ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಡಿಎ ಮೂಲೆ ನಿವೇಶನಗಳ ಮಾರಾಟ ಅಷ್ಟು ಸುಲಭವಾಗಿಲ್ಲ

|
Google Oneindia Kannada News

ಬೆಂಗಳೂರು, ಏಪ್ರಿಲ್ 21 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಇದರಿಂದಾಗಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತವಾಗಿದೆ. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರಬೇಕಾದ ಹಣ ಬರುತ್ತಿಲ್ಲ. ಖಜಾನೆ ತುಂಬಿಸಲು ಸರ್ಕಾರ ಹಲವು ಚಿಂತನೆಗಳನ್ನು ನಡೆಸಿದೆ.

Recommended Video

ಈಗ ನೋಡಿ ಪಾದರಾಯನಪುರದ ಪರಿಸ್ಥಿತಿ ಹೇಗಿದೆ ಅಂತಾ! | Padarayanapura | Oneindia Kannada

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಆದಾಯ ಸಂಗ್ರಹಣೆಗಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧೀನದ ಸುಮಾರು 12 ಸಾವಿರ ಮೂಲೆ ನಿವೇಶನಗಳನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ, ಇದು ಅಂದು ಕೊಂಡಷ್ಟು ಸುಲಭವಾಗಿಲ್ಲ.

ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಶಿಫಾರಸು ಬಿಡಿಎ ಜಾಗದಲ್ಲಿರುವ ಅಕ್ರಮ ನಿವೇಶನ, ಮನೆ ಸಕ್ರಮಕ್ಕೆ ಶಿಫಾರಸು

ಯಡಿಯೂರಪ್ಪ ಅವರ ಈ ತೀರ್ಮಾನಕ್ಕೆ ಎಲ್ಲರೂ ಸಹಮತ ವ್ಯಕ್ತಪಡಿಸಿಲ್ಲ. ಸೈಟುಗಳನ್ನು ಮಾರಾಟ ಮಾಡಲು ಹಲವಾರು ತೊಡಕುಗಳು ಸಹ ಇವೆ. ಆದ್ದರಿಂದ, ಈ ಘೋಷಣೆ ಪರಿಣಾಮಕಾರಿಯಾಗಿ ಜಾರಿಗೆ ಬರಲಿದೆಯೇ? ಎಂಬ ಅನುಮಾನ ಮೂಡಿದೆ.

ಬೆಂಗಳೂರಲ್ಲಿ ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಬೆಂಗಳೂರಲ್ಲಿ ಬಿಡಿಎ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Auctioning BDA Site Not An Good Idea

ಲಾಕ್ ಡೌನ್ ಎಲ್ಲಾ ವಲಯದ ಮೇಲೆಯೂ ಪರಿಣಾಮ ಬೀರಿದೆ. ಸೈಟುಕೊಳ್ಳುವ ಚಿಂತನೆಯಲ್ಲಿದ್ದ ಜನರು ತಮ್ಮ ಆಲೋಚನೆಯನ್ನು ಮುಂದಕ್ಕೆ ಹಾಕುವ ನೀರಿಕ್ಷೆ ಇದೆ. ಪ್ರತಿಪಕ್ಷ ಕಾಂಗ್ರೆಸ್ ಸಹ ಸರ್ಕಾರಕ್ಕೆ ಇದನ್ನೇ ಹೇಳಿದೆ. ಜನರ ಬಳಿ ಕೊಳ್ಳುವ ಶಕ್ತಿ ಪ್ರಸ್ತುತ ಕಡಿಮೆ ಇದೆ ಎಂದು ತಿಳಿಸಿದೆ.

ಭಾರತ ಲಾಕ್ ಡೌನ್ ನಡುವೆ 'ಗೂಡು' ಬಿಟ್ಟವರ ಗತಿಯೇನು? ಭಾರತ ಲಾಕ್ ಡೌನ್ ನಡುವೆ 'ಗೂಡು' ಬಿಟ್ಟವರ ಗತಿಯೇನು?

ಬಿಡಿಎ ನಿವೇಶನಗಳನ್ನು ಮಾರಾಟ ಮಾಡುವ ಮೊದಲು ಸರ್ಕಾರ ಬೆಂಗಳೂರು ಅಭಿವೃದ್ಧಿ ಕಾಯ್ದೆ 1976ಕ್ಕೆ ತಿದ್ದುಪಡಿ ತರಬೇಕಿದೆ. ಸರ್ಕಾರದ ಅಧೀನದಲ್ಲಿ ಬರುವ ಸ್ವತಂತ್ರ ಸಂಸ್ಥೆ ಬಿಡಿಎ. ಇಲ್ಲಿನ ಸ್ವತ್ತುಗಳ ಮಾರಾಟಕ್ಕೆ ಕಾನೂನಿನ ಅಡ್ಡಿಯೂ ಇದೆ.

