• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯಾರ್ಥಿ ಭವನ ದೋಸೆ ಸವಿಯಲು ಬಂದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ!

|
   ಬೆಂಗಳೂರಿನ ದೋಸೆ ಆಸ್ಟ್ರೇಲಿಯಾದಲ್ಲೂ ಫೇಮಸ್..?

   ಬೆಂಗಳೂರು, ಆಗಸ್ಟ್ 19: ವಿದ್ಯಾರ್ಥಿ ಭವನ ದೋಸೆ ಸವಿ ಕರ್ನಾಟಕ್ಕೆ ಮಾತ್ರವಲ್ಲ, ಆಸ್ಟ್ರೇಲಿಯನ್ನರನ್ನೂ ಸೆಳೆದಿದೆ. ಹೌದು, ಆಸ್ಟ್ರೇಲಿಯಾದ ಕ್ರಿಕೆಟಿಗರೊಬ್ಬರು ನಗರದ ಗಾಂಧೀಬಜಾರಿನಲ್ಲಿರುವ ವಿದ್ಯಾರ್ಥಿ ಭವನ ಹೊಟೆಲ್‌ನಲ್ಲಿ ದೋಸೆ ಸವಿದು ವಾಹ್ ಎಂದಿದ್ದಾರೆ.

   ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಅವರು ಇಂದು ಗಾಂಧಿ ಬಜಾರಿನ ವಿದ್ಯಾರ್ಥಿ ಭವನ ಹೊಟೆಲ್‌ಗೆ ಭೇಟಿ ನೀಡಿದ್ದರು. ಅವರೊಂದಿಗೆ ಕರ್ನಾಟಕದ ಮಾಜಿ ಕ್ರಿಕೆಟಿಗ ವಿಜಯ್ ಭಾರಧ್ವಜ್ ಸಹ ಇದ್ದರು.

   ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ ಮಸಾಲೆ ದೋಸೆಯ ಹುಚ್ಚು ಹಿಡಿಸಿದ ವಿದ್ಯಾರ್ಥಿ ಭವನ ಸೆಂಚುರಿ ಬಾರಿಸಲಿ

   ಹೊಟೆಲ್‌ಗೆ ಭೇಟಿ ನೀಡಿದ್ದ ಬ್ರಾಡ್ ಹಾಗ್, ವಿದ್ಯಾರ್ಥಿ ಭವನದ ಖ್ಯಾತ ಮಸಾಲೆ ದೊಸೆ, ಇಡ್ಲಿ, ವಡೆ-ಸಂಬಾರ್, ಚೌ-ಚೌ ಬಾತ್, ಪೂರಿ ಸಾಗುಗಳನ್ನು ಸವಿದಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೆಪಿಎಲ್‌ ಟೂರ್ನಿಯ ಶೂಟಿಂಗ್‌ಗಾಗಿ ಅವರು ವಿದ್ಯಾರ್ಥಿ ಭವನಕ್ಕೆ ಬಂದಿದ್ದರು.

   ದೋಸೆ ರುಚಿಗೆ ಮಾರುಹೋದ ಬ್ರಾಡ್ ಹಾಗ್

   ದೋಸೆ ರುಚಿಗೆ ಮಾರುಹೋದ ಬ್ರಾಡ್ ಹಾಗ್

   ದೋಸೆ ಮಾಡುವ ರೀತಿ, ದೋಸೆ ತುಂಬಿದ ತಟ್ಟೆಗಳನ್ನು ಒಂದರಮೇಲೊಂದು ಇಟ್ಟುಕೊಂಡು ಸರ್ವ್ ಮಾಡುವ ರೀತಿ ನೋಡಿ ಬ್ರಾಡ್ ಹಾಗ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ವಿದ್ಯಾರ್ಥಿ ಭವನದ ಮಾಲೀಕರು ಮತ್ತು ಸಿಬ್ಬಂದಿಯ ಜೊತೆ ಫೊಟೊಗಳಿಗೂ ಫೋಸು ನೀಡಿದ್ದಾರೆ.

