ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನಸಾಮಾನ್ಯರ ಹೊಟ್ಟೆ ತುಂಬಿಸುವ ಅನ್ನದಲ್ಲೂ ಭ್ರಷ್ಟಾಚಾರ ನಡೀತಿದ್ಯಾ..?

|
Google Oneindia Kannada News

ಬೆಂಗಳೂರು, ಮೇ.28: ಬೆಂಗಳೂರಿನ ಆಯ್ದ ಒಂದಷ್ಟು ಇಂದಿರಾ ಕ್ಯಾಂಟೀನ್ ಗಳಲ್ಲಿ ವಾಸ್ತವ ಸತ್ಯ ಹುಡುಕುವ ಪ್ರಯತ್ನದಲ್ಲಿದ್ದ ನಮಗೆ, ಜನರಿಗೆ ಊಟ ಕೊಡುವ ಲೆಕ್ಕದಲ್ಲಿ ಒಂದಷ್ಟು ಏರುಪೇರು ನಡೀತಿದ್ಯಾ ಅನ್ನೋ ಸಂಶಯ ಬಂತು. ಹೌದು, ದಿನಕ್ಕೆ ಎರಡು ಟೈಮ್ ಜನಸಾಮಾನ್ಯರ ಹೊಟ್ಟೆ ತುಂಬಿಸುವ ಪುಣ್ಯದ ಕಾರ್ಯ ಇಂದಿರಾ ಕ್ಯಾಂಟೀನ್ ಗಳ ಮೇಲೆ ಒಂದಷ್ಟು ಆರೋಪ ಆಗಿದ್ದಾಗೆ ಕೇಳಿಬರುತ್ತಲೇ ಇವೆ. ಅಂತಹ ಆರೋಪಗಳ ಸತ್ಯಾಸತ್ಯತೆ ಹುಡುಕುವ ಪ್ರಯತ್ನಕ್ಕೆ 'ಒನ್‌ಇಂಡಿಯಾ ಕನ್ನಡ' ಪ್ರಯತ್ನ ಮಾಡಿದಾಗ ಅಲ್ಲಿನ ವಾಸ್ತವ ಸ್ಥಿತಿ ನಿಜಕ್ಕೂ ಆಶ್ಚರ್ಯ ತರಿಸಿದೆ.

ಕಾಮಾಕ್ಷಿಪಾಳ್ಯ, ಕಾವೇರಿಪುರ, ಗಾಂಧಿನಗರ ಹಾಗೂ ವಸಂತನಗರ ಮತ್ತು ಜಯಮಹಲ್ ವಾರ್ಡ್ ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ಮಾಡಿದೆವು. 10 ರಿಂದ 20 ಸಂಖ್ಯೆಯಷ್ಟು ಮಾತ್ರ ಜನ ಊಟ ಮಾಡುತ್ತಿದ್ದ ದೃಶ್ಯ ನಮಗೆ ಕಾಣಿಸಿತು. ಊಟದ ರುಚಿ ಬಗ್ಗೆ ಒಂದಷ್ಟು ಜನಾಭಿಪ್ರಾಯ ಸಂಗ್ರಹಿಸಿ ಮಧ್ಯಾಹ್ನದ ಇಂದಿರಾ ಕ್ಯಾಂಟೀನ್ ಊಟ ಸವಿಯುತ್ತಾ ಒಂದಷ್ಟು ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದೆವು. ಕ್ಯಾಂಟೀನ್ ಸಿಬ್ಬಂದಿ ಜೊತೆ ಮಾತಾಡ್ತಾ ದಿನಕ್ಕೆ ಎಷ್ಟು ಜನರಿಗೆ ಊಟ ಕೊಡಲಾಗುತ್ತಿದೆ..? ಎಷ್ಟು ಜನಕ್ಕೆ ಊಟ ತಗೊಂಡು ಬರ್ತೀರಾ ಎನ್ನುವ ವಿವರ ಅವರಿಂದ ಪಡೆಯಲಾಯಿತು.

