ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಶವಂತಪುರದಲ್ಲಿ ಪವಾಡ: ಹಸುಗೂಸಿನ ಪಾಲಿಗೆ ಆಟೋ ಡ್ರೈವರ್ ಹೀರೋ!

|
Google Oneindia Kannada News

ಬೆಂಗಳೂರು, ಏಪ್ರಿಲ್ 23: ಆಗಿನ್ನೂ ಸಮಯ ಬೆಳಗ್ಗೆ 4.20.. ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಬೀದಿ ದೀಪಗಳು ರಾರಾಜಿಸುತ್ತಿದ್ದವು. ಒಂದ್ಕಡೆ ಕಸದ ತೊಟ್ಟಿಗಳಿಂದ ಬಿಬಿಎಂಪಿ ಕಸ ಸಂಗ್ರಹಿಸುತ್ತಿದ್ದರೆ, ಇನ್ನೊಂದು ಕಡೆ ಬೀದಿ ನಾಯಿಗಳು ಬೊಗಳುತ್ತಿದ್ದವು.

Recommended Video

ಅನಕ್ಷರಸ್ಥರು ಪಾದರಾಯನಪುರದಲ್ಲಿ ಮಾತ್ರ ಇದ್ದಾರಾ? | Oneindia Kannada

ಇದೇ ಸಮಯಕ್ಕೆ ನಾಗರಾಜು ಎಂಬ ಆಟೋ ಡ್ರೈವರ್, ತಮ್ಮ ಆಟೋದಲ್ಲಿ ತ್ರಿವೇಣಿ ರಸ್ತೆ ಬಳಿ ಬಂದಿದ್ದಾರೆ. ಬಾಪು ಕಾಲೇಜ್ ಹತ್ತಿರ ಬರ್ತಿದ್ದಂತೆ.. ಅವರಿಗೆ ಬೀದಿ ನಾಯಿಗಳ ಗುಂಪು ಕಾಣಿಸಿದೆ. ಬಟ್ಟೆಯ ಬಂಡಲ್ ಅನ್ನ ಬೀದಿ ನಾಯಿಗಳ ಗುಂಪು ಎಳೆದಾಡಿಕೊಂಡು ಹೋಗುತ್ತಿರುವುದು ನಾಗರಾಜು ಕಣ್ಣಿಗೆ ಬಿದ್ದಿದೆ.

ಕೊರೊನಾ ಭೀತಿಯಿಂದ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ: ಆಸ್ಪತ್ರೆ ಮುಂಭಾಗವೇ ಹೆರಿಗೆ!ಕೊರೊನಾ ಭೀತಿಯಿಂದ ಅಡ್ಮಿಟ್ ಮಾಡಿಕೊಳ್ಳದ ಸಿಬ್ಬಂದಿ: ಆಸ್ಪತ್ರೆ ಮುಂಭಾಗವೇ ಹೆರಿಗೆ!

ಆಗ ನಾಗರಾಜು ಅವರ ತಲೆಯಲ್ಲಿ ಏನು ಬಂತೋ ಏನೋ... ತಕ್ಷಣ ನಾಯಿಗಳ ಗುಂಪಿನ ಹತ್ತಿರ ಹೋಗಿ ನೋಡಿದಾಗ ಬಟ್ಟೆಯ ಬಂಡಲ್ ಒಳಗೆ ಹಸುಗೂಸು ಇದ್ದದ್ದು ಕಂಡುಬಂದಿದೆ.

ಕೆಲವೇ ಗಂಟೆಗಳ ಹಿಂದೆ ಹುಟ್ಟಿದ ಗಂಡು ಮಗು

ಕೆಲವೇ ಗಂಟೆಗಳ ಹಿಂದೆ ಹುಟ್ಟಿದ ಗಂಡು ಮಗು

ಮಗುವಿನ ಹೊಕ್ಕಳುಬಳ್ಳಿ ಹಾಗೇ ಇರುವುದು ನಾಗರಾಜು ಅವರ ಗಮನಕ್ಕೆ ಬಂದಿದೆ. ಕೆಲವೇ ಗಂಟೆಗಳ ಹಿಂದೆ ಈ ಗಂಡು ಮಗು ಜನಿಸಿರಬಹುದು ಎಂದು ಭಾವಿಸಿ, ತಕ್ಷಣ ಬೀದಿ ನಾಯಿಗಳ ಗುಂಪನ್ನು ಓಡಿಸಿ, ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲು ನಾಗರಾಜು ಮನಸ್ಸು ಮಾಡಿದರು.

ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲು

ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲು

ಆ ಮಗುವನ್ನು ಹಿಡಿದುಕೊಳ್ಳಲು ನಾಗರಾಜು ಜೊತೆ ಯಾರೂ ಇರಲಿಲ್ಲ. ಮಗುವನ್ನು ಇಟ್ಟುಕೊಂಡು ಆಟೋ ಓಡಿಸುವುದು ಹೇಗೆ ಅಂತ ಯೋಚಿಸುತ್ತಿರುವಾಗಲೇ, ರಸ್ತೆಯಲ್ಲಿ ಪ್ರದೀಪ್ ಎಂಬುವರು ಸಿಕ್ಕರು. ಪ್ರದೀಪ್ ಸಹಾಯದಿಂದ ನಾಗರಾಜು ಮಗುವನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲು ಮಾಡಿದರು. ಮಗು ಆರೋಗ್ಯವಾಗಿದೆ ಎಂದು ತಿಳಿದ ಬಳಿಕವಷ್ಟೇ ಆಸ್ಪತ್ರೆಯಿಂದ ನಾಗರಾಜು ತೆರಳಿದರು.

ಗರ್ಭಿಣಿಯಿಂದಲೇ ರಕ್ತ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಮಗು ಸಾವುಗರ್ಭಿಣಿಯಿಂದಲೇ ರಕ್ತ ಕ್ಲೀನ್ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ: ಮಗು ಸಾವು

ಮಗುವಿನ ಅದೃಷ್ಟ ಚೆನ್ನಾಗಿದೆ

ಮಗುವಿನ ಅದೃಷ್ಟ ಚೆನ್ನಾಗಿದೆ

''ನಾನು ನೋಡಿದಾಗ ಮಗು ಅಳ್ತಾಯಿತ್ತು. ಮೊದಲು ನಾಯಿಗಳಿಂದ ಮಗು ಬಚಾವ್ ಆಯ್ತು. ಬಟ್ಟೆಗಳ ಬಂಡಲ್ ಒಳಗೆ ಇದ್ದ ಮಗು ಪಕ್ಕದಲ್ಲೇ ನಾನು ನೋಡಿದ ಹಾಗೆ ಮೂರು ವಾಹನ ಪಾಸ್ ಆಯ್ತು. ಆ ಮಗುವಿನ ಅದೃಷ್ಟ ಚೆನ್ನಾಗಿದೆ'' ಎಂದಿದ್ದಾರೆ ನಾಗರಾಜು.

ಮಗುವಿನ ಜೀವ ಉಳಿಸಿದ ಹೀರೋ

ಮಗುವಿನ ಜೀವ ಉಳಿಸಿದ ಹೀರೋ

ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮಗುವನ್ನು ದಾಖಲು ಮಾಡಿಕೊಂಡ ಸಿಬ್ಬಂದಿ ಮೆಡಿಕೋ-ಲೀಗಲ್ ಕೇಸ್ ದಾಖಲು ಮಾಡಿಕೊಂಡಿದ್ದಾರೆ. ಬಳಿಕ ನಾಗರಾಜು ಕೂಡ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಆಸ್ಪತ್ರೆಯ ವೈದ್ಯರು ಮತ್ತು ಯಶವಂತಪುರ ಪೊಲೀಸರು ಕೂಡ ಮಗುವಿನ ಜೀವ ಉಳಿಸಿದ 'ಹೀರೋ' ನಾಗರಾಜುರನ್ನ ಪ್ರಶಂಸಿದ್ದಾರೆ.

ಸಿಸಿಟಿವಿ ಫುಟೇಜ್ ಪರಿಶೀಲನೆ

ಸಿಸಿಟಿವಿ ಫುಟೇಜ್ ಪರಿಶೀಲನೆ

ಮಗುವನ್ನು ಕಸದ ತೊಟ್ಟಿಗೆ ಎಸೆದವರ ವಿರುದ್ಧ ಸೆಕ್ಷನ್ 317 ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ತ್ರಿವೇಣಿ ರಸ್ತೆಯಲ್ಲಿ ಇರುವ ಸಿಸಿಟಿವಿ ಫುಟೇಜ್ ಅನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಗುವಿನ ತಂದೆ-ತಾಯಿಗಾಗಿ ಹುಡುಕಾಟ ನಡೆಯುತ್ತಿದೆ.

English summary
Auto Driver Nagaraju saves new born baby in Yeshwanthpura.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X