India
  • search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತಿಬೆಲೆ ಹೆದ್ದಾರಿ ಟೋಲ್ ದರ ಜುಲೈ 1ರಿಂದ ಏರಿಕೆ: ಹೊಸ ದರದ ವಿವರ

|
Google Oneindia Kannada News

ಬೆಂಗಳೂರು ಜೂ. 25: ಬೆಂಗಳೂರಿನ ಸಿಲ್ಕ ಬೋರ್ಡ್‌ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಎಲಿವೆಟೆಡ್ ಎಕ್ಸ್‌ಪ್ರೆಸ್‌ ವೇ ಮತ್ತು ಅತ್ತಿಬೆಲೆ ಹೆದ್ದಾರಿಯ ಟೋಲ್ ಬಳಸುವವರು ಇನ್ನು ಮುಂದೆ ಹೆಚ್ಚು ಟೋಲ್ ಪಾವತಿ ಮಾಡಬೇಕಿದೆ.

ಈ ಮಾರ್ಗದಲ್ಲಿ ಹಲವು ಐಟಿ ಕಂಪನಿಗಳು, ಕಾರ್ಖಾನೆಗಳು ಇದ್ದು, ಎಲ್ಲ ನೌಕರರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ, ಬೊಮ್ಮಸಂದ್ರದಲ್ಲಿ ಸಹ ನೂರಾರು ಕಂಪನಿಗಳು ಇದ್ದು ಅಲ್ಲಿಯ ನೌಕರರು ಇದೇ ಮಾರ್ಗವನ್ನೇ ಆಶ್ರಯಿಸಿದ್ದಾರೆ.

ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗಿನ ಸುಮಾರು 10 ಕಿ. ಮೀ. ಉದ್ದದ ಮೇಲ್ಸೇತುವೆ ಬಳಸುವ ಹಾಗೂ ತಮಿಳುನಾಡು ಗಡಿ ಸಮೀಪವಿರುವ 14.38 ಕಿ.ಮೀ. ಉದ್ದದ ಅತ್ತಿಬೆಲೆ ಹೆದ್ದಾರಿ ರಸ್ತೆಯಲ್ಲಿ ಸಾಗುವವರು ಹೊಸ ಶುಲ್ಕದ ಈ ಎರಡು ಟೋಲ್ ವ್ಯಾಪ್ತಿಗೆ ಒಳಪಡುತ್ತಾರೆ. ಇಲ್ಲಿನ ಹೆದ್ದಾರಿಯು ನಾಲ್ಕ ರಸ್ತೆ ಪಥ ಹೊಂದಿದ್ದರೆ ಆರು ಗ್ರೇಡ್ ಸಪರೇಟರ್ ಹೊಂದಿರುವ ಉದ್ದನೆಯ ರಸ್ತೆಯಾಗಿದೆ.

ರಾಷ್ಟ್ರೀಯ ಹೆದ್ದಾರಿ -44 ಟೋಲ್ ಶುಲ್ಕದ ವಿವರ;

ರಾಷ್ಟ್ರೀಯ ಹೆದ್ದಾರಿ -44 ಟೋಲ್ ಶುಲ್ಕದ ವಿವರ;

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ಬೆಂಗಳೂರು ಎಲಿವೆಟೆಡ್ ಟೋಲ್ ವೇ ಪ್ರವೈಟ್ ಲಿಮಿಟೆಡ್ (ಬಿಇಟಿಪಿಎಲ್) ಸ್ಥಾಪಿಸಲಾಗಿದೆ. 2034ರವರೆಗೆ ಮಾಡಿಕೊಂಡ ಒಪ್ಪಂದಂತೆ ಬಿಇಟಿಪಿಎಲ್ ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡುವ ಅಧಿಕಾರ ಹೊಂದಿದೆ. ಅದೇ ರೀತಿ ಈ ವರ್ಷವು ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಶುಲ್ಕ ಹೆಚ್ಚಿಸಿದೆ ಎಂದು ಸಾರ್ವಜನಿಕ ಪ್ರಕಟಣೆ ಯನ್ನಷೇ ಹೊರಡಿಸಿದೆ.