ನಾವು ಭೇಟಿಕೊಟ್ಟ ಬಹುತೇಕ ಎಲ್ಲಾ ಕ್ಯಾಂಟೀನ್ ಗಳಿಂದ ನಮಗೆ ಸಿಕ್ಕ ಉತ್ತರ 400 ರಿಂದ 500 ಜನಕ್ಕೆ ಊಟ ತರಲಾಗುತ್ತೆ. 400 ಜನರ ದಿನನಿತ್ಯ ಊಟ ಮಾಡ್ತಾರೆ ಎಂದು ಹೇಳಿದರು. ಕಾಮಾಕ್ಷಿಪಾಳ್ಯ ವಾರ್ಡ್ ನಂ.101 ರಲ್ಲಿ ಮಾತ್ರ '120 ರಿಂದ 150 ಜನಕ್ಕೆ ಊಟ ಬರುತ್ತೆ, ಅದರಲ್ಲೂ ಹತ್ತು, ಹದಿನೈದು ಜನಕ್ಕೆ ಆಗುವಷ್ಟು ಉಳಿಯುತ್ತೆ ಸಾರ್..' ಎನ್ನುವ ಮಾಹಿತಿ ಸಿಕ್ತು. ಅವರ ಮಾತುಗಳಲ್ಲಿ ನಮಗೆ ಒಂದಷ್ಟು ಅನುಮಾನ ಬಂದ ಉದ್ದೇಶ ಏನಂದ್ರೆ ಹೌಸಿಂಗ್ ಬೋರ್ಡ್ ನಲ್ಲಿರುವ ಕಾವೇರಿಪುರ ಕ್ಯಾಂಟೀನ್ ಕೂಗಳತೆ ದೂರದಲ್ಲೇ ಕಾಮಾಕ್ಷಿಪಾಳ್ಯ ಬಸ್ ನಿಲ್ದಾಣ ಬಳಿ ಕ್ಯಾಂಟೀನ್ ಇದೆ.

The smell of scandal at the meal offered by Indira Canteen

ಹೆಚ್ಚು ಹೆಚ್ಚು ಜನ ಓಡಾಡುವ ಕಾಮಾಕ್ಷಿಪಾಳ್ಯದಲ್ಲಿ ಕೂಲಿಕಾರ್ಮಿಕರು, ಕಟ್ಟಡ ಕಾರ್ಮಿಕರು, ಒಂದಷ್ಟು ಮದ್ಯಮ ಬಡ ವರ್ಗದ ಜನರು ವಾಸಿಸುವಂತ ಸ್ಥಳ. ಇಲ್ಲೇ ಬರೀ 150 ಜನ ಊಟ ಮಾಡ್ತಾರಾ..? ಹೌಸಿಂಗ್ ಬೋರ್ಡ್ ನಲ್ಲಿರುವ ಕಾವೇರಿಪುರ ವಾರ್ಡ್ ನಂ.103 ರಲ್ಲಿ 500 ಜನ ಬರೋದಾದ್ರೆ ಜಯಮಹಲ್, ವಸಂತ್ ನಗರದ ಕ್ಯಾಂಟೀನ್ ಗಳಲ್ಲಿ ಎಷ್ಟು ಅಂತ ಲೆಕ್ಕ ಹಾಕಿದಾಗ ನಮಗೆ ಎಲ್ಲರ ಬಾಯಲ್ಲಿ 500 ಜನಕ್ಕೆ ಊಟ ತರುತ್ತೇವೆ ಅನ್ನೋದೆ ಸಿಕ್ಕಿತು. ಅವರ ಮಾತನ್ನ ನಂಬದ ನಾವು ಕ್ಯಾಂಟಿನ್ ಒಳಗೆ ಹೋದಾಗ...

ಊಟ ತಂದಿದ್ದ ಕ್ಯಾರಿಯರ್ ನೋಡಿದ್ರೆ ಎಂತವರಿಗೂ ಅನುಮಾನ..!

500 ಜನಕ್ಕೆ ಆಗುವಷ್ಟು ಊಟ ಪಾತ್ರೆಗಳಲ್ಲಿ ಇರಲೇ ಇಲ್ಲ..!

ಹೌದು, ಅವರ ಮಾತುಗಳ ಮೇಲೆ ನಮಗೆ ನಂಬಿಕೆ ಬಾರದೆ ಊಟ ತಂದಿದ್ದ ಪಾತ್ರೆಗಳು ನೋಡಿದ್ರೆ 150 ಜನರಿಗೆ ಮಾತ್ರ ಆಗುವಷ್ಟು ಊಟ ಕಾಣಿಸಿತು. ನಮಗೆ ತಿಳಿದಿದ್ದ ಒಬ್ಬ ಅಡುಗೆ ಬಟ್ಟರಿಗೆ ಪಾತ್ರೆಗಳ ಫೋಟೋ ಕಳಿಸಿ ಅವರಿಂದ ಅಂದಾಜಿಸಲಾದ ಊಟದ ಪ್ರಮಾಣ ಕೇಳಿ ನಿಜಕ್ಕೂ ನಮಗೆ ಶಾಕ್. ಕ್ಯಾಂಟೀನ್ ನಲ್ಲಿದ್ದ ಸಿಬ್ಬಂದಿಗಳ ಹೇಳಿಕೆ ಪ್ರಕಾರ 400 ರಿಂದ 500 ಜನ ಊಟ ಮಾಡ್ತಾರೆ, ಅಷ್ಟು ಊಟ ತಗೊಂಡು ಬರುವುದಾಗಿ ಹೇಳಿದ್ರು. ಆದರೆ ನಮಗೆ ಪರಿಚಯವಿದ್ದ ಒಬ್ಬರು ಅಡುಗೆ ಬಟ್ಟರಿಗೆ ಪೋಟೋ ಕಳಿಸಿ ಕೆಳಿದಾಗ ಅವರು ಹೇಳಿದ್ದು 150 ಜನ ಊಟ ಮಾಡಬಹುದು ಅಂದ್ರು.

