• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಹೀಗೆ ಬಟ್ಟೆ ಹಾಕ್ಕೇಡ' ಅಂತ ಯುವತಿಗೆ ಹೇಳಿದ್ದೇ ತಪ್ಪಾ?

|

ಬೆಂಗಳೂರು, ಏಪ್ರಿಲ್ 26: ಈ ನೈಜ ಕತೆಯಲ್ಲಿ ಇಬ್ಬರು ಪಾತ್ರಧಾರಿಗಳಿದ್ದಾರೆ. ಒಬ್ಬರಿಗೆ ಒಬ್ಬರು ಹೀರೋ ಆಗಿ ಕಂಡರೆ ಇನ್ನೊಬ್ಬರಿಗೆ ವಿಲನ್ ಆಗಿ ಕಾಣಬಹುದು. ಅವರವರ ಭಾವಕ್ಕೆ ತಕ್ಕಂತೆ ಹೀರೋ, ವಿಲನ್..

ಸ್ವಲ್ಪ ಹೆಚ್ಚಿಗೆ ಮೈ ಕಾಣುವಂತೆ ಬಟ್ಟೆ ಹಾಕಿ ಆಟೋ ಏರಿದ ಪತ್ರಕರ್ತೆಯೊಬ್ಬರಿಗೆ ಆಟೋ ಚಾಲಕ " ನೋಡಮ್ಮಾ, ಹೀಗೆಲ್ಲ ಬಟ್ಟೆ ಹಾಕಬಾರದು" ಎಂದು ಬುದ್ಧಿವಾದ ಹೇಳಿದ್ದಾರೆ. ಇದು ಮಹಿಳಾ ಚಿಂತಕರ ಲೆಕ್ಕದಲ್ಲಿ ಸ್ವಾತಂತ್ರ್ಯ ಹರಣವೂ ಆಗಬಹುದು. ಆ ವಿಚಾರವನ್ನು ಇಲ್ಲಿ ಹೆಚ್ಚು ಚರ್ಚೆ ಮಾಡುವುದು ಬೇಡ.[ಬೆಂಗಳೂರು: ಆಟೋ ಹತ್ತಿದ ಯುವತಿ ಕೊಂಚದರಲ್ಲಿ ಬಚಾವ್]

ಬುದ್ಧಿವಾದ ಹೇಳಿದ ಆಟೋ ಚಾಲಕನ ಬಗ್ಗೆ ಪತ್ರಕರ್ತೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಉದ್ದಕ್ಕೆ ಬರೆದುಕೊಂಡಿದ್ದಾರೆ. ಅದು ಸಾವಿರಕ್ಕೂ ಅಧಿಕ ಶೇರ್ ಗಳನ್ನು ಕಂಡಿದೆ.

ಆಕೆಯ ಬರೆದ ವಿವರಣೆಯನ್ನು ಮೊದಲು ನೋಡಿಕೊಂಡು ಬರೋಣ... ಘಟನೆಯ ಬಗ್ಗೆ ನಿಮಗೆ ಚಿತ್ರಣ ಸಿಗಬಹುದು..(ಏಪ್ರಿಲ್ 24 ರಂದು ಹಾಕಿದ ಪೋಸ್ಟ್)[ಆಟೋ ಚಾಲಕನ ಬುದ್ಧಿವಾದಕ್ಕೆ ಜನ ಏನಂದ್ರು?]

'ಐದು ನಿಮಿಷದ ಹಿಂದೆ ಇವರ ಆಟೋದಲ್ಲಿ ನಾನು ಆಗಮಿಸಿದೆ, ಆಟೋದ ಮೀಟರ್ 40 ರು. ತೋರಿಸಿತ್ತು. ಹೊರಗಡೆ ತುಂಬಾ ಬಿಸಿಲಿದೆ. 50 ರು. ಇಟ್ಟುಕೊಳ್ಳಿ ಎಂದು ನೀಡಿದೆ.

ಆದರೆ ನನ್ನನ್ನು ಒಂದು ಕ್ಷಣ ದಿಟ್ಟಿಸಿ ನೋಡಿದ ಆಟೋ ಚಾಲಕ, ತಪ್ಪು ತಿಳಿದುಕೊಳ್ಳಬೇಡಿ, ಈ ಬಗೆಯ ಬಟ್ಟೆ ಧರಿಸುವುದು ಸರಿಯೇ? ಎಂದು ಪ್ರಶ್ನೆ ಮಾಡಿದ. ಈ ಮಾತಿನಿಂದ ನನಗೆ ಆಘಾತವಾಗಿತ್ತು. ನಾನು ಬಹಳ ವರ್ಷಗಳಿಂದ ಇಂಥದ್ದೇ ಬಟ್ಟೆ ಧರಿಸುತ್ತಿದ್ದೇನೆ. ಅವರ ಆಟೋಕ್ಕೆ ಬಂದಿದ್ದಕ್ಕೆ ನಾನು ಹಣ ನೀಡಿದ್ದೇನೆ. ನನ್ನ ಬಟ್ಟೆಯ ಮೇಲೆ ಕಮೆಂಟ್ ಮಾಡುವ ಹಕ್ಕು ಅವರಿಗಿರಲಿಲ್ಲ..[ಬೆಂಗಳೂರು ಕಸದ ಲಾರಿಗಳು ಹೋಗುವುದೇ ಹೀಗೆ]

