ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೆಟ್ರೋ 40 ನಿಲ್ದಾಣಗಳಲ್ಲಿ ಕ್ಯಾಬ್ ಜತೆಗೆ ಆಟೋರಿಕ್ಷಾ

|
Google Oneindia Kannada News

ಬೆಂಗಳೂರು, ಫೆಬ್ರವರಿ 24: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆಯ ವರೆಗಿನ ಸಂಪರ್ಕ ಕಲ್ಪಿಸಲು ಕ್ಯಾಬ್ ಜತೆಗೆ ಆಟೋರಿಕ್ಷಾ ಸೇವೆ ನೀಡಲು ಬಿಎಂಆರ್ ಸಿಎಲ್ ನಿರ್ಧರಿಸಿದ್ದು, 40 ನಿಲ್ದಾಣಗಳಲ್ಲಿ ಸೇವೆ ಆರಂಭಿಸಲು ಸಿದ್ಧತೆ ನಡೆದಿದೆ.

ಕೊನೆಯ ವರೆಗೆ ಸಂಪರ್ಕಕ್ಕಾಗಿ ಇತ್ತೀಚೆಗೆ 36 ನಿಲ್ದಾಣಗಳಲ್ಲಿ ಬೈಕ್ ಸೇವೆ ಆರಂಭಿಸಲಾಗಿದೆ. ಇದರ ಜತೆಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಹಾಗೂ ಸಮೂಹ ಸಾರಿಗೆಯನ್ನು ಉತ್ತೇಜಿಸಲು ಅಪ್ಲಿಕೇಷನ್ ಆಧಾರಿತ ಸೇವೆ ನೀಡಲು ಟೆಂಡರ್ ಕರೆಯಲಾಗಿದೆ.

ಏಪ್ರಿಲ್ ನಿಂದ 2 ಸ್ಟ್ರೋಕ್ ಆಟೋಗಳು ರಸ್ತೆಗಿಳಿಯುವಂತಿಲ್ಲಏಪ್ರಿಲ್ ನಿಂದ 2 ಸ್ಟ್ರೋಕ್ ಆಟೋಗಳು ರಸ್ತೆಗಿಳಿಯುವಂತಿಲ್ಲ

ಈಗಾಗಲೇ ಕೆಲ ನಿಲ್ದಾಣಗಳಲ್ಲಿ ಓಲಾ, ಊಬರ್ ಸೇವೆ ಲಭ್ಯವಿದೆ. ಈಗ ಹೊಸದಾಗಿ ಎಲ್ಲ 40 ನಿಲ್ದಾಣಗಳಲ್ಲಿ 2 ವರ್ಷಗಳ ಅವಧಿಗೆ ಸೇವೆ ನೀಡಲು ಖಾಸಗಿ ಕಂಪನಿಗಳನ್ನು ಆಹ್ವಾನಿಸಲಾಗಿದೆ.ಕ್ಯಾಬ್ ದರ ಹೆಚ್ಚಿರುವುದರಿಂದ ಹಾಗೂ ಸಮೂಹ ಸಾರಿಗೆಗೆ ಆಟೋ ರಿಕ್ಷಾ ಉತ್ತಮ ವಾಗಿರುವರಿಂದ ಈ ಸೇವೆಗೆ ಆದ್ಯತೆ ನೀಡಲಾಗಿದೆ. ಪ್ರಯಾಣಿಕರಿಗೆ ಮಾರ್ಗ ದರ್ಶನ ನೀಡಲು ಪ್ರತಿ ನಿಲ್ದಾಣಗಳಲ್ಲಿ ಕಿಯೋಸ್ಕ್ ಅವಕಾಶ ನೀಡಲಾಗುತ್ತಿದೆ.

Auto rickshaw service will resume in Namma metro stations

ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್ನಮ್ಮ ಮೆಟ್ರೋ 36 ನಿಲ್ದಾಣಗಳಲ್ಲಿ ಎಲೆಕ್ಟ್ರಿಕ್ ಬಾಡಿಗೆ ಬೈಕ್

ಕಂಬಗಳಲ್ಲಿ ಜಾಹೀರಾತು: ಮೆಟ್ರೋ ಕಂಬಗಳನ್ನು ಭಿತ್ತಿಪತ್ರದಿಂದ ಅಂದಗೆಡಿಸುವ ಸಮಸ್ಯೆ ತಪ್ಪಿಸಲು ಹಾಗೂ ಆದಾಯ ಗಳಿಸಲು ಕಂಬಗಳಲ್ಲಿ ಜಾಹಿರಾತು ಅಳವಡಿಸುವುದಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಹಸಿರು ಮಾರ್ಗದ ಶ್ರೀರಾಮಪುರ ದಿಂದ ಪೀಣ್ಯ ನಿಲ್ದಾಣದವರೆಗೆಇನ ಕಂಬಗಳಲ್ಲಿ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗಿದೆ.

English summary
BMRCL is planning to launch Auto Rickshaw service in all metro stations. This will reduce the spending of money on travel for passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X