ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಜೆ ಹಳ್ಳಿ ಆರೋಪಿಗಳ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ದೂರು

|
Google Oneindia Kannada News

ಬೆಂಗಳೂರು ಆಗಸ್ಟ್‌ 14: ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ ಪುಲಕೇಶಿನಗರ ಮೀಸಲು ಕ್ಷೇತ್ರದ ಶಾಸಕ ಹಾಗೂ ಅವರ ಕುಟುಂಬದವರ ಮನೆಯ ಮೇಲೆ ದಾಳಿ ಮಾಡಲಾಗಿದೆ. ಅಪಾರ ಆಸ್ತಿ-ಪಾಸ್ತಿ ನಷ್ಟವುಂಟು ಮಾಡಿ ನಗ-ನಾಣ್ಯ ದೋಚಿ, ನಂತರ ಮನೆಗೆ ಬೆಂಕಿ ಹಾಕಿ ಕೋಟ್ಯಾಂತರ ರೂ. ಹಾನಿ ಮಾಡಿರುವ ಹಾಗೂ ಪತ್ರಕರ್ತರ ಮೇಲೆ ದಾಳಿ ನಡೆಸಿರುವ ರಾಷ್ಟ್ರದ್ರೋಹಿ ಆರೋಪಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ ಎಸ್‌ ರಘು ಅವರ ನೇತೃತ್ವದಲ್ಲಿ ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಪ್ರತಿಭಟನಾ ಧರಣಿಯನ್ನು ನಡೆಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಡಾ ಸಿ ಎಸ್‌ ರಘು, ಕೆ.ಜಿ ಹಳ್ಳಿ ಹಾಗೂ ಡಿ.ಜೆ. ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾವಿರಾರು ದುಷ್ಕರ್ಮಿಗಳು ಅಕ್ರಮಕೂಟ ರಚಿಸಿಕೊಂಡು ಅಪರಾಧಿಕ ಪೂರ್ವಯೋಜಿತ ಒಳಸಂಚು ನಡೆಸಿ ಏಕಾಏಕಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಖಂಡ ಶ್ರೀನಿವಾಸ್‍ಮೂರ್ತಿ ಹಾಗೂ ಅವರ ಕುಟುಂಬಸ್ಥರ ಮನೆಯ ಮೇಲೆ ಹಾಗೂ ಪತ್ರಕರ್ತರ ಮೇಲೆ ಮಾರಕಾಸ್ತ್ರಗಳು, ಪೆಟ್ರೋಲ್ ಬಾಂಬ್‍ಗಳ ಜೊತೆ ದಾಳಿಮಾಡಿದ್ದಾರೆ.

ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'ಪೊಲೀಸ್ ಹುದ್ದೆಗಳು ಬಿಕರಿಯಾದ ನಂತರ 'ಊರಿಗೆ ಬಿದ್ದ ಬೆಂಕಿ'

ಅವರ ಮನೆಯ ಪೀಠೋಪಕರಣಗಳನ್ನು ದ್ವಂಸ ಮಾಡಿ ಹಾಗೂ ಅಲ್ಲಿದ್ದ ಲಕ್ಷಾಂತರ ರೂ. ಬೆಲೆಬಾಳುವ ವಾಹನಗಳಿಗೆ ಬೆಂಕಿ ಹಚ್ಚಿ ಮನೆಯಲ್ಲಿದ್ದ ನಗ-ನಾಣ್ಯಗಳನ್ನು ದೋಚಿ ಹಾಗೂ ಮನೆಗೂ ಬೆಂಕಿ ಹಾಕಿ ಸಂಪೂರ್ಣ ನಾಶ ಮಾಡಿರುತ್ತಾರೆ. ಈ ಬಗ್ಗೆ ಡಿ.ಜೆ.ಹಳ್ಳಿ ಹಾಗೂ ಕೆ.ಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದೆ.

Attack on Dalit MLA Akhanda Srinivas, Book accuse under SC/ST Act

ಈ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಥಳೀಯ ಶಾಸಕರನ್ನು ಕೊಲೆ ಮಾಡುವ ಪೂರ್ವಯೋಚಿತ ದುರುದ್ದೇಶದಿಂದಲೇ ದುಷ್ಕರ್ಮಿಗಳು ಈ ಕಾನೂನುಬಾಹೀರ ಕೃತ್ಯ ಎಸಗಿರುತ್ತಾರೆ ಹಾಗೂ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರಾಗಿದ್ದು, ಅವರು ಸತತವಾಗಿ ಸದರಿ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ರಾಜ್ಯದಲ್ಲೇ ಅತಿ ಹೆಚ್ಚು ಮತಗಳಿಂದ ಆಯ್ಕೆಯಾಗಿರುವುದನ್ನು ಸಹಿಸದ ಕೆಲವು ರಾಜಕೀಯ ಮುಖಂಡರು ಪಟ್ಟಭದ್ರ ಹಿತಾಸಕ್ತಿಗಳು ಈ ಕೃತ್ಯದ ಹಿಂದೆ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
Attack on Dalit MLA Akhanda Srinivas, Book accuse under SC/ST Act

ಒಬ್ಬ ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ರಾಜಕೀಯವಾಗಿ ಸ್ವಂತ ಶಕ್ತಿಯಿಂದ ಈ ಮಟ್ಟಕ್ಕೆ ಬೆಳೆದಿರುವುದನ್ನು ಸಹಿಸದ ವ್ಯಕ್ತಿಗಳು ಅವರನ್ನು ಜೀವಂತವಾಗಿ ಮುಗಿಸಲು ಮತ್ತು ರಾಜಕೀಯವಾಗಿ ಅವರನ್ನು ಅಂತ್ಯಗೊಳಿಸಲು ಈ ರೀತಿಯ ವ್ಯವಸ್ಥಿತ ಒಳಸಂಚು ರೂಪಿಸಿರುತ್ತಾರೆ.