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಪ್ರಸ್ತುತ ಟೋಲ್ ಶುಲ್ಕ (2022)

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಪ್ರಸ್ತುತ ಟೋಲ್ ಶುಲ್ಕ (2022)

ವಾಹನಗಳ ಪ್ರಕಾರಗಳ ಆಧಾರದಲ್ಲಿ ಶೇ.10-20ರಷ್ಟು ರಸ್ತೆ ಶುಲ್ಕ ಹೆಚ್ಚಿಸಲಾಗಿದೆ. ದ್ವಿಚಕ್ರ ವಾಹನಗಳು ಕ್ರಮವಾಗಿ ಏಕ ಮುಖವಾಗಿ ಸಾಗಲು 25ರೂ, ಮತ್ತು ಒಂದೇ ದಿನ ದ್ವಿಮುಖವಾಗಿ ಸಾಗಲು 35 ರೂ. ಪಾವತಿಸಬೇಕಿದ್ದು, ಮಾಸಿಕ ಪಾಸ ಪಡೆಯಲು 720ರೂ.ಕಟ್ಟಬೇಕಿದೆ. ಕಾರು/ಜೀಪು/ ವ್ಯಾನ್ ಗಳ ಚಾಲಕರು ಏಕಮುಖ ಚಾಲನೆ 60ರೂ, ದ್ವಿಮುಖಕ್ಕೆ 90ರೂ. ಹಾಗೂ ಮಾಸಿಕ ಪಾಸಿಗೆ 1,795ರೂ. ಪಾವತಿಸಬೇಕಿದೆ.

ಲಘು ವಾಣಿಜ್ಯ ವಾಹನಗಳು 85 ರೂ. (ಏಕಮುಖ), 125 ರೂ. (ದ್ವಿಮುಖ) ಹಾಗೂ ಮಾಸಿಕ ಪಾಸಿಗಾಗಿ 2,515 ರೂ.ಸವಾರರು ತೆರಬೇಕಾಗಿದೆ. ಇನ್ನು ಲಾರಿ/ಬಸ್ ಗಳು 170 ರೂ.(ಏಕಮುಖ), 250 ರೂ. (ದ್ವಿಮುಖ) ಹಾಗೂ ಮಾಸಿಕ ಪಾಸಿಗಾಗಿ 5.030 ರೂ. ನೀಡಬೇಕಾಗಿದೆ. ಭಾರಿ ನಿರ್ಮಾಣದ ಯಂತ್ರೋಪಕರಣ ಸಾಗಿಸುವ (ಅರ್ತ್ ಮೂವರ್ಸ್-ಇಎಂವಿ) ವಾಹನಗಳು 335ರೂ, (ಏಕಮುಖ), 505ರೂ, (ದ್ವಿಮುಖ) ಮತ್ತು ಮಾಸಿಕ 10,065ರೂ. ಗೆ ಹೆಚ್ಚಳ ಮಾಡಲಾಗಿದೆ.

ಅತ್ತಿಬೆಲೆ ಹೆದ್ದಾರಿ ಟೋಲ್ ನ ಪ್ರಸ್ತುತ ಶುಲ್ಕ (2022)

ಅತ್ತಿಬೆಲೆ ಹೆದ್ದಾರಿ ಟೋಲ್ ನ ಪ್ರಸ್ತುತ ಶುಲ್ಕ (2022)

ದ್ವಿಚಕ್ರ ವಾಹನಗಳಿಗೆ ಈ ಹೆದ್ದಾರಿಯಲ್ಲಿ ಯಾವುದೇ ಶುಲ್ಕ ವಿಧಿಸಲಾಗಿಲ್ಲ. ಇನ್ನು ಕಾರು/ಜೀಪು/ ವ್ಯಾನ್‌ಗಳು ಚಾಲಕರು ಏಕಮುಖ ಚಾಲನೆ 35ರೂ, ದ್ವಿಮುಖಕ್ಕೆ 55ರೂ. ಹಾಗೂ ಮಾಸಿಕ ಪಾಸಿಗೆ 1,080ರೂ. ಪಾವತಿಸಬೇಕಿದೆ. ಲಘು ವಾಣಿಜ್ಯ ವಾಹನಗಳು (ಎಲ್ ಸಿವಿ) 60ರೂ. (ಏಕಮುಖ), 90ರೂ. (ದ್ವಿಮುಖ) ಹಾಗೂ ಮಾಸಿಕ ಪಾಸಿಗಾಗಿ 1,795ರೂ. ಸವಾರರು ತೆರಬೇಕಾಗಿದೆ.

