ್ಯ, ತುಮಕೂರು, ಮೈಸೂರು, ಹಾಸನ ಮುಂತಾದ ಜಿಲ್ಲೆಗಳಲ್ಲೂ ಮಹಾಲಯ ಅಮಾವಾಸ್ಯೆ ಜೋರು.

ಜನರೆಲ್ಲರು ಅ.4 ರಂದ ಬಾಡೂಟದಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಕಾಂಗ್ರೆಸ್ ನಾಯಕರು ಅರ್ಥ ಮಾಡಿಕೊಂಡಿದ್ದಾರೆ. ಸೋನಿಯಾ ಮೇಡಂ ಬಂದಾಗ ಜನರಿಲ್ಲದೆ ಪರಿತಪಿಸುವುದು ಬೇಡ ಎಂದು ಕಾರ್ಯಕ್ರಮವನ್ನು ಪುನಃ ಸೆ.30ರಂದು ಆಯೋಜಿಸಲು ತೀರ್ಮಾನಿಸಿದ್ದಾರೆ. ರಮ್ಯಾ ಸಭೆಯಲ್ಲಿ ಸೋನಿಯಾ ಮೇಡಂ ಲಡ್ಡು ವಿತರಣೆ

ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರು ಸೋನಿಯಾ ಗಾಂಧಿ ಆಗಮಿಸುವ ಸಮಾವೇಶವನ್ನು ಭರ್ಜರಿಯಾಗಿ ನಡೆಸಲು ಆಲೋಚಿಸಿದ್ದಾರೆ. ಇಂತಹ ಸಂರ್ಭದಲ್ಲಿ ಜನರ ಕೊರತೆ ಎದುರಾಗಬಾರದು ಎಂದು ಅ.4ರ ಕಾರ್ಯಕ್ರಮ ರದ್ದುಗೊಳಿಸಿದ್ದಾರೆ.

English summary
Mandya's famed badoota has forced a change in AICC chief Sonia Gandhi's itinerary. Sonia to visit Mandya on September 30 which was later put off to October 4. October 4 was 'Mahalaya Amavasya' it is non-vegetarians feast. realizing that 'badoota' would make the task of mobilizing crowds difficult for Sonia Gandhi so, party mangers have now reverted to the earlier itinerary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X