ರಾತ್ರೋರಾತ್ರಿ ಬೆಂಗಳೂರಿನಿಂದ ಬಳ್ಳಾರಿಗೆ 80 ಆರೋಪಿಗಳು ಶಿಫ್ಟ್!ರಾತ್ರೋರಾತ್ರಿ ಬೆಂಗಳೂರಿನಿಂದ ಬಳ್ಳಾರಿಗೆ 80 ಆರೋಪಿಗಳು ಶಿಫ್ಟ್!

ಕರ್ನಾಟಕದ ಇತಿಹಾಸದಲ್ಲೇ ವಿಧಾನಸಭಾ ಕ್ಷೇತ್ರದ ಶಾಸಕನ ಮನೆಯ ಮತ್ತು ಅವರ ಕುಟುಂಬಸ್ಥರ ಮನೆಯ ಮೇಲೆ ಈ ರೀತಿ ದಾಳಿ ಮಾಡಿರುವುದು ಇದೇ ಮೊದಲಾಗಿರುತ್ತದೆ. ಇದುವರೆಗೂ ಯಾವ ಮೇಲ್ಜಾತಿಯ ರಾಜಕೀಯ ವ್ಯಕ್ತಿಯ ವೈಯುಕ್ತಿಕ ಜೀವನದ ಮೇಲೆ ಈ ರೀತಿಯ ದಾಳಿಯಾಗಿರುವುದಿಲ್ಲ.

Attack on Dalit MLA Akhanda Srinivas, Book accuse under SC/ST Act

ಒಬ್ಬ ಪರಿಶಿಷ್ಟ ಜಾತಿಯ ಜನಾಂಗದ ಶಾಸಕ ಹಾಗೂ ಅವರ ಕುಟುಂಬದವರ ಮೇಲೆ ಅನ್ಯಕೋಮಿನವರು ಈ ರೀತಿಯ ದೌರ್ಜನ್ಯ ನಡೆಸಿದರೆ ಇನ್ನೂ ಸಾಮಾನ್ಯ ದಲಿತ ಜನರ ಸ್ಥಿತಿ ಏನೆಂಬುದು ಹಾಗೂ ಅವರ ರಕ್ಷಣೆ ಹೇಗೆ ಎಂಬುದು ತಿಳಿಯದಾಗಿದೆ. ಸದರಿ ಶಾಸಕರ ರಾಜಕೀಯ ಬೆಳವಣಿಗೆ ಸಹಿಸದ ಕೆಲವು ಅನ್ಯ ಕೋಮಿನ ನಾಯಕರು ದುಷ್ಕರ್ಮಿಗಳ ಜೊತೆ ಸೇರಿ ಪೂರ್ವಯೋಜಿತ ಕೃತ್ಯ ನಡೆಸಿರುವುದು ಸ್ಪಷ್ಟವಾಗಿರುತ್ತದೆ ಹಾಗೂ ಶಾಸಕರು ತಮ್ಮ ಹಾಗೂ ತಮ್ಮ ಕುಟುಂಬದವರ ಪ್ರಾಣ ಬೆದರಿಕೆಗೆ ಹೆದರಿ ದೂರು ನೀಡಲೂ ಸಹ ಭಯಪಡುವ ಸ್ಥಿತಿ ನಿರ್ಮಾಣವಾಗಿರುತ್ತದೆ.

ಬೆಂಗಳೂರು ಹಿಂಸಾಚಾರ: ಕೆಜಿ ಹಳ್ಳಿ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಬಂಧನಬೆಂಗಳೂರು ಹಿಂಸಾಚಾರ: ಕೆಜಿ ಹಳ್ಳಿ ಕಾರ್ಪೋರೇಟರ್ ಪತಿ ಕಲೀಂ ಪಾಷಾ ಬಂಧನ

Attack on Dalit MLA Akhanda Srinivas, Book accuse under SC/ST Act

ಈ ಹಿನ್ನಲೆಯಲ್ಲಿ ಪುಲಕೇಶಿನಗರ ಮೀಸಲು ಕ್ಷೇತ್ರದ ಶಾಸಕರ ಹಾಗೂ ಅವರ ಸಂಬಂಧಿಕರ ಮನೆಯ ಮೇಲೆ ಆಗಿರುವ ದೌರ್ಜನ್ಯವನ್ನು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಹಾಗೂ ಪತ್ರಕರ್ತರ ಮೇಲೆ ಆಗಿರುವ ಹಲ್ಲೆಯನ್ನು ಭಾರತೀಯ ದಂಡ ಸಂಹಿತೆ ಕಾಯ್ದೆಗಳಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಅವರಿಗಾಗಿರುವ ಕೋಟ್ಯಾಂತರ ರೂಪಾಯಿಗಳ ನಷ್ಟವನ್ನು ಭರಿಸಿ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಶಾಸಕರ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿಕೊಡಬೇಕೆಂದು ಈ ಮೂಲಕ ದ.ಸಂ.ಸ ಗೃಹ ಸಚಿವರಿಗೆ ಮನವಿ ಸಲ್ಲಿಸಿದೆ.

English summary
Karnataka Dalit Sangarsh Samiti today protested condemned Attack on Dalit MLA Akhanda Srinivas and journalist. Samiti demanded to book accuse under SC/ST act.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X