ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಝಾನ್ ವರ್ಸಸ್ ಹನುಮಾನ್ ಚಾಲೀಸ ವಿವಾದ: ಧ್ವನಿವರ್ಧಕ ಶಬ್ದ ಮಿತಿ ಎಷ್ಟು?

|
Google Oneindia Kannada News

ಬೆಂಗಳೂರು, ಮೇ 9 : ಹಿಜಾಬ್‌ನಿಂದ ಶುರುವಾದ ವಿವಾದ ಇದೀಗ ಮುಸ್ಲಿಮರ ಅಝಾನ್‌ಗೆ ಬಂದು ನಿಂತಿದೆ. ಅಝಾನ್ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಹಿಂದೂ ಪರ ಮುಖಂಡರು ಒತ್ತಾಯಿಸುತ್ತಿದ್ದಾರೆ. ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಮುಂದಿಟ್ಟುಕೊಂಡು ಮುಸ್ಲಿಂ ಮುಖಂಡರು ಅಝಾನ್‌ಗೆ ಯಾವುದೇ ಅಡ್ಡಿಯಿಲ್ಲ ಎಂದಿದ್ದಾರೆ. ಇದರ ನಡುವೆ ಅಝಾನ್ V/s ಸುಪ್ರಭಾತ ಅಭಿಯಾನ ಹನುಮಾನ್ ಚಾಲೀಸಾ ಜೋರಾಗಿದೆ.

ಧ್ವನಿವರ್ಧಕ ಸಂಪೂರ್ಣ ನಿಷೇಧಕ್ಕೆ ಆಗ್ರಹ!

ರಾಜ್ಯದಲ್ಲಿ ಒಂದರ ಮೇಲೆ ಮತ್ತೊಂದು ವಿವಾದ ಹುಟ್ಟಿಕೊಳ್ಳುತ್ತಲೇ ಇದೆ.‌ ಹಿಜಾಬ್‌ನಿಂದ ಶುರುವಾದ ಈ ವಿವಾದಗಳ ಓಟ ಸದ್ಯಕ್ಕೆ ಮುಸಲ್ಮಾನರ ಅಝಾನ್‌ನ ಧ್ವನಿವರ್ಧಕಕ್ಕೆ ಬಂದು ನಿಂತಿದೆ. ಯುಗಾದಿಯ ಹೊಸತಡ್ಕು ಸಂದರ್ಭದಲ್ಲಿ ಹಲಾಲ್ ಬಾಯ್ಕಾಟ್ ಅಭಿಯಾನ ಕೈಗೊಂಡಿದ್ದ ಹಿಂದೂಪರ ಸಂಘಟನೆಗಳು ಅಝಾನ್ ಮೈಕ್ ನಿಷೇಧಕ್ಕೆ ಆಗ್ರಹ ಮುಂದಿಟ್ಟಿದ್ದವು. ಇದು ಈಗ ಮತ್ತೊಂದು ಸುತ್ತಿನ ಆಕ್ರೋಶ ಭುಗಿಲೇಳುವಂತೆ ಮಾಡಿದೆ.

ಮೇ 4ರಂದು ಆಜಾನ್ ಕೊಡಲು ಧ್ವನಿವರ್ಧಕ ಬಳಸಿದರೆ..: ರಾಜ್ ಠಾಕ್ರೆ ಎಚ್ಚರಿಕೆಮೇ 4ರಂದು ಆಜಾನ್ ಕೊಡಲು ಧ್ವನಿವರ್ಧಕ ಬಳಸಿದರೆ..: ರಾಜ್ ಠಾಕ್ರೆ ಎಚ್ಚರಿಕೆ

ಈಗಾಗಲೇ ಹಿಂದೂ ಪರ ಮುಖಂಡರು ಅಝಾನ್ ಕೂಗುವ ಧ್ವನಿವರ್ಧಕಕ್ಕೆ ಅವಕಾಶ ಕೊಡಬಾರದು. "ಆಝಾನ್ ಧ್ವನಿವರ್ಧಕ ತೆರವಿಗೆ ಕೊಟ್ಟಿದ್ದ ಗಡುವು ಮುಗಿದಿದೆ ಹೀಗಾಗಿ ಓಂ ಕಾರದ ಮೂಲಕ ಹನುಮಾನ್ ಚಾಲೀಸ ಮೊಳಗಿಸಿದ್ದೇವೆ. ನಮ್ಮ ದೇವಾಲಯದಲ್ಲಿ ಭಕ್ತಿಗೀತೆ, ಭಜನೆಗೆ ಸ್ವಾತಂತ್ಯವಿಲ್ಲವೇ, ನಾವು ಯಾವ ದೇಶದಲ್ಲಿದ್ದೇವೆ. ಬೆಂಗಳೂರಿನಲ್ಲಿ ನಮ್ಮ ಕಾರ್ಯಕರ್ತರನ್ನು ಬಂಧಿಸಲಾಗಿದೆ, ಇದನ್ನು ಖಂಡಿಸುತ್ತೇನೆ'' ಎಂದು ಮೈಸೂರಿನಲ್ಲಿ ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ

Azaan vs Hanuman Chalisa Row: Hindu and Muslim Leaders on What kind of loudspeaker can be used

ಮುಸ್ಲಿಂ ಧರ್ಮಗುರು ಮೌಲಾನಾ ಮಖ್ಸೂದ್ ಇಮ್ರಾನ್ ಪ್ರತಿಕ್ರಿಯೆ:

ಇನ್ನು ಈ ಬಗ್ಗೆ ಮಾತನಾಡಿದ ಮುಸ್ಲಿಂ ಧರ್ಮಗುರು ಮೌಲಾನಾ ಮಖ್ಸೂದ್ ಇಮ್ರಾನ್, "ಸುಪ್ರೀಂಕೋರ್ಟ್ ಈಗಾಗಲೇ ಮಸೀದಿ, ಮಂದಿರ, ಚರ್ಚ್, ಗುರುದ್ವಾರಕ್ಕೆ ಸೇರಿ ಒಂದು ಆದೇಶ ನೀಡಿದೆ. ಡಿಬಿಎಸ್ ನಿಯಂತ್ರಣ ಮಾಡಿಕೊಂಡು ಮೈಕ್ ಬಳಸಿಕೊಳ್ಳಲು ಅವಕಾಶವಿದೆ. ಈಗಾಗಲೇ ಕರ್ನಾಟಕ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಈ ಬಗ್ಗೆ ಮಾಹಿತಿ ಕಲೆಹಾಕಿದೆ. ನಾವು ಧ್ವನಿ ನಿಯಂತ್ರಣ ಮಾಡುವ ಡಿವೈಸ್ ಅಳವಡಿಸಿದ್ದೇವೆ. ಅದನ್ನು ಡಿಜಿಪಿಗೆ ಡೆಮೋ ಮಾಡಿ ತೋರಿಸಿದ್ದೇವೆ. ಬೆಂಗಳೂರಿನಲ್ಲಿ ಮೊದಲು ಹೈರೆಜ್ ಬಿಲ್ಡಿಂಗ್ ಇರಲಿಲ್ಲ. ಅವಾಗ ಅಷ್ಟೊಂದು ತೊಂದರೆ ಆಗಿರಲಿಲ್ಲ.‌ ಯಾರು ಹೈರೇಜ್ ಬಿಲ್ಡಿಂಗ್ ನಲ್ಲಿ ಇದ್ದಾರೆ ಅವರಿಗೆ ಜಾಸ್ತಿ ತೊಂದರೆ ಆಗ್ತಿದೆ ನಮ್ಮ ಧರ್ಮದಲ್ಲಿ ಯಾರಿಗೆ ತೊಂದರೆ ಕೊಡುವ ಅವಕಾಶವಿಲ್ಲ. ಅದಕ್ಕೆ ನಾವೇ ಮುಂದೆ ಬಂದು ಡಿವೈಸ್ ರೆಡಿ ಮಾಡಿದ್ದೇವೆ'' ಎಂದರು.

Azaan vs Hanuman Chalisa Row: Hindu and Muslim Leaders on What kind of loudspeaker can be used

ಯಾವ ಪ್ರಮಾಣದಲ್ಲಿ ಶಬ್ದ ಬರುವಂತೆ ಧ್ವನಿ ವರ್ಧಕ ಬಳಸಿಕೊಳ್ಳಬಹುದು?

ಕರ್ನಾಟಕ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ ಬೆಳಗ್ಗೆ 10 ರಿಂದ ಸಂಜೆ 6 ವರೆಗೆ ಇಂತಿಷ್ಟೇ ಡೆಸಿಬಲ್ ಹಾಗೂ ರಾತ್ರಿ 10 ರಿಂದ ಬೆಳಗ್ಗೆ 6 ರವರಗೆ ಇಂತಿಷ್ಟೇ ಎಂದು ನಿಗದಿ ಪಡಿಸಲಾಗಿದೆ. ಅದರನ್ವಯ ಶಬ್ದ ಬರುವಂತೆ ನೋಡಿಕೊಳ್ಳಬೇಕಿದೆ.

