ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಎಟಿಎಂ ದೋಚಲು ಬಂದು ಸಿಕ್ಕಿಬಿದ್ದರು

|
Google Oneindia Kannada News

ಬೆಂಗಳೂರು, ಫೆ.2 : ಬೆಂಗಳೂರಿನ ಎಟಿಎಂ ಮೇಲೆ ಮತ್ತೆ ದರೋಡೆಕೋರರ ಕಣ್ಣು ಬಿದ್ದಿದೆ. ಇಂದಿರಾ ನಗರದ ಕೇಂಬ್ರಿಡ್ಜ್ ರಸ್ತೆಯಲ್ಲಿ ಎಟಿಎಂ ದೋಚಲು ಬಂದ ಖದೀಮರಿಗೆ ಸಾರ್ವಜನಿಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಸೋಮವಾರ ಮುಂಜಾನೆ 3 ಗಂಟೆ ಸುಮಾರಿಗೆ ಕೇಂಬ್ರಿಡ್ಜ್ ರಸ್ತೆಯಲ್ಲಿನ ಕೆನರಾ ಬ್ಯಾಂಕ್ ಎಟಿಎಂ ಬಳಿ ಬೈಕ್‌ನಲ್ಲಿ ಬಂದ ಇಬ್ಬರು ಸಶಸ್ತ್ರಧಾರಿ ದರೋಡೆಕೋರರು ಎಟಿಎಂಗೆ ನುಗ್ಗಿ ಹಣ ದೋಚಲು ಪ್ರಯತ್ನ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜನರು ಇಬ್ಬರನ್ನು ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. [ಎಟಿಎಂನಲ್ಲಿ ವಂಚನೆ ನಡೆದಾಗ ಹೀಗೆ ಮಾಡಿ]

Bengaluru

ಸಿಕ್ಕಿಬಿದ್ದವರನ್ನು ಆರ್‌.ಪಿ. ಗುಪ್ತಾ ಹಾಗೂ ಮ್ಯಾಥ್ಯೂಸ್‌ ಎಂದು ಗುರುತಿಸಲಾಗಿದೆ. ಖದೀಮರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಜನರು ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ದರೋಡೆಕೋರರು ಲಾಂಗು, ಮಚ್ಚುಗಳನ್ನು ಹಿಡಿದುಕೊಂಡು ಬಂದಿದ್ದರು ಎಂದು ಜನರು ಮಾಹಿತಿ ನೀಡಿದ್ದಾರೆ. [ಎಟಿಎಂಗೆ ಭದ್ರತೆ ಒದಗಿಸಿ]

ಎಟಿಎಂಗೆ ಸಿಸಿಟಿವಿ ಮತ್ತು ಸೈರನ್ ಆಳವಡಿಸಲಾಗಿತ್ತು. ಇಂದಿರಾ ನಗರ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದು ಅವುಗಳ ಪರಿಶೀಲನೆಯನ್ನು ನಡೆಸುತ್ತಿದ್ದಾರೆ. ಇಬ್ಬರು ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

English summary
A Canara Bank bank ATM robbery attempt in Indiranagar, Bengaluru on Monday early morning. People caught 2 robbers and handover them to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X