ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿ ನೆನಪಲ್ಲಿ ಪ್ಯಾಪಿಲಾನ್ ಸರಣಿ ಕೃತಿ ಬಿಡುಗಡೆ

By Mahesh
|
Google Oneindia Kannada News

ಬೆಂಗಳೂರು, ಸೆ.12 : ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಸ್ಮರಣಾರ್ಥ ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಹಾಗೂ ಹಲವಾರು ಸಂಘ ಸಂಸ್ಥೆಗಳು ವಿಶಿಷ್ಟವಾಗಿ ನಗರದ ಚಿತ್ರಕಲಾ ಪರಿಷತ್ ನಲ್ಲಿ ನಡೆಸಿದ್ದಾರೆ. ಈ ವಾರದ ಅಂತ್ಯಕ್ಕೆ ಈ ಕಾರ್ಯಕ್ರಮಗಳು ಕೊನೆಗೊಳ್ಳಲಿದ್ದು, ಕೆಂಜಿಗೆ ಅವರ ಸಂಗ್ರಹಾನುವಾದ ಪ್ಯಾಪಿಲಾನ್ ಸರಣಿಯ ಅಂತಿಮ ಕೃತಿಯ ಬಿಡುಗಡೆ ಕಾರ್ಯಕ್ರಮ ನಿಗದಿಯಾಗಿದೆ.

ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ನೆನಪಿನಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಅಪರೂಪದ ಕೀಟಗಳು ಹಾಗೂ ಆರ್ಕಿಡ್ ಗಳ ಪ್ರದರ್ಶನ ಜಾರಿಯಲ್ಲಿದೆ. ಕಲಾಗ್ರಾಮದಲ್ಲಿ ತೇಜಸ್ವಿ ಅವರ ಕೃತಿಗಳನ್ನು ಆಧರಿಸಿದ ನಾಟಕ ಪ್ರದರ್ಶನ ನಡೆಸಲಾಗಿದೆ. ಇದರ ಭಾಗವಾಗಿ ಭಾನುವಾರ ಸೆ.14ರಂದು ಪ್ರದೀಪ್ ಕೆಂಜಿಗೆ ಅವರು ಬರೆದಿರುವ ಪ್ಯಾಪಿಲಾನ್ ಸರಣಿಯ ಅಂತಿಮ ಕೃತಿ ಬಾಜಿ ಲೋಕಾರ್ಪಣೆಗೊಳ್ಳಲಿದೆ. ಪ್ಯಾಪಿಲಾನ್ ಸರಣಿಯ ಮೊದಲೆರಡು ಕೃತಿಗಳನ್ನು ತೇಜಸ್ವಿ ಹಾಗೂ ಕೆಂಜಿಗೆ ಅವರು ಇಬ್ಬರೂ ಸಂಗ್ರಹಾನುವಾದ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ಕಾರ್ಯಕ್ರಮದ ವಿವರ:
ಕೃತಿ: ಬಾಜಿ, ಪ್ಯಾಪಿಲಾನ್ ಸರಣಿ 3, ಮೂಲ: ಹೆನ್ರಿ ಶರಾರೇ, ಅನುವಾದ: ಪ್ರದೀಪ್ ಕೆಂಜಿಗೆ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್, ಮಲ್ಲೇಶ್ವರ, ಬೆಂಗಳೂರು
ದಿನಾಂಕ/ಸಮಯ: ಸೆ.14 ಭಾನುವಾರ, ಬೆಳಗ್ಗೆ 11 ಗಂಟೆ
ಉಪಸ್ಥಿತಿ: ಸುರೇಂದ್ರನಾಥ್, ರಂಗಕರ್ಮಿ
ಡಾ. ಬೆಳವಾಡಿ, ಕೀಟ ತಜ್ಞ
ಡಾ. ಚಂದ್ರಶೇಖರಯ್ಯ, ಆರ್ಕಿಡ್ ತಜ್ಞ

Pradeep Kenjige

ಪ್ಯಾಪಿಲಾನ್ ಬಗ್ಗೆ: (ಸರಿಯಾದ ಉಚ್ಚಾರ ಪ್ಯಾಪಿಯೋನ್) ಜಗತ್ತಿನ ಮಹೋನ್ನತ ಸಾಹಸ ಕತೆ. ಆನೇಕ ಸ್ತರಗಳಲ್ಲಿ ಇದು ಇಪ್ಪನೆಯ ಶತಮಾನದ ನಾಗರೀಕತೆಯ ವಿಶ್ವರೂಪದರ್ಶನ ಮಾಡಿಸುವುದರಿಂದ ಆ ಶತಮಾನದ ಪ್ರಾತಿನಿಧಿಕ ಕೃತಿ ಎಂದೂ ಕರೆಯಬಹುದು. ಮೂಲತಃ ಸ್ವಾತಂತ್ರ್ಯಕ್ಕಾಗಿ ಮನುಷ್ಯನೊಬ್ಬನ ಅದಮ್ಯ ಹೋರಾಟದ ಸತ್ಯ ಕತೆ.

ತಾನು ಮಾಡಿರದ ತಪ್ಪಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಪ್ಯಾಪಿ, ದೇಶದಿಂದ ನೂರಾರು ಮೈಲಿ ದೂರದ ಫ್ರೆಂಚ್ ಗಯಾನ ದ್ವೀಪಗಳಲ್ಲಿನ ಸೆರೆಮನೆಗೆ ಸಾಗಹಾಕಲ್ಪಡುತ್ತಾನೆ. ಅಲ್ಲಿಂದ ಪ್ರಾರಂಭವಾಗುತ್ತದೆ, ಅಮಾನವೀಯ ವ್ಯವಸ್ಥೆಯ ವಿರುದ್ಧ, ಸ್ವಾತಂತ್ರ್ಯ ಬದುಕಿನೆಡೆಗಿನ ಅವನ ಪಲಾಯನದ ಕತೆ.

