ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ವ್ಯಾಪಾರ ಕಸಿಯುತ್ತಿದ್ದೀರ ಎಂದು ಟೆಕ್ಕಿ ಮೇಲೆ ಕೈಮಾಡಿದ ಆಟೋ ಚಾಲಕ

|
Google Oneindia Kannada News

ಬೆಂಗಳೂರು, ಜುಲೈ 11: ರೈಡ್ ಶೇರಿಂಗ್ ಬೈಕ್ ಗಳನ್ನು ಬಳಸಿ ನಮ್ಮ ವ್ಯಾಪಾರ ಕಸಿಯುತ್ತಿದ್ದೀರ ಎಂದು ಆಟೋ ಚಾಲಕನೊಬ್ಬ ಟೆಕ್ಕಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ವೈಟ್ ಫೀಲ್ಡ್ ನಲ್ಲಿ ನಡೆದಿದೆ. ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ವೈಟ್ ಫೀಲ್ಡ್ ನಲ್ಲಿನ ದಿವ್ಯಶ್ರೀ ಟೆಕ್ನೋ ಪಾರ್ಕ್ ಬಳಿ ಈ ಘಟನೆ ನಡೆದಿದೆ. ಟೆಕ್ನೋ ಪಾರ್ಕ್ ಬಳಿ ಸಂಜೆ ಸುಮಾರು 4.30ರ ವೇಳೆಗೆ ಟೆಕ್ಕಿ ರಾಹುಲ್, ಯೂಲು ಬೈಕನ್ನು ಆ ಬೈಕಿನ ಪಾರ್ಕಿಂಗ್ ಗೆ ಮೀಸಲಿಟ್ಟ ಯೂಲು ಝೋನ್ ನಲ್ಲಿ ಪಾರ್ಕ್ ಮಾಡುತ್ತಿದ್ದ ಸಂದರ್ಭ ಹಿಂದಿನಿಂದ ಬಂದ ಆಟೊ ಡ್ರೈವರ್ ಏಕಾಏಕಿ ಕುತ್ತಿಗೆ ಪಟ್ಟಿ ಹಿಡಿದುಕೊಂಡಿದ್ದಾನೆ. ಏಕೆ ಇಲ್ಲಿ ಪಾರ್ಕ್ ಮಾಡುತ್ತಿದ್ದೀಯ ಎಂದು ಜಗಳ ತೆಗೆದಿದ್ದಾನೆ. ಇದಕ್ಕೆ ಹಿಂದಿಯಲ್ಲಿ ರಾಹುಲ್ ಪ್ರತಿಕ್ರಿಯಿಸಿದ್ದನ್ನು ಕಂಡು ಕೋಪಗೊಂಡ ಚಾಲಕ, ಈ ರೈಡ್ ಶೇರಿಂಗ್ ಬೈಕ್ ಬಳಸಿ, ನಮ್ಮ ವ್ಯಾಪಾರ ಕಸಿದುಕೊಳ್ಳುತ್ತಿದ್ದೀರ ಎಂದು ಆಕ್ರೋಶದಿಂದ ಮಾತನಾಡಿದ್ದಾನೆ.

 ಹುಡುಗಿಯ ಖಾಸಗಿ ಫೋಟೊವಿಟ್ಟುಕೊಂಡು ಪೀಡಿಸುತ್ತಿದ್ದ ಟೆಕ್ಕಿ ಬಂಧನ ಹುಡುಗಿಯ ಖಾಸಗಿ ಫೋಟೊವಿಟ್ಟುಕೊಂಡು ಪೀಡಿಸುತ್ತಿದ್ದ ಟೆಕ್ಕಿ ಬಂಧನ

ಇದು ಯೂಲು ಬೈಕ್ ಪಾರ್ಕ್ ಮಾಡುವ ಜಾಗ ಹೌದೋ ಅಲ್ಲವೊ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ರಾಹುಲ್ ಬೈಕ್ ಕಂಪನಿ ಪ್ರತಿನಿಧಿಗೆ ಕರೆ ಮಾಡಲು ಮುಂದಾದಾಗ, ಕೆನ್ನೆಗೆ ಹೊಡೆದು, ಮೊಬೈಲ್ ಕಿತ್ತೆಸೆದು ಕೆಳಗೆ ತಳ್ಳಿದ್ದಾನೆ. ದಾರಿಯಲ್ಲಿ ಬರುತ್ತಿದ್ದ ಇಬ್ಬರು ಮಹಿಳೆಯರು ರಾಹುಲ್ ಸಹಾಯಕ್ಕೆ ಬಂದು ಪೊಲೀಸರಿಗೆ ಕರೆ ಮಾಡಲು ಮುಂದಾದಾಗ, ಅವರನ್ನು ಬೆದರಿಸಿ ದೂರ ಸರಿಯುವಂತೆ ಮಾಡಿದ್ದಾನೆ. ಇದೇ ಸಂದರ್ಭ ಟೆಕ್ ಪಾರ್ಕ್ ನ ಭದ್ರತಾ ಸಿಬ್ಬಂದಿ ಬಂದು ರಾಹುಲ್ ಅವರನ್ನು ಒಳಗೆ ಕರೆದುಕೊಂಡು ಹೋಗಿದ್ದಾರೆ.

auto driver assault techie in whitefield over parking issue

ಘಟನೆಯಿಂದ ಆತಂಕಗೊಂಡಿರುವ ಟೆಕ್ಕಿ, ನಗರವನ್ನು ಬಿಟ್ಟುಹೋಗುವುದಾಗಿ ಹೇಳಿಕೊಂಡಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈಟ್ ಫೀಲ್ಡ್ ಪೊಲೀಸರು ಗಮನಿಸಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯಬೇಕು. ಇದು ಬೆಂಗಳೂರು ನಗರಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಯೂಲು ಬೈಕ್ ನ ಸಹಸಂಸ್ಥಾಪಕ ಆರ್ ಕೆ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ವೈಟ್ ಫೀಲ್ಡ್ ಪೊಲೀಸರು ಆಟೋ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

English summary
Auto driver assaulted a senior software developer rahul over parking of yulu bike near divyashree technopark in whitefield. The driver was angry over using ride share bikes and assaulted him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X