ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತಿಬೆಲೆ ಹೆದ್ದಾರಿ ಟೋಲ್ ಶುಲ್ಕ ಏರಿಕೆ, ಜುಲೈ 1ರಿಂದ ಹೊಸ ದರ

|
Google Oneindia Kannada News

ಬೆಂಗಳೂರು ಜೂ. 25: ಬೆಂಗಳೂರಿನ ಸಿಲ್ಕ್ ಬೋರ್ಡ್‌ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿವರೆಗಿನ ಎಲಿವೆಟೆಡ್ ಎಕ್ಸ್‌ಪ್ರೆಸ್‌ ವೇ ಬಳಸುವವರು ಅತ್ತಿಬೆಲೆ ಹೆದ್ದಾರಿಯ ಟೋಲ್ ನಲ್ಲಿ ಹೆಚ್ಚು ಟೋಲ್ ಪಾವತಿ ಮಾಡಬೇಕು.

ಅತ್ತಿಬೆಲೆ ಹೆದ್ದಾರಿಯ ಟೋಲ್ ಶುಲ್ಕವನ್ನು ಜುಲೈ 1ರಿಂದ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ತಮಿಳುನಾಡಿಗೆ ಹೋಗುವವರು ಹೊಸೂರು ರಸ್ತೆಯಲ್ಲಿನ ಈ ಎಲಿವೆಟೆಡ್ ಎಕ್ಸಪ್ರೆಸ್ ವೇ ಮೂಲಕ ಹಾದು ಹೋಗುತ್ತಾರೆ.

ಹೊಸ ಟೋಲ್ ಶುಲ್ಕಗಳನ್ನು ಅಂತಿಮಗೊಳಿಸಲಾಗಿದೆ. ಜುಲೈ 1ರ ಬಳಿಕ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲೆ ತೆರಳವವರು ಏರಿಕೆಯಾದ ಹೊಸ ಟೋಲ್ ಶುಲ್ಕವನ್ನು ಪಾವತಿಸಬೇಕು.

Attibele Highway Toll Fee Hiked Come To Effect From July 1ST

ಹೊಸೂರು ರಸ್ತೆಯಲ್ಲಿ ಸಿಲ್ಕ್ ಬೋರ್ಡ ಜಂಕ್ಷನ್‌ನಿಂದ ಎಲೆಕ್ಟ್ರಾನಿಕ್ ಸಿಟಿ ವರೆಗಿನ ಸುಮಾರು 10 ಕಿ. ಮೀ. ಉದ್ದದ ಮೇಲ್ಸೇತುವೆ ಬಳಸುವ ಹಾಗೂ ತಮಿಳುನಾಡು ಗಡಿ ಸಮೀಪವಿರುವ 14.38 ಕಿ.ಮೀ. ಉದ್ದದ ಅತ್ತಿಬೆಲೆ ಹೆದ್ದಾರಿ ರಸ್ತೆಯಲ್ಲಿ ಸಾಗುವವರು ಹೊಸ ಶುಲ್ಕದ ವ್ಯಾಪ್ತಿಗೆ ಒಳಪಡುತ್ತಾರೆ.

ಟೋಲ್ ಶುಲ್ಕದ ವಿವರ; ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಒಪ್ಪಿಗೆ ಮೇರೆಗೆ ಬೆಂಗಳೂರು ಎಲಿವೆಟೆಡ್ ಟೋಲ್ ವೇ ಪ್ರವೈಟ್ ಲಿಮಿಟೆಡ್ (ಬಿಇಟಿಪಿಎಲ್) ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಟೋಲ್ ಶುಲ್ಕ ಹೆಚ್ಚಿಸಿದೆ. ವಾಹನ ಯಾವ ಪ್ರಕಾರದ್ದು ಎಂಬುದರ ಆಧಾರದ ಮೇಲೆ ಟೋಲ್ ನಿರ್ಧರಿಸಲಾಗಿದೆ.

