ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊರಮಾವು ಅಗರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ: ಒತ್ತುವರಿದಾರರಿಗೆ ನಡುಕ

|
Google Oneindia Kannada News

ಬೆಂಗಳೂರು, ಡಿಸೆಂಬರ್ 4: ಯುನೈಟೆಡ್ ಬೆಂಗಳೂರು ಲೋಕಾಯುಕ್ತಕ್ಕೆ ಸಲ್ಲಿಸಿದ ಮನವಿ ಆಧರಿಸಿ ಲೋಕಾಯುಕ್ತ ನೀಡಿದ ಆದೇಶದ ಮೇರೆಗೆ ಮಂಗಳವಾರ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ ಅಧಿಕಾರಿಗಳು ಹೊರಮಾವು ಅಗರ ಕೆರೆ ಒತ್ತುವರಿ ಪರಿಶೀಲನೆ ನಡೆಸಿದರು.

ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ ಲೋಕಾಯುಕ್ತ ಆದೇಶ: ಚಿಕ್ಕಬಾಣಾವರ ಕೆರೆ ಒತ್ತುವರಿ ಜಂಟಿ ಸಮೀಕ್ಷೆ

ಯುನೈಟೆಡ್ ಬೆಂಗಳೂರು ಕಳೆದ ಕೆಲವು ತಿಂಗಳುಗಳ ಹಿಂದೆ ಕೆರೆಗಳ ಒತ್ತುವರು ಕುರಿತು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದರು, ಲೋಕಾಯುಕ್ತವು ಜಲಮಂಡಳಿ, ಬಿಬಿಎಂಪಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಜೊತೆಗೆ ಸೇರಿ ಕೆರೆಗಳ ಒತ್ತುವರಿ ಸರ್ವೇ ನಡೆಸಲು ಆದೇಶ ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ ಐದು ಕೆರೆಗಳ ಒತ್ತುವರಿ ಕುರಿತು ಸರ್ವೇ ನಡೆಸಲಾಗಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಸಂಶೋಧಕ ಲಕ್ಷ್ಮೀಕಾಂತ್ ತಿಳಿಸಿದ್ದಾರೆ.

Authorities conduct joint survey on Agar lake encroachment

ಹೊರಮಾವು ಅಗರ ಕೆರೆಯು ಒಟ್ಟು 54 ಎಕರೆ ಪ್ರದೇಶವನ್ನು ಒಳಗೊಂಡಿದೆ. ಕೆರೆ ಅಭಿವೃದ್ಧಿಗಾಗಿ 3.50 ಕೋಟಿ ರೂ ಬಿಡುಗಡೆಯಾಗಿದ್ದರೂ ಕೂಡ ಕೇವಲ ಕೆರೆಯಲ್ಲಿ ನೀರಿರುವ ಭಾಗದಲ್ಲಿ ಮಾತ್ರ ಅಭಿವೃದ್ಧಿ ಕಾರ್ಯ ನಡೆದಿದೆ. ಇನ್ನುಳಿದ ಪ್ರದೇಶಗಳು ಅಭಿವೃದ್ಧಿಯಾಗದೆ ಹಾಗೆಯೇ ಉಳಿದಿದೆ ಎಂದು ಮಾಹಿತಿ ನೀಡಿದರು.

ಲೋಕಾಯುಕ್ತ ನಿರ್ದೇಶನ: ಅರಕೆರೆ ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು ಲೋಕಾಯುಕ್ತ ನಿರ್ದೇಶನ: ಅರಕೆರೆ ಜಂಟಿ ಸಮೀಕ್ಷೆ ನಡೆಸಿದ ಅಧಿಕಾರಿಗಳು

Authorities conduct joint survey on Agar lake encroachment

ಅಷ್ಟೇ ಅಲ್ಲದೆ ಕೆಲವು ವರ್ಷಗಳಿಂದ ಖಾಸಗಿ ಅಪಾರ್ಟ್‌ಮೆಂಟ್‌ಗಳ ಹಾವಳಿ ಹೆಚ್ಚಾಗಿದ್ದು ಕೆರೆಯ ದಡದಲ್ಲೇ ಅಪಾರ್ಟ್‌ಮೆಂಟ್‌ಗಳು ನಿರ್ಮಾಣವಾಗಿದೆ. ಹಾಗೂ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದೆಲ್ಲಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ವೇ ನಡೆದಿದೆ. ಕೆಲ ದಿನಗಳಲ್ಲೇ ಒತ್ತುವರಿ ತೆರವುಗೊಳಿಸಲಾಗುತ್ತದೆ. ಲೋಕಾಯುಕ್ತಕ್ಕೆ ಎಲ್ಲಾ ಕೆರೆಯ ಸಮೀಕ್ಷಾ ವರದಿಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

English summary
Joint team of KSPCB, BBMP, Land records and survey department has conducted survey on Agara lake following Lokayukta order. Bengaluru foundation and United Bengaluru have filed complaint before Lokayukta regarding lake encroachment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X