ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರತೀಕಾರಕ್ಕಾಗಿ ಅಟೆಂಡರ್ ಮಹೇಶ್ ಗೌತಮಿಯನ್ನು ಕೊಂದ

|
Google Oneindia Kannada News

ಬೆಂಗಳೂರು, ಏ. 15 : ಕಾಡುಗೋಡಿಯ ಪ್ರಗತಿ ಕಾಲೇಜಿನ ಹಾಸ್ಟೆಲ್‌ನಲ್ಲಿ ನಡೆದ ಶೂಟೌಟ್ ರಹಸ್ಯ ಬಯಲಾಗಿದೆ. ವಿದ್ಯಾರ್ಥಿನಿಯರನ್ನು ಕೊಲ್ಲಲು ಆರೋಪಿ ಮಹೇಶ್ ಬಿಹಾರದಿಂದ ಪಿಸ್ತೂಲ್ ಖರೀದಿಸಿ ತಂದಿದ್ದ ಎಂಬುದು ತನಿಖೆಯಿಂದ ಸಾಬೀತಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರು ಈ ಕುರಿತು ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಗೌತಮಿಯನ್ನು ಹತ್ಯೆ ಮಾಡಿದ ಮಹೇಶ್ ಹಾಸ್ಟೆಲ್ ಕ್ಯಾಂಪಸ್‍ನಲ್ಲಿ ಓಡಾಡಿದ್ದಕ್ಕೆ ವಿದ್ಯಾರ್ಥಿನಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ಮಾಡಿದ್ದ.[ದ್ವಿತೀಯ ಪಿಯು ವಿದ್ಯಾರ್ಥಿನಿ ಗುಂಡಿಗೆ ಬಲಿ]

Mahesh

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಗೌತಮಿ ಮೇಲೆ ಗುಂಡಿನ ದಾಳಿ ನಡೆದ ಮಾ.31ರ ಹಿಂದಿನ ದಿನವೂ ಮಹೇಶ್ ಹಾಸ್ಟೆಲ್ ಆವರಣಕ್ಕೆ ಬಂದಿದ್ದ. ಆಗ ಮಹೇಶ್‌ನೊಂದಿಗೆ ವಿದ್ಯಾರ್ಥಿನಿಯರು ಜಗಳವಾಡಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಮಹೇಶ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದ. [ವಿದ್ಯಾರ್ಥಿನಿ ಗೌತಮಿ ಕೊಂದಿದ್ದ ಮಹೇಶ್ ಬಂಧನ]

ಜಗಳವಾಡಿದ್ದರು : ಮಾ.30ರ ರಾತ್ರಿ ಹಾಸ್ಟೆಲ್‌ ಆವರಣದಲ್ಲಿ ಮಹೇಶ್ ಸುತ್ತಾಡುತ್ತಿದ್ದ ಇದನ್ನು ಗಮನಿಸಿದ ಗೌತಮಿ ಮತ್ತು ಶಿರಿಷಾ ಆತನನ್ನು ಪ್ರಶ್ನೆ ಮಾಡಿದ್ದರು, ಹಾಸ್ಟೆಲ್ ಆವರಣಕ್ಕೆ ಬರಬಾರದು ಎಂದು ಆತನೊಂದಿಗೆ ಗಲಾಟೆ ಮಾಡಿದ್ದರು.

ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಮಹೇಶ್ ಮಾ.31ರ ರಾತ್ರಿ ಹಾಸ್ಟೆಲ್‌ಗೆ ನುಗ್ಗಿ ಗೌತಮಿ ಮತ್ತು ಶಿರಿ‍‍‍ಷಾ ಮೇಲೆ ಗುಂಡಿನ ದಾಳಿ ನಡೆಸಿದ್ದ. ತಲೆಗೆ ಗುಂಡು ತಗುಲಿದ ಗೌತಮಿ ಮೃತಪಟ್ಟರೆ ಶಿರಿಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಚೇತರಿಸಿಕೊಳ್ಳುತ್ತಿದ್ದಾಳೆ.

14 ಸಾವಿರ ರೂ ಕೊಟ್ಟು ತಂದಿದ್ದ : ಅಟೆಂಡರ್ ಮಹೇಶ್ ಗೌತಮಿಯನ್ನು ಕೊಲ್ಲಲು ಬಳಸಿದ ಪಿಸ್ತಲ್‌ಅನ್ನು ಎಲ್ಲಿ ಖರೀದಿಸಿದ್ದ? ಎಂಬ ಪ್ರಶ್ನೆ ಕುತೂಹಲ ಮೂಡಿಸಿತ್ತು. ಪೊಲೀಸರ ತನಿಖೆಯಿಂದ ಮಹೇಶ್ ಪಿಸ್ತೂಲ್‌ಅನ್ನು ಬಿಹಾರದಲ್ಲಿ ಖರೀದಿಸಿದ್ದ ಎಂಬುದು ಬೆಳಕಿಗೆ ಬಂದಿದೆ. 14 ಸಾವಿರ ರೂ. ನೀಡಿ ಪಿಸ್ತೂಲ್ ಮತ್ತು ಗುಂಡುಗಳನ್ನು ಬಿಹಾರದಿಂದ ಖರೀದಿ ಮಾಡಿಕೊಂಡು ಬಂದಿದ್ದ.

ಆಗುಂಬೆ ಮೂಲದ ಮಹೇಶ್ 2012ರಿಂದ ಕಾಡುಗೋಡಿಯ ಪ್ರಗತಿ ಪಿಯು ಕಾಲೇಜಿನಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದ. ಮಾ.31ರಂದು ಕಾಲೇಜಿನ ಹಾಸ್ಟೆಲ್‌ಗೆ ನುಗ್ಗಿ ತುಮಕೂರು ಜಿಲ್ಲೆಯ ಪಾವಗಡ ಮೂಲದ ಗೌತಮಿ ಮೇಲೆ ಗುಂಡಿನ ದಾಳಿ ನಡೆಸಿ ಆಕೆಯನ್ನು ಕೊಲೆ ಮಾಡಿದ್ದ.

English summary
The Attender Mahesh, who shot down 2nd PUC student Gowthami at residential PU college hostel in Kadugodi Bengaluru on March 31, had purchased weapon form Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X