ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಟಿಎಂ ಹಲ್ಲೆ ಪ್ರಕರಣ : ಆಂಧ್ರದಲ್ಲಿ ಆರೋಪಿ ಸುಳಿವು

|
Google Oneindia Kannada News

ಬೆಂಗಳೂರು, ನ. 21 : ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರು ನಗರದ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ಯೋತಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಬ್ಯಾಂಕ್ ಹೇಳಿದೆ. ಹಲ್ಲೆ ನಡೆಸಿದ ವ್ಯಕ್ತಿಯ ಸುಳಿವು ಆಂಧ್ರಪ್ರದೇಶದಲ್ಲಿ ಪತ್ತೆಯಾಗಿದೆ.

ಜ್ಯೋತಿ ಅವರ ಮೆದುಳಿಗೆ ಹೊಕ್ಕಿದ್ದ ಮೂಳೆಯ ಚೂರುಗಳನ್ನು ಹೊರತೆಗೆದಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಜಿಎಸ್ ಆಸ್ಪತ್ರೆಯ ನರರೋಗ ವಿಭಾಗದ ಮುಖ್ಯಸ್ಥ ಡಾ.ಎನ್.ಕೆ.ವೆಂಕಟರಮಣ ಹೇಳಿದ್ದಾರೆ. ಬುಧವಾರ ಗೃಹ ಸಚಿವ ಕೆ.ಜೆ.ಜಾರ್ಜ್, ಸಚಿವೆ ಉಮಾಶ್ರೀ ಮುಂತಾದವರು ಆಸ್ಪತ್ರೆಗೆ ಭೇಟಿ ನೀಡಿ ಜ್ಯೋತಿ ಅವರ ಆರೋಗ್ಯ ವಿಚಾರಿಸಿದ್ದಾರೆ. (ಜ್ಯೋತಿ ಉದಯ್ ಆರೋಗ್ಯದಲ್ಲಿ ಸುಧಾರಣೆ)

ATM

ನಗರ ಪೊಲೀಸರು ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಂಟು ತಂಡಗಳನ್ನು ಆರೋಪಿಯ ಪತ್ತೆಗಾಗಿ ರಚಿಸಲಾಗಿದ್ದು, ಎಲ್ಲಾ ತಂಡಗಳ ಉಸ್ತುವಾರಿಯನ್ನು ