ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರ ಬಜೆಟ್ 2021; ಆಟೋ, ಟ್ಯಾಕ್ಸಿ ಚಾಲಕರ ಉಪವಾಸ

|
Google Oneindia Kannada News

ಬೆಂಗಳೂರು, ಫೆಬ್ರವರಿ 01; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಬಜೆಟ್ ದಿನವೇ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

ಸೋಮವಾರ ಸುಮಾರು 10 ಸಾವಿರ ಆಟೋ ಮತ್ತು ಟ್ಯಾಕ್ಸಿ ಚಾಲಕರು ಬೆಂಗಳೂರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದು, ಉಪವಾಸ ಸತ್ಯಾಗ್ರಹವನ್ನು ನಡೆಸಲಿದ್ದಾರೆ. ಕರ್ನಾಟಕ ಚಾಲಕರ ಒಕ್ಕೂಟ ಈ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ.

ಖೋಟಾ ನೋಟು ಜಾಲ ಪತ್ತೆ ಮಾಡಿದ ಆಟೋ ಡ್ರೈವರ್ ಗೆ ಸಲಾಂ! ಖೋಟಾ ನೋಟು ಜಾಲ ಪತ್ತೆ ಮಾಡಿದ ಆಟೋ ಡ್ರೈವರ್ ಗೆ ಸಲಾಂ!

Auto Taxi Drivers Hunger Strike Protest In Budget Day

ವಿಮಾನ ನಿಲ್ದಾಣದ ಟ್ಯಾಕ್ಸಿ ಸಂಘ, ಓಲಾ-ಉಬರ್ ಚಾಲಕರ ಸಂಘ, ಟ್ರಾವೆಲ್ಸ್ ಅಸೋಸಿಯೇಷನ್ ಈ ಪ್ರತಿಭಟನೆಗೆ ಬೆಂಬವನ್ನು ನೀಡಿವೆ. ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಫ್ರೀಡಂ ಪಾರ್ಕ್ ತನಕ ಅರೆ ಬೆತ್ತಲೆ ಮೆರವಣಿಗೆಯನ್ನು ನಡೆಸಲಿದ್ದು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

ಕೇಂದ್ರ ಬಜೆಟ್ 2021; ಮೂರು ಪ್ರಮುಖ ಸವಾಲುಗಳು ಕೇಂದ್ರ ಬಜೆಟ್ 2021; ಮೂರು ಪ್ರಮುಖ ಸವಾಲುಗಳು

ಚಾಲಕರ ಬೇಡಿಕೆಗಳು

* ನಿರ್ದಿಷ್ಟವಾಗಿ ಒಂದೇ ದರ ನಿಗದಿ ಮಾಡುವ ಮೂಲಕ ಅಪ್ಲಿಕೇಶನ್ ಆಧಾರಿತ ಸೇವೆಗಳಿಗಳನ್ನು ನಿಯಂತ್ರಿಸುವುದು.

* ಸರ್ಕಾರ ನಿಗದಿಪಡಿಸಿದ ದರವನ್ನು ಬಿಟ್ಟು ಹೆಚ್ಚು ಅಥವ ಕಡಿಮೆ ದರವನ್ನು ಯಾವುದೇ ಅಪ್ಲಿಕೇಶನ್ ಆಧಾರಿತ ಸೇವೆಗಳಿಗೆ ನೀಡಬಾರದು

ತಿಳಿದುಕೊಳ್ಳಿ: ಕೇಂದ್ರ ಬಜೆಟ್ ಕುರಿತಾದ ಆಸಕ್ತಿದಾಯಕ ವಿಷಯಗಳುತಿಳಿದುಕೊಳ್ಳಿ: ಕೇಂದ್ರ ಬಜೆಟ್ ಕುರಿತಾದ ಆಸಕ್ತಿದಾಯಕ ವಿಷಯಗಳು

* ಖಾಸಗಿ ಫೈನಾನ್ಸ್‌ಗಳು ಚಾಲಕರಿಗೆ ಕಿರುಕುಳವನ್ನು ನೀಡುತ್ತಿವೆ. ಅವುಗಳನ್ನು ನಿಯಂತ್ರಣ ಮಾಡಲು ಕಾನೂನನ್ನು ಮಾರ್ಪಾಡು ಮಾಡುವುದು

* ಸರ್ಕಾರ ಚಾಲಕರಿಗೆ ನೀಡುವ ವಿಮೆ ಅಪಘಾತಕ್ಕೆ ಮಾತ್ರ ಸೀಮಿತವಾಗಿದೆ. ಹೃದಯಾಘಾತ, ಆಕಸ್ಮಿಕ ಮರಣ ಹೊಂದಿದರೂ ನೀಡಬೇಕು

* ಚಾಲಕರಿಗಾಗಿ ನಿಗಮ/ಮಂಡಳಿ ಸ್ಥಾಪನೆಯನ್ನು ತುರ್ತಾಗಿ ಮಾಡುವುದು

* ಚಾಲಕರ ದಿನಾಚರಣೆಯನ್ನು ಸರ್ಕಾರದ ವತಿಯಿಂದ ಮಾಡಲು ದಿನ ನಿಗದಿ ಮಾಡುವುದು

Recommended Video

Union budget 2021 | Budget ಮಂಡಿಸಿದ ಮೊದಲ ಮಹಿಳೆ ಯಾರು ಗೊತ್ತಾ? | Oneindia Kannada

English summary
Auto and taxi drivers of Bengaluru go for hunger strike on February 1, budget day demand to fulfill various demands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X