ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಎಟಿಎಂಗೆ ಹಣ ಹಾಕುವ ಸಿಬ್ಬಂದಿ 1 ಕೋಟಿಯೊಂದಿಗೆ ಪರಾರಿ!

|
Google Oneindia Kannada News

ಬೆಂಗಳೂರು, ಮೇ 18 : ಬೆಂಗಳೂರು ನಗರದಲ್ಲಿ ಎಟಿಎಂಗೆ ಹಣ ಹಾಕಬೇಕಿದ್ದ ಸಿಬ್ಬಂದಿಯೊಬ್ಬರು 1 ಕೋಟಿ ರೂ. ಹಣದೊಂದಿಗೆ ಪರಾರಿಯಾಗಿರುವ ಘಟನೆ ನಡೆದಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಸೆಕ್ಯೂರ್ ವಾಲ್ಯೂ ಎಂಬ ಎಟಿಎಂಗೆ ಹಣ ತುಂಬಿಸುವ ಸಂಸ್ಥೆಯ ಸಿಬ್ಬಂದಿ ಅಶೋಕ್ ಪರಾರಿಯಾಗಿದ್ದಾರೆ. ಮೇ 14ರಂದು ಎಟಿಎಂಗೆ ತುಂಬಿಸಲು 4.5 ಕೋಟಿ ಹಣವನ್ನು ಎಸ್‌ಬಿಐನಿಂದ ಡ್ರಾ ಮಾಡಬೇಕಿತ್ತು. 3.5 ಕೋಟಿ ಡ್ರಾ ಮಾಡಿ ರಾಮು, ಶ್ರೀನಿವಾಸ್‌ ಎಂಬುವ ಸಿಬ್ಬಂದಿಗೆ ನೀಡಿದ್ದರು.

ಎಟಿಎಂ ಕಳ್ಳರ ಬಂಧನಕ್ಕೆ ನೆರವಾದ ಬ್ಯಾಂಕಿನ ಕಂಟ್ರೋಲ್ ರೂಮ್ ಎಟಿಎಂ ಕಳ್ಳರ ಬಂಧನಕ್ಕೆ ನೆರವಾದ ಬ್ಯಾಂಕಿನ ಕಂಟ್ರೋಲ್ ರೂಮ್

ಬಳಿಕ 1 ಕೋಟಿ ರೂ. ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ. ಸೆಂಟ್ ಮಾರ್ಕ್‌ ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ನಿಂದ ಹಣವನ್ನು ಡ್ರಾ ಮಾಡಿದ್ದಾರೆ. ಸೆಕ್ಯೂರ್ ವಾಲ್ಯೂ ಸಂಸ್ಥೆ ಈ ವಿಚಾರವನ್ನು ಖಚಿತಪಡಿಸಿದೆ.

ಹಸಿವಿನ ನೋವು-2: ಅಮೆರಿಕಾದಲ್ಲಿ ಹಣ ಕೊಟ್ಟರೂ ಆಹಾರ ಸಿಗುತ್ತಿಲ್ಲವೇಕೆ? ಹಸಿವಿನ ನೋವು-2: ಅಮೆರಿಕಾದಲ್ಲಿ ಹಣ ಕೊಟ್ಟರೂ ಆಹಾರ ಸಿಗುತ್ತಿಲ್ಲವೇಕೆ?

 ATM Cash Van Employee Escape With Rs 1 crore

ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅಶೋಕ್ ವಿರುದ್ಧ ದೂರು ನೀಡಲಾಗಿದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. 1 ಕೋಟಿ ಹಣ ನೀಡಿದರೆ ಗಂಟೆಗೆ ಶೇ 10ರಷ್ಟು ಕಮೀಷನ್ ನೀಡುವುದಾಗಿ ಸಂತೋಷ್ ಎಂಬ ವ್ಯಕ್ತಿ ಆಮಿಷ ವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.

ಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿ

ಕಮೀಷನ್ ಆಸೆಗೆ ಬಿದ್ದು ಹಣವನ್ನು ಬ್ಯಾಂಕ್‌ನಿಂದ ಡ್ರಾ ಮಾಡಿ ನೀಡಲಾಗಿದೆ ಎಂಬ ಮಾಹಿತಿ ಇದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಹಣ ಪಡೆದುಕೊಂಡು ಸಂತೋಷ್ ಎರಡು ಗಂಟೆಯಾದರೂ ಕೈಗೆ ಸಿಕ್ಕಿಲ್ಲ. ಇತ್ತ ಕಮೀಷನ್ ಸಹ ಬಂದಿಲ್ಲ.

ಬ್ಯಾಂಕ್‌ನಿಂದ ವಿತ್ ಡ್ರಾ ಆದ ಹಣ ಎಟಿಎಂಗೆ ಜಮಾವಣೆಯಾಗದ ಕಾರಣ ಸಂಸ್ಥೆಯ ಸಿಬ್ಬಂದಿ ಹುಡುಕಾಟ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಹಣ ಪಡೆದು ವಂಚಿಸಿದ್ದ ಸಂತೋಷ್ ಈಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಆದರೆ, ಇತನಿಗೆ ಸಹಾಯ ಮಾಡಿದ ಮತ್ತೊಬ್ಬನಿಗಾಗಿ ಹುಡುಕಾಟ ನಡೆದಿದೆ.

English summary
ATM cash van employee escape with Rs 1 crore in Bengaluru. He has assigned to refill ATM machines with 4.5 crore. Complaint registered in Cubbon park police station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X