ಒಂದಲ್ಲಾ, ಎರಡಲ್ಲಾ ಹದಿಮೂರು ವರ್ಷಗಳ ಎಂಟು ವಿಫಲ ಯತ್ನಗಳ ಅತ್ಯದ್ಭುತ ರೋಚಕ ಸಾಹಸಯಾನ. ಕೊನೆಗೂ ಗೋಣಿಚೀಲದಲ್ಲಿ ತೆಂಗಿನಕಾಯಿ ತುಂಬಿ, ಅದರ ಮೇಲೆ ಸವಾರಿ ಮಾಡುತ್ತಾ, ಸಾಗರದಲ್ಲಿ ನೂರಾರು ಮೈಲಿ ಹೋಗಿ ತಪ್ಪಿಸಿಕೊಂಡು ವೆನುಜವೇಲಾ ದೇಶ ತಲುಪುತ್ತಾನೆ.

ಅವನ ಮುಂದುವರಿದ ಸಾಹಸಮಯ ಬದುಕಿನ ಚಿತ್ರಣ 'ಬಾಜಿ', ಹಣ ಗಳಿಸುವ, ಗೌರವಾನ್ವಿತ ಬದುಕು ಕಟ್ಟಿಕೊಳ್ಳುವ ತನ್ನ ಕನಸನ್ನು ನೆನಪಿಸಿಕೊಳ್ಳುವ ಬರದಲ್ಲಿ ಪ್ಯಾಪಿಯೋನ್ ಮತ್ತೊಮ್ಮೆ ಸಾಹಸಗಳ ಸರಣಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. ಕಳ್ಳರ, ಸುಳ್ಳರ, ಜೂಜುಕೋರರ, ನಿಧಿ ಶೋಧಕರ, ರೋಚಕ ಪ್ರಚಂಚವನ್ನು ಪ್ರವೇಶಿಸುತ್ತಾನೆ. ಹೋರಾಟ ಹೊರಜಗತ್ತಿನೊಂದಿಗೆ ಮಾತ್ರ ಅಲ್ಲಾ; ತನ್ನೊಳಗೇ ಹುದುಗಿದ್ದ 'ಸೇಡು' ಎಂಬ ಮೃಗದ ಜೊತೆಯೂ ಇದೆ. ಸಕಾರಾತ್ಮಕ ಸಕ್ರಿಯ ಮನೋಭಾವಕ್ಕೆ ಅತ್ಯುತ್ತಮ ಉದಾಹರಣೆ 'ಬಾಜಿ'

ಪ್ರದೀಪ್ ಕೆಂಜಿಗೆ ಬಗ್ಗೆ: ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅವರು ಅಮೆರಿಕದ ಪ್ರಸಿದ್ಧ ವಿಶ್ವವಿದ್ಯಾಲಯದಿಂದ ಪರಿಸರವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆರಿಜೋನಾದ ಮರಳುಗಾಡಿನಲ್ಲಿ ಬುಡಕಟ್ಟು ಜನಾಂಗದೊಡನೆ ಕೆಲಸ ಮಾಡಿದ ಅನುಭವ ಪ್ರದೀಪ್ ಅವರಿಗಿದೆ.

ಪಶ್ಚಿಮ ಘಟ್ಟಗಳ ಜೀವ ವೈವಿಧ್ಯತೆ ಹಾಗೂ ಅದರ ಮೇಲೆ ಕ್ರಿಮಿನಾಶಕಗಳ ದುಷ್ಪರಿಣಾಮಗಳ ಅಧ್ಯಯನದಲ್ಲಿ ಪಿಎಚ್ ಡಿ ಪಡೆದಿದ್ದಾರೆ. ಪ್ರಸ್ತುತ ಕೆಫೆ ಕಾಫಿ ಡೇಯಲ್ಲಿ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪೂರ್ಣಚಂದ್ರ ತೇಜಸ್ವಿ ಅವರ ಒಡನಾಡಿಯಾಗಿರುವ ಪ್ರದೀಪ್ ಅವರು ತೇಜಸ್ವಿ ಅವರೊಟ್ಟಿಗೆ ಪ್ಯಾಪಿಯೋನ್ ಕೃತಿಯ ಮೊದಲೆರಡು ಭಾಗವನ್ನು ಸಂಗ್ರಹಾನುವಾದ ಮಾಡಿದ್ದರು. ಜೊತೆಗೆ ವಿಸ್ಮಯ ಮಾಲಿಕೆಯಲ್ಲಿ ತೇಜಸ್ವಿ ಅವರೊಂದಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವನ್ನು ಪಡೆದಿದ್ದಾರೆ. ಬರ್ಮುಡಾ ಟ್ರಯಾಂಗಲ್, ಅದ್ಭುತ ಯಾನ, ಹೆಬ್ಬಾವಿನೊಡನೆ ಹೋರಾಟ ಇವರ ಇನ್ನಿತರ ಕೃತಿಗಳು.

English summary
BAAJI, a translation by Pradeep Kenjige is releasing on Sept.14, Sunday, 11am, at Chitrakala Parishat, Bengaluru. This is the 3rd and last part of great adventure autobiography "Papillon". Pradeep co-authored the earlier 2 volumes with KP Poornachandra Tejaswi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X