   ನಾಳೆ ಪ್ರಸಾರವಾಗಲಿದೆ ಕಾರ್ಯಕ್ರಮ

   ನಾಳೆ ಪ್ರಸಾರವಾಗಲಿದೆ ಕಾರ್ಯಕ್ರಮ

   ಬ್ರಾಡ್ ಹಾಗ್ ಅವರು ವಿದ್ಯಾರ್ಥಿಭವನಕ್ಕೆ ಭೇಟಿ ನೀಡಿದ್ದ ಕಾರ್ಯಕ್ರಮವು ನಾಳೆ (ಆಗಸ್ಟ್ 20) ರಂದು ಮಧ್ಯಾಹ್ನ 2:30 ಕ್ಕೆ ಸ್ಟಾರ್ ಸ್ಟೋರ್ಟ್ಸ್‌ನಲ್ಲಿ ಪ್ರಸಾರವಾಗಲಿದೆ. ಕೆಪಿಎಲ್ ಮ್ಯಾಚ್ ಪ್ರಾರಂಭಕ್ಕೆ ಮುನ್ನಾ ಈ ಕಾರ್ಯಕ್ರಮ ಪ್ರಸಾರವಾಗಲಿದೆ.

   ಆಹಾ! ಘಮಘಮಿಸುವ ಸೊಪ್ಪಿನ ದೋಸೆ ಸವಿಯಲು ಮೈಸೂರಿನ ಜಿಟಿಆರ್ ಗೆ ಬನ್ನಿಆಹಾ! ಘಮಘಮಿಸುವ ಸೊಪ್ಪಿನ ದೋಸೆ ಸವಿಯಲು ಮೈಸೂರಿನ ಜಿಟಿಆರ್ ಗೆ ಬನ್ನಿ

   ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್

   ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್

   ಬ್ರಾಡ್ ಹಾಗ್ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರರಾಗಿದ್ದು, ಈಗ ವೀಕ್ಷಕ ವಿವರಣೆ ನೀಡುತ್ತಿದ್ದಾರೆ. ಇವರು ಐಪಿಎಲ್‌ನಲ್ಲಿಯೂ ಆಡಿದ್ದರು. ಸ್ಪಿನ್ ಬೌಲರ್ ಆಗಿದ್ದ ಬ್ರಾಡ್ ಹಾಗ್, 124 ಏಕದಿನ, 7 ಟೆಸ್ಟ್ 15 ಟಿ20, 21 ಐಪಿಎಲ್ ಮ್ಯಾಚ್‌ಗಳನ್ನು ಆಡಿದ್ದಾರೆ.

   ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ? ಮಲ್ಲೇಶ್ವರದ ಸಿಟಿಆರ್ ನ ಬೆಣ್ಣೆ ಮಸಾಲೆ, ಮಂಗಳೂರು ಬಜ್ಜಿಗೆ ಸಾಟಿ ಎಲ್ಲಿದೆ?

   1943 ರಲ್ಲಿ ಪ್ರಾರಂಭವಾದ ಹೊಟೆಲ್

   1943 ರಲ್ಲಿ ಪ್ರಾರಂಭವಾದ ಹೊಟೆಲ್

   1943 ರಲ್ಲಿ ಪ್ರಾರಂಭವಾದ ವಿದ್ಯಾರ್ಥಿ ಭವನ ಹೊಟೆಲ್ ದಶಕಗಳಿಂದ ಪ್ರಸಿದ್ಧಿಯನ್ನು ಉಳಿಸಿಕೊಂಡೇ ಬಂದಿದೆ. ಜನ ಸಾಮಾನ್ಯರ, ರಾಜಕಾರಣಿಗಳು, ಸಿನಿಮಾ ಮಂದಿ, ಬ್ಯುಸಿನೆಸ್‌ಮೆನ್, ಸೆಲೆಬ್ರಿಟಿಗಳ ನೆಚ್ಚಿನ ಹೊಟೆಲ್ ಇದಾಗಿದೆ.

   ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ ಚಡ್ಡಿ ಚಿಕ್ಕಣ್ಣ ಹೋಟೆಲ್ ಮಸಾಲೆ ದೋಸೆಗೆ ಮನ ಸೋತ ಪಾಮರನ ಸ್ವಗತ

   English summary
   Australian cricketer Brad Hogg today visited famous hotel Vidyarthi Bhavan along with Vijay Bharadwaj.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X