• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಾಯುಮಾಲಿನ್ಯ ಮಟ್ಟ ಅಳೆಯಿರಿ, ನಾಗರಿಕರಿಗೆ ವಿಜ್ಞಾನ ಮತ್ತು ಜಾಗೃತಿ ಅಭಿಯಾನ

|

ಬೆಂಗಳೂರು, ಏಪ್ರಿಲ್ 30: ಸಿಲಿಕಾನ್ ಸಿಟಿ ಬೆಂಗಳೂರಿನ ಜನತೆ ಮೇಲೆ ಹೊಂದುತ್ತಿರುವ ಕೆಟ್ಟ ವಾಯು ಗುಣಮಟ್ಟ ಮತ್ತು ಅದರಿಂದ ಅವರ ಆರೋಗ್ಯದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕ್ಲೀನ್ ಏರ್ ಪ್ಲಾಟ್‍ಫಾರ್ಮ್ (CAP) ವಿಶಿಷ್ಟವಾದ ಆಂದೋಲನವನ್ನು ಹಮ್ಮಿಕೊಂಡಿದೆ. ಇದರ ಮೂಲಕ ಸಿಎಪಿಯು ಬೆಂಗಳೂರಿನ ವಿವಿಧ ಸ್ಥಳಗಳಲ್ಲಿನ ವಾಯುಮಾಲಿನ್ಯದ ಗುಣಮಟ್ಟ ಮತ್ತು ಅದರಿಂದ ಜನರ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ಅಂಕಿಅಂಶಗಳನ್ನು ಕಲೆ ಹಾಕುತ್ತಿದೆ.

ಈ ಉಪಕ್ರಮದಲ್ಲಿ ಪಾಲ್ಗೊಂಡು ನಗರದ ವಾಯು ಗುಣಮಟ್ಟವನ್ನು ಹೇಗೆ ಉತ್ತಮಪಡಿಸಬಹುದು ಹಾಗೂ ಈ ಮೂಲಕ ಜನರ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಸಂಬಂಧ ಮುಂಬರುವ ತಿಂಗಳುಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು, ಗುಂಪುಗಳನ್ನು ಒಟ್ಟುಗೂಡಿಸಿ ನಾಗರಿಕ-ವಿಜ್ಞಾನ ಚಟುವಟಿಕೆಗಳನ್ನು ಆಯೋಜಿಸುತ್ತಿದೆ.

ಸಿಎಪಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಶ್ ರಂಗನಾಥ್ ಅವರು ಈ ಉಪಕ್ರಮದ ಬಗ್ಗೆ ಮಾಹಿತಿ ನೀಡಿ, ಬೆಂಗಳೂರಿನಲ್ಲಿರುವ ವಾಯು ಗುಣಮಟ್ಟ ಮೇಲ್ನೋಟಕ್ಕೆ ತೃಪ್ತಿಕರವಾಗಿ ಕಂಡರೂ ಆ ಗುಣಮಟ್ಟ ನಗರದ ಮಾಲಿನ್ಯದ ನಿಜವಾದ ಚಿತ್ರಣವನ್ನು ನೀಡುವುದಿಲ್ಲ ಎಂಬುದನ್ನು ಮೊದಲು ಜನರಿಗೆ ತಿಳಿ ಹೇಳಿ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಟ್ಟುಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತದೆ. ಒಳಗಾಗುವಿಕೆಯ ಮಟ್ಟಗಳು ನಾವು ಏನನ್ನು ಉಸಿರಾಡುತ್ತೇವೆ ಎಂಬುದನ್ನು ಸೂಚಿಸುತ್ತವೆ.

ಇದಲ್ಲದೇ, ನಿಮ್ಮ ದೇಹವು ಎದುರಿಸುತ್ತಿರುವ ಮಾಲಿನ್ಯದ ನಿಜವಾದ ಮಟ್ಟವನ್ನು ತಿಳಿಸುತ್ತವೆ. ಆಗ ಜನರು ತಾವು ಉಸಿರಾಡುವ ಗಾಳಿಯಲ್ಲಿ ಎಷ್ಟರ ಮಟ್ಟಿಗೆ ಮಾಲಿನ್ಯ ತುಂಬಿದೆ ಮತ್ತು ಅದರಿಂದ ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ ಎಂಬುದನ್ನು ಅರಿತುಕೊಳ್ಳಲಿದ್ದಾರೆ. ಇಂತಹ ಮಾಹಿತಿಗಳನ್ನು ನೀಡಲೆಂದೇ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೂಲಕ ಜನರು ವಾಯು ಮಾಲಿನ್ಯದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಯಾವ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲಿದ್ದಾರೆ. ಇಂತಹ ಜಾಗೃತಿ ಮೂಡಿಸುವುದು ಬಹಳ ಮುಖ್ಯದ ಕೆಲಸ ಎಂದು ನಾವು ಭಾವಿಸಿದ್ದೇವೆ'' ಎಂದು ತಿಳಿಸಿದರು.

#WhatAreYouBreathing ಎಂಬ ಈ ಅಭಿಯಾನದಲ್ಲಿ ಸೇವನೆ ಮಾಡಿದ ವಾಯುವಿನ ಪ್ರಮಾಣ ಮತ್ತು ಅದರಲ್ಲಿನ ಮಾಲಿನ್ಯಕಾರಕ ಅಂಶಗಳನ್ನು ಅಳೆಯಲು ಮತ್ತು ಜನರಲ್ಲಿ ಆ ಬಗ್ಗೆ ಸೂಕ್ತ ಮಾಹಿತಿ ನೀಡಿ ಜಾಗೃತಿ ಮೂಡಿಸಲು ನಾವು ಮೂರು ವಿಧಾನಗಳನ್ನು ಅನುಸರಿಸುತ್ತಿದ್ದೇವೆ.

ಶಾಲೆಗಳು, ಆಸ್ಪತ್ರೆಗಳು, ಆಟದ ಮೈದಾನಗಳು, ಉದ್ಯಾನವನಗಳು ಮತ್ತು ಸರೋವರಗಳು ಸೇರಿದಂತೆ ಮತ್ತಿತರೆ ಸ್ಥಳಗಳಲ್ಲಿ ನೈಟ್ರೋಜನ್ ಡೈಆಕ್ಸೈಡ್ (NO2) ಹೆಚ್ಚಾಗಿರುತ್ತದೆ. ಈ ಹಾನಿಕಾರಕ ಅಂಶವು ಮನುಷ್ಯನ ದೇಹವನ್ನು ಸೇರುತ್ತಿದೆ. ಈ NO2 ದಿಂದ ಗರ್ಭಿಣಿಯರು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲದೇ, ಇದು ಭ್ರೂಣಗಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ.

ಈ ಪ್ರಚಾರಾಂದೋಲನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಮತ್ತು ಇದರಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಲಾಗಿನ್ ಮಾಡಬಹುದು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
To raise awareness on bad air quality and the impact it has on health, a unique campaign has been launched, which will crowd-source data on the air pollution exposure that various citizens face, at different locations in Bengaluru. The initiative by Clean Air Platform (CAP), invites individuals, organisations and groups to participate in various citizen-science activities in the coming months, which will also help create awareness on exposure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more