ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನವರಿ 8, 9 ರಂದು ಆಟೋ ಮುಷ್ಕರ, ಸಂಚಾರ ಸ್ಥಗಿತ?

|
Google Oneindia Kannada News

ಬೆಂಗಳೂರು, ಜನವರಿ 02 : ಆಟೋ ರಿಕ್ಷಾ ಚಾಲಕರ ಐಕ್ಯ ಹೋರಾಟ ಸಮಿತಿ ಎರಡು ದಿನಗಳ ಕಾಲ ಆಟೋ ಮುಷ್ಕರಕ್ಕೆ ಕರೆ ನೀಡಿದೆ. ಮುಷ್ಕರದ ದಿನ ಬೆಂಗಳೂರು ನಗರದಲ್ಲಿ ಆಟೋ ಸಂಚಾರ ಸ್ಥಗಿತವಾಗುವ ಸಾಧ್ಯತೆ ಇದೆ.

ಜನವರಿ 8 ಮಂಗಳವಾರ ಮತ್ತು 9ರ ಬುಧವಾರ ಎರಡು ದಿನಗಳ ಕಾಲ ಮುಷ್ಕರ ನಡೆಸುವುದಾಗಿ ಆಟೋ ರಿಕ್ಷಾ ಚಾಲಕರ ಐಕ್ಯ ಹೋಟಾರ ಸಮಿತಿ ಹೇಳಿದೆ. ಈಗಾಗಲೇ ನಗರದ ಆಟೋಗಳ ಮೇಲೆ ಮುಷ್ಕರದ ಕುರಿತು ಪೋಸ್ಟರ್‌ಗಳನ್ನು ಹಚ್ಚಲಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಪ್ರಯಾಣದರ ಏರಿಕೆಹುಬ್ಬಳ್ಳಿ-ಧಾರವಾಡದಲ್ಲಿ ಆಟೋ ಪ್ರಯಾಣದರ ಏರಿಕೆ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸಲಿರುವ ಆಟೋ ಚಾಲಕರು, ನಗರದ ಫ್ರೀಡಂ ಪಾರ್ಕ್ ನಲ್ಲಿ ಬಹೃತ್ ಪ್ರತಿಭಟನೆ ನಡೆಸಲಿದ್ದಾರೆ. 30 ಸಾವಿರ ಹೊಸ ಆಟೋಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಇದನ್ನು ವಿರೋಧಿಸಿ ಮುಷ್ಕರ ನಡೆಸಲಾಗುತ್ತಿದೆ.

10 ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದ ಆಟೋ ಡ್ರೈವರ್10 ಕಿಮೀ ಚೇಸ್ ಮಾಡಿ ಕೊನೆಗೂ ಕಳ್ಳಿಯರನ್ನು ಹಿಡಿದ ಆಟೋ ಡ್ರೈವರ್

Auto Rickshaw strike on January 8 and 9, 2019

ಶಿವಮೊಗ್ಗ ಆಟೋ ಚಾಲಕರ ಕಿರುಕುಳ ತಪ್ಪಿಸಲು ಬಂತು 'ಆಟೋ ಮಿತ್ರ'ಶಿವಮೊಗ್ಗ ಆಟೋ ಚಾಲಕರ ಕಿರುಕುಳ ತಪ್ಪಿಸಲು ಬಂತು 'ಆಟೋ ಮಿತ್ರ'

ಆಟೋ ಚಾಲಕರ ಬೇಡಿಕೆಗಳು

* 30 ಸಾವಿರ ಹೊಸ ಆಟೋ ರಿಕ್ಷಾ ರಹದಾರಿ ವಿರೋಧಿಸಿ
* ಮೋಟಾರು ವಾಹನ ತಿದ್ದುಪಡಿ ಮಸೂದೆ 2017 ಜಾರಿಗೊಳಿಸದಂತೆ ಒತ್ತಾಯಿಸಿ
* ದುಬಾರಿ ಆರ್ ಟಿಓ ಶುಲ್ಕ ಮತ್ತು ಆಟೋ ವಿಮೆ ಮೊತ್ತ ಏರಿಕೆ ವಿರೋಧಿಸಿ
* ಆಟೋ ರಿಕ್ಷಾ ಚಾಲಕರ ವಸತಿಗೆ ಒತ್ತಾಯಿಸಿ
* 60 ವರ್ಷ ತುಂಬಿದ ಆಟೋ ಚಾಲಕರಿಗೆ ಪಿಂಚಣಿ ನೀಡುವಂತೆ ಆಗ್ರಹ
* ಕಾನೂರು ಬಾಹಿರ ದರಗಳನ್ನು ಪಡೆಯುತ್ತಿರುವ ಓಲಾ ಊಬರ್ ತಿರಸ್ಕರಿಸಲು ಒತ್ತಾಯಿಸಿ

English summary
Auto Rickshaw Chalakara Ikya Horata Samithi called for two days of Auto strike on January 8 and 9, 2019. Auto service may stop in Bengaluru for two days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X