ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿನಿಂದ ಅವರೆ ಬೇಳೆ ಮೇಳ : ಸ್ಪೆಷಲ್ ಏನ್ ಗೊತ್ತಾ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ಅವರೆ ಬೇಳೆ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಅದರಿಂದ ಮಾಡುವ ಬಗೆ ಬಗೆಯ ತಿನಿಸುಗಳು ನೆನಪಾಗಿ ಬಾಯಲ್ಲಿ ನೀರೂರಿಸುತ್ತದೆ.

ನಗರದ ವಿವಿಪುರದ ಸಜ್ಜನ್ ರಾವ್ ವೃತ್ತದ ಬಳಿ ಇಂದಿನಿಂದ ಅವರೆ ಬೇಳೆ ಮೇಳ ಆರಂಭವಾಗಲಿದ್ದು, ಜನವರಿ 8ರವರೆಗೆ ನಡೆಯಲಿದೆ. ಪ್ರತಿ ವರ್ಷವೂ ಅವರೆ ಬೇಳೆಯಿಂದ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಲಾಗುತ್ತದೆ, ಈ ಬಾರಿ ಅವರೆ ಬೇಳೆ ಐಸ್‌ಕ್ರೀಂ ಹೊಸ ತಿನಿಸಾಗಿದೆ. ಅವರೆ ಬೇಳೆ ಹೋಳಿಗೆ, ಜಿಲೇನಿ ಹೀಗೆ ಹಲವು ಬಾರಿಯ ತಿನಿಸುಗಳನ್ನು ಪರಿಚಯಿಸಲಾಗಿತ್ತು ಈ ಬಾರಿ ಅವರೆ ಬೇಳೆ ಐಸ್‌ಕ್ರೀಂ ಸೇರ್ಪಡೆಯಾಗಿದೆ.

ವಾಸವಿ ಕಾಂಡಿಮೆಂಟ್ಸ್ ಆಯೋಜಿಸುವ ಈ ಒಟ್ಟು 11 ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ನಾಲಿಗೆಗೆ ಸ್ವಾದಿಷ್ಟ ತಿನಿಸುಗಳನ್ನು ಪರಚಯಿಸಲಿರುವ ಈ ಮೇಳ ಜಾತ್ರೆಯ ರೀತಿ ನಡೆಯಲಿದೆ.

Avare Bele Mela:The Food Fiesta Glorifying Hyacinth Beans

ಮೇಳದಲ್ಲಿ ಬಿಳಿ ಹೋಳಿಗೆ, ಅವರೆ ಕಾಳು ಉಪ್ಪಿಟ್ಟು, ಖಾಲಿ ದೋಸೆ, ಹನಿ ಜಿಲೇಬಿ, ಹಿತಕದ ಅವರೆ ಬೇಳೆ ರೋಲ್, ಅವರೆಕಾಳು ಚಿತ್ರಾನ್ನ, ಅವರೆ ಬೇಳೆ ಮಂಚೂರಿ, ಪುದೀನಾ ಹಿತಕದ ಅವರೆಬೇಳೆ, ಅವಲಕ್ಕಿ ಮಿಕ್ಸ್, ಗೋಡಂಬಿ ಮಿಕ್ಸ್, ಅವರೆಬೇಳೆ ಜಾಮೂನು, ನಿಪ್ಪಟ್ಟು, ಅವರೆಕಾಳು ಪಲಾವ್ ಹೀಗೆ ಬಗೆಬಗೆಯ ತಿನಿಸುಗಳು ಲಭ್ಯವಾಗಲಿವೆ.ಉದ್ಘಾಟನೆ ವೇಳೆ ಅವರೆ ಬೇಳೆ ಪೂರೈಸು 25 ಮಂದಿ ರೈತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

English summary
Avarekai or hyacinth beans are broad beans famous for its versatility. It can be used to make some traditional sweets or even a crunchy mixture. The combinations and recipes made using them are endless! Every year, a food festival honoring the 'avarebele' is held in the famous food street of V.V. Puram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X