ಲಾರಿ/ಬಸ್ ಗಳು 120ರೂ.(ಏಕಮುಖ), 180ರೂ. (ದ್ವಿಮುಖ) ಹಾಗೂ ಮಾಸಿಕ ಪಾಸಿಗಾಗಿ 3595ರೂ. ನೀಡಬೇಕಾಗಿದೆ. ಭಾರಿ ನಿರ್ಮಾಣದ ಯಂತ್ರೋಪಕರಣ ಸಾಗಿಸುವ (ಅರ್ತ್ ಮೂವರ್ಸ್) ವಾಹನಗಳು 250ರೂ, (ಏಕಮುಖ), 375ರೂ, (ದ್ವಿಮುಖ) ಮತ್ತು ಮಾಸಿಕ 7550ರೂ.ಗೆ ಹೆಚ್ಚಳ ಮಾಡಲಾಗಿದೆ. ಈ ದರ ಜುಲೈ 1ರಿಂದ ಜಾರಿಗೆ ಬರಲಿದೆ.

ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಟೋಲ್ ಶುಲ್ಕ ಪಟ್ಟಿ (2022)

ವಾಹನಗಳು ಏಕಮುಖ ದ್ವಿಮುಖ ಮಾಸಿಕ
ಬೈಕ್ 25 35 720
ಕಾರು/ಜೀಪು/ವ್ಯಾನ್ 60 90 1 795
ಎಲ್ ಸಿವಿ 85 125 2 515
ಲಾರಿ/ಬಸ್ 170 250 5 030
ಇಎಂವಿ 335 50510 065

ಅತ್ತಿಬೆಲೆ ಹೆದ್ದಾರಿ ಟೋಲ್ ಶುಲ್ಕ ಪಟ್ಟಿ (2022)

ವಾಹನಗಳು ಏಕಮುಖ ದ್ವಿಮುಖ ಮಾಸಿಕ
ಬೈಕ್ 0 0 0
ಕಾರು/ಜೀಪು/ವ್ಯಾನ್ 35/td> 551 080
ಎಲ್ ಸಿವಿ 60 90 1 795
ಲಾರಿ/ಬಸ್ 120 180 3,595
ಇಎಂವಿ 250 3757 550

(2021) ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಟೋಲ್ ಶುಲ್ಕ ಪಟ್ಟಿ

ವಾಹನಗಳು ಏಕಮುಖ ದ್ವಿಮುಖ ಮಾಸಿಕ
ಬೈಕ್ 20 30 625
ಕಾರು/ಜೀಪು/ವ್ಯಾನ್ 50 80 1 570
ಎಲ್ ಸಿವಿ 75 110 2 195
ಲಾರಿ/ಬಸ್ 145 220 4 390
ಇಎಂವಿ 295 440 8 780
ರಸ್ತೆ ಸುಧಾರಣೆ ಆಗಿಲ್ಲ;

ರಸ್ತೆ ಸುಧಾರಣೆ ಆಗಿಲ್ಲ;

ಅಧಿಕಾರಿಗಳ ಮಾಹಿತಿ ಪ್ರಕಾರ ಟೋಲ್ ಶುಲ್ಕ ಶೇ 20ರಷ್ಟು ಏರಿಕೆಯಾಗಿದೆ. ಆದರೆ ನಿತ್ಯ ಇದೇ ಮಾರ್ಗವಾಗಿ ಸಂಚರಿಸುವ ಹಿರಿಯ ನಾಗರಿಕರೊಬ್ಬರು ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ. ವರ್ಷ ದಿಂದ ವರ್ಷ ರಸ್ತೆಯ ಪರಿಸ್ಥಿತಿ ಹದಗೆಟ್ಟಿದೆ ಎಂದು ದೂರಿದ್ದಾರೆ.

ರಸ್ತೆ ಸರಿ ಇಲ್ಲದ ಕಾರಣ ಈ ಭಾಗದ ಸುಗಮ ಸಂಚಾರವು ಹದಗೆಟ್ಟಿದೆ. ಆದರೆ ರಸ್ತೆ ಶುಲ್ಕ ಮಾತ್ರ ಸಮಯಕ್ಕೆ ಸರಿಯಾಗಿ ಹೆಚ್ಚಳ ಮಾಡುತ್ತಾರೆ. ಇದಲ್ಲದೇ ಮೇಲ್ಸೇತುವೆ ಮಧ್ಯಭಾಗದಲ್ಲಿ ಸಂಚಾರ ಪೊಲೀಸರು ತಪಾಸಣೆ ನಡೆಸುತ್ತಾರೆ ಎಂದು ರಸ್ತೆಯ ಪರಿಸ್ಥಿತಿ ವಿವರಿಸಿದ್ದಾರೆ.

English summary
People who using Electranic ctiy flyover should pay more for toll in Attibele Toll charges hiked new fare will come to effect from July 1.New toll price details here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X