ಇದಾದ ಮೇಲೆ ಆಟೋದಿಂದ ಕೆಳಕ್ಕೆ ಇಳಿದ ಚಾಲಕ, ವೇಶ್ಯೆಯರ ರೀತಿಯ ಬಟ್ಟೆಗಳನ್ನು ಯಾಕೆ ಧರಿಸುತ್ತೀರಿ(ನಾನು ಬೇಸಿಗೆಗೆ ಒಪ್ಪುವಂತಹ ಬಿಳಿ ಬಣ್ಣದ ಡ್ರೆಸ್ ಧರಿಸಿದ್ದು ಅದು ಮೊಣಕಾಲುವರೆಗೂ ಬರುತ್ತಿತ್ತು) ಎಂದು ಮತ್ತೆ ಪ್ರಶ್ನೆ ಮಾಡಿದರು. ಈ ವೇಳೆಗೆ ಕೆಲವರು ಸ್ಥಳಕ್ಕೆ ಆಗಮಿಸಿದ್ದರು. ನಾನು ಫೋಟೋಗಳನ್ನು ತೆಗೆದುಕೊಂಡೆ. ಆಟೋ ಚಾಲಕ ಹೇಳಿದ್ದು ಸರಿ ಎಂದು ಅವರಲ್ಲೊಬ್ಬವಾದ ಮುಂದಿಟ್ಟ.

ಆಧುನಿಕ ಸಮಾಜದಲ್ಲಿ ಮಾಡ್ರನ್ ಡ್ರೆಸ್ ಧರಿಸುವ ಹಕ್ಕು ನನ್ನಂತ ಹುಡುಗಿ ಅಥವಾ ಮಹಿಳೆಯರಿಗೆ ಇಲ್ಲವೇ? ನಾನು ಈ ವೇಳೆ ಕೂಗಾಡುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು. ಇದೇ ಮೊದಲ ಬಾರಿಗೆ ನಾನು ಸಾರ್ವಜನಿಕವಾಗಿ ಅಪಮಾನಕ್ಕೆ ಗುರಿಯಾಗಿದ್ದೆ.

ಈ ವೇಳೆಗೆ ಸ್ಥಳಕ್ಕೆ ಆಗಮಿಸಿದ ಮತ್ತಿಬ್ಬರು ಪುರುಷರು ನಮ್ಮ ಗಲಾಟೆಯನ್ನು ಬಂದ್ ಮಾಡಿದರು. ಈ ಮಾರಲ್ ಪೊಲೀಸ್ ಮತ್ತು ಆಟೋ ಚಾಲಕನ ಮಾತಿನಿಂದ ನಾನು ತೀವ್ರವಾಗಿ ನೊಂದಿದ್ದೆ. ಇದಕ್ಕೆ ಇರಬೇಕು ನಾವು ನಮ್ಮ ಹಕ್ಕಿಗೆ ನಿರಂತರವಾಗಿ ಹೋರಾಟ ನಡೆಸಿಕೊಂಡೇ ಬರುತ್ತಿರುವುದು.

ಈ ಬಗೆಯ ಬಟ್ಟೆ ತೊಟ್ಟರೆ ನಾವು ವೇಶ್ಯೆ ಎಂದು ಕರೆಸಿಕೊಳ್ಳಬೇಕಾಗುತ್ತದೆ ಎಂಬ ಸಂಗತಿ ನನಗೆ ಗೊತ್ತಿರಲಿಲ್ಲ. ನಾನು ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ. ತಲೆ ತಗ್ಗಿಸುವುದು ಇಲ್ಲ. ನನ್ನ ಸ್ವಾತಂತ್ರ್ಯ ನಾನು ಬಟ್ಟೆ ಧರಿಸುತ್ತೇನೆ ಎಂದು ಕೊಳ್ಳುತ್ತಾ ನಾನು ತಲುಪಬೇಕಾದ ಕಟ್ಟಡದ ಕಡೆ ಹೆಜ್ಜೆ ಹಾಕಿದೆ.

ನಾನು ಆಟೋ ಚಾಲಕನ ಅನುಮತಿಯನ್ನು ಪಡೆದುಕೊಂಡೆ ಅವರ ಫೋಟೋ ತೆಗೆದುಕೊಂಡಿದ್ದೇನೆ. ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದೇನೆ. ಆತನ ಮಾತಿಗೆ ಎಲ್ಲರೂ ಬೆಂಬಲ ನೀಡುತ್ತಾರೆ ಎಂಬ ನಂಬಿಕೆಯಿಂದ ಹಂಚಿಕೊಳ್ಳಿ ಎಂದು ಆತ ಹೇಳಿದ್ದ."(ಈ ಬಗೆಯ ಪೋಸ್ಟ್ ಮಾಡಿರುವ ಯುವತಿ ಫೋಟೋಗಳನ್ನು ಹಾಕಿದ್ದಾರೆ)

ಹುಡುಗಿಯ ಅಥವಾ ಸ್ತ್ರೀ ಚಿಂತನೆಯ ಲೆಕ್ಕದಲ್ಲಿ ಹೇಳುವುದಾರೆ ಇಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾಗಿದೆ. ಆದರೆ ಸಾಮಾಜಿಕ ನೆಲೆಗಟ್ಟಿನಲ್ಲಿ ಯೋಚನೆ ಮಾಡಿದರೆ ಆಟೋ ಚಾಲಕ ಹೇಳಿದ್ದರಲ್ಲಿ ತಪ್ಪು ಕಾಣಿಸುವುದಿಲ್ಲ. ಯಾವುದು ಸರಿ? ಯಾವುದು ತಪ್ಪು? ಎಂಬುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು...

English summary
This is the real incident happened at Bengaluru on 24th April. A Lady Journalist took an auto to her residence. When she got out, auto driver gave a suggestion "please don't mind me but what you are wearing is inappropriate". Not aggreeing with his statement lady wrote a letter of this incident in Facebook. Who is right? who is wrong? Judge yourself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X