ಮೂಲೆ ನಿವೇಶನಗಳ ಹಂಚಿಕೆಯಲ್ಲಿ ಹಗರಣವೊಂದು ನಡೆದಿದೆ. 2019ರ ಸೆಪ್ಟೆಂಬರ್‌ನಲ್ಲಿ ಮುಖ್ಯಮಂತ್ರಿಗಳು ಈ ಕುರಿತು ಎಸಿಬಿ ತನಿಖೆಗೆ ಆದೇಶ ನೀಡಿದ್ದಾರೆ. ತನಿಖೆ ಪೂರ್ಣಗೊಂಡು ಇನ್ನೂ ವರದಿ ಬಂದಿಲ್ಲ. ಆದ್ದರಿಂದ, ನಿವೇಶನ ಮಾರಾಟಕ್ಕೆ ಕೈ ಹಾಕಿದರೆ ಹಂಚಿಕೆ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯಪ್ರವೇಶ ಮಾಡಬೇಕಾಗುತ್ತದೆ.

ಬಿಡಿಎ ಅಧಿಕಾರಿಗಳು ಹೇಳುವ ಪ್ರಕಾರ ಬೆಂಗಳೂರು ಉತ್ತರದಲ್ಲಿ 726 (ಅರ್ಕಾವತಿ ಲೇಔಟ್) ನಿವೇಶನಗಳಿವೆ. ಬೆಂಗಳೂರು ಪಶ್ಚಿಮ (ವಿಶ್ವೇಶ್ವರಯ್ಯ ಲೇಔಟ್, ನಾಗರಭಾವಿ ಮತ್ತು ಚಂದ್ರಾಲೇಔಟ್‌ನಲ್ಲಿ) 2177 ನಿವೇಶನಗಳಿವೆ.

ಬೆಂಗಳೂರು ದಕ್ಷಿಣದ (ಅಂಜಾನಾಪುರ, ಜಯನಗರ, ಜೆ. ಪಿ. ನಗರ, ಬಿ. ಟಿ. ಎಂ. ಲೇಔಟ್‌) ಒಟ್ಟು 4613 ನಿವೇಶನ, ಬೆಂಗಳೂರು ಪೂರ್ವದಲ್ಲಿ 92 ನಿವೇಶನಗಳು ಮಾರಾಟಕ್ಕೆ ಇವೆ. ಬಿಡಿಎ ಈ ನಿವೇಶನಗಳಿಗೆ ಮೂಲ ಸೌಕರ್ಯ ಒದಗಿಸಲು 100 ಕೋಟಿಗೂ ಅಧಿಕ ವೆಚ್ಚ ಮಾಡಿದೆ.

ಇತ್ತೀಚಿನ ವರ್ಷಗಳಲ್ಲಿ ಬಿಡಿಎಗೆ ಸರ್ಕಾರ ಅನುದಾನ ನೀಡಿಲ್ಲ. ಬಿಡಿಎ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಬಿಟ್ಟು, ನಿವೇಶನಗಳನ್ನು ಸರ್ಕಾರಕ್ಕೆ ನೀಡಲಿದೆಯೇ?. ನಾಡಪ್ರಭು ಕೆಂಪೇಗೌಡ ಲೇಔಟ್‌ನಲ್ಲಿನ ನಿವೇಶನಗಳ ಹಂಚಿಕೆಯೇ ಇನ್ನೂ ಕಗ್ಗಂಟಾಗಿ ಉಳಿದಿದೆ.

2019ರಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮೂಲೆ ನಿವೇಶನಗಳ ಮಾರಾಟಕ್ಕೆ ಪ್ರಯತ್ನ ನಡೆಸಿತ್ತು. 165 ಸೈಟ್‌ಗಳ ಮಾರಾಟದ ಸಂದರ್ಭದಲ್ಲಿ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ. ಶೇ 60ರಷ್ಟು ಸೈಟ್‌ಗಳು ಮಾತ್ರ ಹರಾಜುಗೊಂಡವು.

ಕಾನೂನಿನ ಬಿಕ್ಕಟ್ಟು ಇಲ್ಲದ 12 ಸಾವಿರ ನಿವೇಶನಗಳು ನಮ್ಮ ಬಳಿ ಇವೆ. ಸರ್ಕಾರ ಒಪ್ಪಿಗೆ ನೀಡಿದರೆ ಜೂನ್‌ನಲ್ಲಿ ಮಾರಾಟ ಪ್ರಕ್ರಿಯೆ ಆರಂಭಿಸಲು ನಾವು ಸಿದ್ಧರಿದ್ದೇವೆ ಎಂದು ಬಿಡಿಎ ಅಧಿಕಾರಿಗಳು ಹೇಳಿದ್ದಾರೆ.

English summary
Everyone is not convinced with Karnataka government plan to auctioning 12, 000 BDA sites to boost revenue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X