ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಎಟಿಎಂ ಮೋಸದ ಜಾಲ ಪತ್ತೆ, ಲಕ್ಷಾಂತರ ಹಣ ಗುಳುಂ

By Prasad
|
Google Oneindia Kannada News

ಬೆಂಗಳೂರು, ಜುಲೈ 05 : ಜಿಎಸ್ಟಿ ಕೃಪೆಯಿಂದಾಗಿ ಹಲವಾರು ತೆರಿಗೆ ದರಗಳು ಏರಿಳಿತ ಕಂಡು ನಾಗರಿಕ ಕಂಗಾಲಾಗಿರುವ ಹೊತ್ತಿನಲ್ಲಿ ಹಣಕಾಸಿಗೆ ಸಂಬಂಧಿಸಿದಂತೆ ಮತ್ತೊಂದು ಸಂಕಷ್ಟದಲ್ಲಿ ಬೆಂಗಳೂರಿನ ಶ್ರೀಸಾಮಾನ್ಯ ಸಿಲುಕಿದ್ದಾನೆ.

ಅದು ಎಟಿಎಂ ಮೋಸ. ಕೆಲವೊಂದು ಎಟಿಎಂಗಳಲ್ಲಿ ನಟೋರಿಯಸ್ ಗ್ಯಾಂಗ್ ವೊಂದು ಎಟಿಎಂಗಳಲ್ಲಿ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳಿಂದ ಮಾಹಿತಿಯನ್ನು ಕದಿಯುವಂಥ ಆಧುನಿಕ ಹಾರ್ಡ್ ವೇರ್ (ಸ್ಕಿಮ್ಮರ್ಸ್) ಇನ್ ಸ್ಟಾಲ್ ಮಾಡಿದೆ ಎಂದು ಬೆಂಗಳೂರು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆಎಲ್ಲಾ ಸಮಸ್ಯೆಗಳಿಗೂ ಒಂದೇ ಪರಿಹಾರ, 'ನಮ್ಮ100' ಸಹಾಯವಾಣಿಗೆ ಚಾಲನೆ

ATM fraud shock for Bengaluru residents

ಹೀಗೆ ಶಂಕೆ ವ್ಯಕ್ತಪಡಿಸಲು ಕಾರಣ, ಬೆಂಗಳೂರಿನ 200ಕ್ಕೂ ಹೆಚ್ಚು ನಾಗರಿಕರು, ಕಳೆದ ಒಂದು ವಾರದಲ್ಲಿ 10 ಲಕ್ಷ ರುಪಾಯಿಗೂ ಹೆಚ್ಚು ಹಣವನ್ನು ಈ ಮೋಸದ ಜಾಲದಿಂದ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಲ್ಲ ಎಟಿಎಂಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲಾಗಿದ್ದರೂ ಇಷ್ಟೊಂದು ಹಣವನ್ನು ಕದಿಯಲು ಹೇಗೆ ಸಾಧ್ಯ ಎಂಬುದು ಚಿದಂಬರ ರಹಸ್ಯವಾಗಿದೆ. ಮೋಸ ಹೋದವರಿಂದ ಸೈಬರ್ ಕ್ರೈಂ ಇಲಾಖೆಗೆ ಈಗಾಗಲೆ ಹಲವಾರು ದೂರುಗಳು ಬಂದಿವೆ.

ಎಟಿಎಂಯಂತ್ರಗಳ ಮೇಲೆ ಬಿತ್ತು ಜಿಎಸ್ ಟಿ ಬರೆ!ಎಟಿಎಂಯಂತ್ರಗಳ ಮೇಲೆ ಬಿತ್ತು ಜಿಎಸ್ ಟಿ ಬರೆ!

ATM fraud shock for Bengaluru residents

ನಾವು ಮೋಸ ಹೋಗುತ್ತಿದ್ದೇವೆ ಎಂದು ತಿಳಿಯುವುದು ಹೇಗೆ? ಮೋಸವಾಗುತ್ತಿರುವುದನ್ನು ಶ್ರೀಸಾಮಾನ್ಯರು ಪತ್ತೆ ಹಚ್ಚುವುದು ಹೇಗೆ? ಈಗ ಕಳೆದುಕೊಂಡಿರುವ ಹಣವನ್ನು ವಾಪಸ್ ಪಡೆಯುವುದು ಹೇಗೆ? ಸ್ಕಿಮ್ಮರ್ಸ್ ಎಂದರೇನು? ಅದರ ಬಗ್ಗೆ ಹೆಚ್ಚು ತಿಳಿವಳಿಕೆ ಕೊಡಿ ಎಂದು ಪೊಲೀಸರನ್ನು ಕೇಳುತ್ತಿದ್ದಾರೆ.

ರಜಿತ್ ಎಂಬುವವರ ಡೆಬಿಟ್ ಕಾರ್ಡ್ ನಿಂದ 30 ಸಾವಿರ ರುಪಾಯಿ ಲಪಟಾಯಿಸಲಾಗಿದೆ. ತನ್ನ ಬಳಿಯೇ ಡೆಬಿಟ್ ಕಾರ್ಡ್ ಇದ್ದು, ಯಾರೊಂದಿಗೂ ಟಿಪಿನ್ ಶೇರ್ ಮಾಡಿಕೊಂಡಿರದಿದ್ದರೂ ಹೇಗೆ ಕದಿಯಲು ಸಾಧ್ಯವಾಯಿತು ಎಂದು ಅವರು ಪ್ರಶ್ನಿಸಿದ್ದಾರೆ.

Recommended Video

ಮತ್ತೊಬ್ಬರು, ನಿನ್ನೆ ನನ್ನ ಕ್ರೆಡಿಟ್ ಕಾರ್ಡ್ ಬಳಸಿ ಎರಡು ವಹಿವಾಟು ಮಾಡಲಾಗಿದೆ. ಓಟಿಪಿ ಇಲ್ಲದೆ ಕ್ರೆಡಿಟ್ ಕಾರ್ಡ್ ಟ್ರಾನ್ಸಾಕ್ಷನ್ ಮಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಕ್ಕೆ, ಅಮೆರಿಕದಲ್ಲಿ ಕ್ರೆಡಿಟ್ ಕಾರ್ಡ್ ವಹಿವಾಟು ಮಾಡಲು ಓಟಿಪಿ ಬೇಕಾಗಿಲ್ಲ ಎಂದು ಮಗದೊಬ್ಬರು ಉತ್ತರಿಸಿದ್ದಾರೆ.

ಒಟ್ಟಿನಲ್ಲಿ ಈ ಪ್ರಕರಣಗಳು ಪೊಲೀಸರಿಗೆ ಮಾತ್ರವಲ್ಲ ಬ್ಯಾಂಕಿನವರಿಗೂ ಕೂಡ ತಲೆನೋವಾಗಿ ಪರಿಣಮಿಸಿದೆ. ಸೈಬರ್ ಕ್ರೈಂ ತಜ್ಞರ ಸಹಾಯದಿಂದ ಬ್ಯಾಂಕಿನವರು ಕೂಡಲೆ ಇದರ ಮೂಲವನ್ನು ಪತ್ತೆ ಹಚ್ಚುವುದರಿಂದ ಮತ್ತಷ್ಟು ಮೋಸಗಳನ್ನು ತಡೆಯಬಹುದು.

English summary
Additional commissioner of police (Crime) has sent this message on twitter : Kindly beaware of SKIMMERS (additional hardware to thieve all details of your Credit/Debit cards) that may be mounted on ATM machines. Many Bengaluru people have lost money through ATM fraud.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X