'ಶಾಸಕರ ಪರವಾಗಿ ಧ್ವನಿ ಎತ್ತದ ಹೇಡಿ ನಾಯಕ...' ಅಖಿಲೇಶ್ ವಿರುದ್ಧ ಜಾವೇದ್ ಕಿಡಿ 'ಶಾಸಕರ ಪರವಾಗಿ ಧ್ವನಿ ಎತ್ತದ ಹೇಡಿ ನಾಯಕ...' ಅಖಿಲೇಶ್ ವಿರುದ್ಧ ಜಾವೇದ್ ಕಿಡಿ

Azaan vs Hanuman Chalisa Row: Hindu and Muslim Leaders on What kind of loudspeaker can be used

* ಕೈಗಾರಿಕಾ ವಲಯ 75 ಡೆಸಿಬಲ್ 70 ಡೆಸಿಬಲ್

* ವಾಣಿಜ್ಯ ವಲಯ 65 ಡೆಸಿಬಲ್ 55 ಡೆಸಿಬಲ್

*ನಿಶಬ್ದ ವಲಯ 50 ಡೆಸಿಬಲ್ 40 ಡೆಸಿಬಲ್

* ವಸತಿ ವಲಯ 55 ಡೆಸಿಬಲ್ 45 ಡೆಸಿಬಲ್

ಕೈಗಾರಿಕಾ ವಲಯದಲ್ಲಿ ಬೆಳಗ್ಗೆ 75 ಡೆಸಿಬಲ್, ರಾತ್ರಿ ವೇಳೆ 70 ಡೆಸಿಬಲ್ ನಿಗದಿ ಮಾಡಲಾಗಿದೆ. ವಾಣಿಜ್ಯ ವಲಯದಲ್ಲಿ ಬೆಳಗ್ಗೆ 65 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ಹಾಗೂ ನಿಶಬ್ದ ವಲಯದಲ್ಲಿ ಬೆಳಗ್ಗೆ 50 ಡೆಸಿಬಲ್, ರಾತ್ರಿ ವೇಳೆ 40 ಡೆಸಿಬಲ್ ಮತ್ತು ವಸತಿ ವಲಯ ವಲಯದಲ್ಲಿ ಬೆಳಗ್ಗೆ 55 ಡೆಸಿಬಲ್, ರಾತ್ರಿ ವೇಳೆ 55 ಡೆಸಿಬಲ್ ಫಿಕ್ಸ್ ಮಾಡಲಾಗಿದೆ.

ಒಂದೊಂದು ರೀತಿಯಲ್ಲಿ ನಿಗದಿತ ಡೆಸಿಬಲ್ ನಷ್ಟು ಪ್ರಮಾಣದಲ್ಲಿ ಶಬ್ಧ ಮಾಡುವಂತ ಅವಕಾಶವನ್ನು ನೀಡಲಾಗಿದೆ. ಇದರ ಅನ್ವಯ ಶಬ್ಧವನ್ನು ಮಾಡಬಹುದಾಗಿದೆ. ಇದೀಗ ಇದರ ಹೊರತಾಗಿಯೂ ಅಝಾನ್ ಮೈಕ್ ವಿವಾದಕ್ಕೀಡಾಗಿದ್ದು, ಮಸೀದಿಗಳಲ್ಲಿ ಸಂಪೂರ್ಣವಾಗಿ ಮೈಕ್ ನಿಷೇಧಿಸುವಂತೆ ಹಿಂದೂ ಪರ ಸಂಘಟನೆಗಳು ಆಗ್ರಹಿಸಿ ಹನುಮಾನ್ ಚಾಲೀಸ ಭಜನೆಯನ್ನು ಮಾಡುತ್ತಿದೆ. ಇದು ಸಂಘರ್ಷಕ್ಕೆ ಕಾರಣವಾಗುವ ಮುನ್ನ ಸರ್ಕಾರ ಸೂಕ್ತ ರೀತಿಯಲ್ಲಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕಿದೆ.

Recommended Video

Livingstone ಬಗ್ಗೆ Prasidh Krishna ಅಸಮಾಧಾನ | Oneindia Kannada

English summary
Azaan vs Hanuman Chalisa Controversy: Hindu and Muslim Leaders says What kind of loudspeaker can be used. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X