ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಹೊಸಕೆರೆಹಳ್ಳಿ ನೈಸ್ ರಸ್ತೆಯಲ್ಲಿ ನಡೆದ ಘಟನೆ

|
Google Oneindia Kannada News

ಬೆಂಗಳೂರು, ಜ 16: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅಯ್ಯಪ್ಪ ಮಾಲಾಧಾರಿಗಳು ರಕ್ಷಿಸಿದ ಘಟನೆ, ನಗರದ ಹೊಸಕೆರೆಹಳ್ಳಿ ಫ್ಲೈ ಓವರ್ ನಲ್ಲಿ ನಡೆದಿದೆ.

ನೈಸ್ ರಸ್ತೆಯ ಪಿಇಎಸ್ ಕಾಲೇಜು ಬಳಿಯ ಮೇಲ್ಸೇತುವೆಯಿಂದ ಕೆಳಗೆ ಹಾರಲು ವ್ಯಕ್ತಿಯೊಬ್ಬ ಪ್ರಯತ್ನಿಸುತ್ತಿದ್ದ. ಆ ವೇಳೆ, ಇಪ್ಪತ್ತಕ್ಕೂ ಹೆಚ್ಚು ಮಾಲಾಧಾರಿಗಳು ವ್ಯಾನ್ ನಲ್ಲಿ ಅದೇ ದಾರಿಯಲ್ಲಿ ಶಬರಿಮಲೆಗೆ ತೆರಳುತ್ತಿದ್ದರು.

ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!

ಇದನ್ನು ಗಮನಿಸಿದ ಮಾಲಾಧಾರಿಗಳು ಆತನನ್ನು ಹರಸಾಹಸಪಟ್ಟು ರಕ್ಷಿಸಿ, ಬ್ಯಾಟರಾಯನಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಈತನ ವಿಚಾರಣೆ ನಡೆಸುತ್ತಿದ್ದಾರೆ.

Ayyappa Devotees Saved A Man In Bengaluru From Committing Suicide

ಮೊದಲು ಐದು ನಿಮಿಷ ಮಾತಿನ ಮೂಲಕ ಆತನನ್ನು ಸಮಾಧಾನ ಪಡಿಸಲು ಇವರು ಪ್ರಯತ್ನಿಸಿದರೂ, ಅದಕ್ಕೆ ಒಪ್ಪದೇ ಅವನು ಕೆಳಗೆ ಹಾರಲು ಪದೇ ಪದೇ ಪ್ರಯತ್ನಿಸುತ್ತಿದ್ದರಿಂದ, ಬಲವಂತವಾಗಿ ಆತನನ್ನು ಎಳೆದು ರಕ್ಷಿಸಿದ್ದಾರೆ.

ಕೆಲವೇ ನಿಮಿಷಗಳ ಅಂತರದಲ್ಲಿ ಈ ಘಟನೆ ನಡೆದಿದ್ದು, ಅಯ್ಯಪ್ಪ ಮಾಲಾಧಾರಿಗಳು ಅಲ್ಲಿ ಹಾದುಹೋಗದೇ ಇದ್ದಲ್ಲಿ ಈತ ಆತ್ಮಹತ್ಯೆಗೆ ಮಾಡಿಕೊಳ್ಳಲು ಮುಂದಾಗುತ್ತಿದ್ದ.

ಬನಶಂಕರಿ ಮೂರನೇ ಹಂತದಿಂದ, ಇಪ್ಪತ್ತು ಜನರ ಭಕ್ತರು, ಶಬರಿಮಲೆಗೆ ತೆರಳುವ ವೇಳೆ, ಈತನನ್ನು ರಕ್ಷಿಸಿ ಸಾರ್ಥಕತೆಯ ಕೆಲಸವನ್ನು ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದವನು ಸುಮಾರು ನಲವತ್ತು ವರ್ಷದವನಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

English summary
Ayyappa Devotees Saved A Man In Bengaluru From Committing Suicide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X