ಅಡುಗೆ ಭಟ್ಟರು ಹೇಳಿದ ಪ್ರಕಾರವೇ ಕ್ಯಾಂಟೀನ್ ಸಿಬ್ಬಂದಿಗಳು ನಮಗೆ ಮಾಹಿತಿ ನಿಡುವಾಗ ಅದ್ಯಾಕೋ ಅವರ ಮುಖದಲ್ಲಿ ಭಯ ಇತ್ತು. ಸ್ಥಳದಲ್ಲೇ ಎಲ್ಲಾ ವೀಕ್ಷಣೆ ಮಾಡಿದ ನಮ್ಮನ್ನ ನೊಡಿ ಗಾಬರಿಗೊಂಡು ಕ್ಯಾಂಟೀನ್ ಒಳಗೆ ಬಿಟ್ಟುಕೊಳ್ಳಲು ಹಿಂದೇಟು ಹಾಕಿದರು. ವಸಂತನಗರ ಬಸ್ ನಿಲ್ದಾಣ ಬಳಿ ಇರುವ ಕ್ಯಾಂಟೀನ್ ಅಂತೂ ನಮ್ಮನ್ನು ಒಳಗೆ ಕೂಡಿಹಾಕಿ ನಮ್ಮ ಪೋಟೋ ತೆಗೆದುಕೊಂಡಿದ್ದು ನೊಡಿ ನಮ್ಮ ಪಿತ್ತ ಇನ್ನಷ್ಟು ನೆತ್ತಿಗೇರಿತ್ತು. ಅದೇನೆ ಇರಲಿ ನಮಗೆ ಅವರು ಹೇಳಿದ ಊಟದ ಪ್ರಮಾಣ ಬಹುತೇಕ ಕ್ಯಾಂಟೀನ್ ಗಳಲ್ಲಿ ಇರಲೇ ಇಲ್ಲ.

ಅದು ಅಲ್ಲದೆ ಕ್ಯಾಂಟೀನ್ ಗೆ ತಂದಿದ್ದ ಊಟದ ಪಾತ್ರಗಳ ಪ್ರಮಾಣ 150 ಜನಕ್ಕೆ ಆಗುವಷ್ಟು ಮಾತ್ರ ಇದೆ ಎಂಬ ಸತ್ಯ ನಮಗೆ ತಿಳಿಯಿತು. ಹಾಗಾದ್ರೆ ದಿನನಿತ್ಯ ಸರ್ಕಾರದ ಲೆಕ್ಕದಲ್ಲಿ ಒಂದೊಂದು ಕ್ಯಾಂಟೀನ್ ಗಳಲ್ಲಿ 400 ರಿಂದ 500 ಜನ ಊಟ ಮಾಡುತ್ತಾರೆ ಎಂದು ಲೆಕ್ಕ ತೋರಿಸುವ ಊಟ ಎಲ್ಲಿ ಹೋಗುತ್ತಿದೆ..? ಅವರ ಹೇಳಿಕೆಯ ಪ್ರಕಾರವೇ ಅಷ್ಟು ಜನ ಕ್ಯಾಂಟೀನ್ ಬಳಿ ಸುಳಿವೇ ಇಲ್ಲ. ಬಿಬಿಎಂಪಿ ಅಧಿಕಾರಿಗಳಿಗೆ ಇವೆಲ್ಲವೂ ಕಣ್ಣಿಗೆ ಕಾಣಿಸುತ್ತಲೇ ಇಲ್ವಾ..? ಎಂಬ ಅನುಮಾನ ಒನ್ ಇಂಡಿಯಾ ವರದಿಯಲ್ಲಿ ಸಿಕ್ಕಿವೆ. ಕೂಡಲೇ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಿ ಸತ್ಯಾಸತ್ಯತೆ ವರದಿ ನೀಡುವ ಜೊತೆಗೆ ಬಡವರ ಅನ್ನದಲ್ಲಿ ದೋಖಾ ಮಾಡುತ್ತಿರುವರಿಗೆ ಸರಿಯಾದ ತನಿಖೆ ಆಗಬೇಕಿದೆ.

English summary
Oneindia Kannada Exposed Indira Canteens Real Situation. The Smell of scandal at the meal offered by Indira Canteen, food quality, staffs behaviour and etc. Read more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X