Attibele Highway Toll Fee Hiked Come To Effect From July 1ST

ಈ ಹಿಂದಿನ ವರ್ಷ ದ್ವಿಚಕ್ರ ವಾಹನಗಳಿಗೆ ಯಾವುದೇ ಟೋಲ್ ಇರಲಿಲ್ಲ. ಜುಲೈ ನಂತರ ಒಂದು ಕಡೆ ಮತ್ತು ಎರಡು ಕಡೆ ಸಂಚರಿಸಲು ಪ್ರತ್ಯೇಕ ಶುಲ್ಕ ನಿಗದಿ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಬಿಇಟಿಪಿಎಲ್ ವಾರ್ಷಿಕವಾಗಿ ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಬಳಕೆದಾರರ ಶುಲ್ಕವನ್ನು ನಿರ್ಧರಿಸುತ್ತದೆ. ಪ್ರಸಕ್ತ ಜುಲೈ ನಂತರ ಹೆಚ್ಚಿಸಲಿರುವ ಶುಲ್ಕವು ಕಳೆದ ಮಾರ್ಚ31ರಲ್ಲಿ ಪರಿಶೀಲಿಸಲಾದ ಸೂಚ್ಯಂಕ ಆಧಾರದ ಮೇಲೆಯೇ ನಿರ್ಧರಿತವಾಗಿದೆ. ಇದು ಮುಂದಿನ 2023ರ ಜೂನ್ ವರೆಗೆ ಇರಲಿದೆ. ನಂತರ ಸಗಟು ಬೆಲೆ ಸೂಚ್ಯಂಕ ಆಧಾರದಲ್ಲಿ ಪುನಃ ಶುಲ್ಕ ಹೆಚ್ಚಿಸಬಹುದು.

ರಸ್ತೆ ಸುಧಾರಣೆ ಆಗಿಲ್ಲ; ಅಧಿಕಾರಿಗಳ ಮಾಹಿತಿ ಪ್ರಕಾರ ಟೋಲ್ ಶುಲ್ಕ ಶೇ 20ರಷ್ಟು ಏರಿಕೆಯಾಗಿದೆ. ಆದರೆ ನಿತ್ಯ ಇದೇ ಮಾರ್ಗವಾಗಿ ಸಂಚರಿಸುವ ಹಿರಿಯ ನಾಗರಿಕರೊಬ್ಬರು ಈ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ಯಾವುದೇ ಸುಧಾರಣೆಗಳು ಕಂಡು ಬಂದಿಲ್ಲ. ವರ್ಷ ದಿಂದ ವರ್ಷ ರಸ್ತೆಯ ಪರಿಸ್ಥಿತಿ ಹದಗೆಟ್ಟಿದೆ ಎಂದು ದೂರಿದ್ದಾರೆ.

ರಸ್ತೆ ಸರಿ ಇಲ್ಲದ ಕಾರಣ ಈ ಭಾಗದ ಸುಗಮ ಸಂಚಾರವು ಹದಗೆಟ್ಟಿದೆ. ಆದರೆ ರಸ್ತೆ ಶುಲ್ಕ ಮಾತ್ರ ಸಮಯಕ್ಕೆ ಸರಿಯಾಗಿ ಹೆಚ್ಚಳ ಮಾಡುತ್ತಾರೆ. ಇದಲ್ಲದೇ ಮೇಲ್ಸೇತುವೆ ಮಧ್ಯಭಾಗದಲ್ಲಿ ಸಂಚಾರ ಪೊಲೀಸರು ತಪಾಸಣೆ ನಡೆಸುತ್ತಾರೆ ಎಂದು ರಸ್ತೆಯ ಪರಿಸ್ಥಿತಿ ವಿವರಿಸಿದ್ದಾರೆ.

English summary
People who using Electronic city flyover should pay more for toll in Attibele Toll charges hiked new fare will come to effect from July 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X