ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳಾ ಕೌನ್ಸಿಲರ್ ಗಳಿಗೆ ಬಿಪ್ಯಾಕ್ ನಿಂದ ವರ್ಕ್ ಶಾಪ್

By Mahesh
|
Google Oneindia Kannada News

ಬೆಂಗಳೂರು, ಡಿ.22: ಬೆಂಗಳೂರಿನ ಮಹಿಳಾ ಕಾರ್ಪೊರೇಟರ್ ಗಳಿಗೆ ಬಿಬಿಎಂಪಿ ಆಡಳಿತದ ಬಗ್ಗೆ ತಿಳಿ ಹೇಳುವ ಕಾರ್ಯಾಗಾರವನ್ನು ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿಪ್ಯಾಕ್)ಇತ್ತೀಚೆಗೆ ಆಯೋಜಿಸಿತ್ತು. ಮಹಿಳಾ ಸದಸ್ಯರು ತಮ್ಮ ವಾರ್ಡ್ ಗಳಲ್ಲಿ ಶಕ್ತಿಯುತ ದೃಷ್ಟಿಕೋನದಿಂದ ಕಾರ್ಯಕ್ರಮವನ್ನು ಕೈಗೊಳ್ಳಲು ಈ ಕಾರ್ಯಾಗಾರ ನೆರವಾಗಲಿದೆ ಎಂದು ಬಿಪ್ಯಾಕ್ ನಿರೀಕ್ಷೆ ಇಟ್ಟುಕೊಂಡಿದೆ.

ಬೆಂಗಳೂರು ಮಹಾನಗರ ಪಾಲಿಕೆಗಾಗಿ ನಡೆದ ಚುನಾವಣೆಗಳಲ್ಲಿ ಶೇ 52ರಷ್ಟು ಮಹಿಳಾ ಸದಸ್ಯರು ಆಯ್ಕೆಯಾಗಿರುವುದು ಇಡೀ ದೇಶವೇ ಹೆಮ್ಮೆ ಪಡುವಂಥ ಸಂಗತಿ ಎಂದು ಬಿಪ್ಯಾಕ್ ನ ವ್ಯವಸ್ಥಾಪಕ ಟ್ರಸ್ಟಿ ಸಿಇಒ, ರೇವತಿ ಅಶೋಕ್ ಹೇಳಿದರು. [ಬೆಂಗಳೂರು ಶಾಸಕರ ಸಾಧನೆ ಸಮೀಕ್ಷೆ ವರದಿ]

B.PAC organised a meeting of Women BBMP Corporators for a Better Tomorrow

ಡಾ. ಕಿರಣ್ ಮಜುಂದಾರ್ ಶಾ- ಬಿಪ್ಯಾಕ್ ಅಧ್ಯಕ್ಷೆ: ಬಿ ಕ್ಲಿಪ್ ಕಾರ್ಯಕ್ರಮದ ಮೂಲಕ ಸುಮಾರು 150 ನಾಗರಿಕರನ್ನು ಕಾರ್ಪೊರೇಟರ್ ಆಗುವ ಮಟ್ಟಕ್ಕೆ ತಯಾರಿ ಮಾಡಿದ್ದೇವೆ.

ಬಿಬಿಎಂಪಿಯ ಜ್ವಲಂತ ಸಮಸ್ಯೆಗಳ ಬಗ್ಗೆ ಬಿಬಿಎಂಪಿ ಸದಸ್ಯರ ಜೊತೆ ಈಗಾಗಲೇ ಒಂದು ಸುತ್ತಿನ ಸಂವಾದ ನಡೆಸಲಾಗಿದೆ. ಉತ್ತಮ ಆಡಳಿತ ಹಾಗೂ ಶಕ್ತಿಯುತ ಅಧಿಕಾರ ಚಲಾಯಿಸುವುದರಲ್ಲಿ ಮಹಿಳಾ ಕಾರ್ಪೊರೇಟರ್ ಗಳು ಮುಂದಾಗಬೇಕು ಎಂದರು.

ಮಾಜಿ ಸಚಿವೆ ಲೀಲಾದೇವಿ ಆರ್ ಪ್ರಸಾದ್, ಬಿ.ಟಿ ಲಲಿತಾ ನಾಯಕ್ ಅವರು ಯುವ ಮಹಿಳಾ ಕಾರ್ಪೊರೇಟರ್ ಗಳನ್ನು ಉದ್ದೇಶಿಸಿ ಮಾತನಾಡಿದರು.
ಇತಿಹಾಸಕಾರ ಸುರೇಶ್ ಮೂನ: ಸ್ಥಳದ ಮಹತ್ವ, ಇತಿಹಾಸಗಳ ಮೂಲಕ ಪೀಳಿಗೆಗಳನ್ನು ಬೆಸೆಯುವ ಕಾರ್ಯ ಆಗಬೇಕಿದೆ. ವಾರ್ಡ್ ಗಳ ಮಟ್ಟದಲ್ಲಿ ಐತಿಹಾಸಿಕ ಕುರುಹುಗಳನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಸಿಗಬೇಕಿದೆ ಎಂದರು.

ನಿತಿನ್ ಪೈ, ತಕ್ಷಶೀಲ ಇನ್ಸ್ಟಿಟ್ಯೂಟ್: ಸರಿಯಾದ ಯೋಜನೆ, ನಿರ್ವಹಣೆ ಹಾಗೂ ಅನುಷ್ಠಾನ ಹಾಗೂ ಪ್ರತಿ ಕಾರ್ಯದ ದಾಖಲೀಕರಣ ಅಗತ್ಯ. ಯಶಸ್ವಿ ವಾರ್ಡ್ ಗಳ ಅಭಿವೃದ್ಧಿ ಯೋಜನೆಯನ್ನು ಇತರೆ ವಾರ್ಡ್ ಗಳಲ್ಲಿ ಅನುಷ್ಠಾನಗೊಳಿಸುವ ಸವಾಲು ಸ್ವೀಕರಿಸಬೇಕು.

ಕರ್ನಾಟಕ ಮಹಿಳಾ ಆಯೋಗದ ಮುಖ್ಯಸ್ಥೆ ಸಿ ಮಂಜುಳಾ, ಮಾಜಿ ಕಾರ್ಪೊರೇಟರ್ ಸಿ ಲತಾ ನರಸಿಂಹ ಮೂರ್ತಿ ಮುಂತಾದವರು ತಮ್ಮ ಅನುಭವ ಹಂಚಿಕೊಂಡರು.

English summary
B.PAC recently organised a meeting of Women BBMP Corporators for a Better Tomorrow. Program was organised to celebrate the historic representation of women leaders of 52% in BBMP Council.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X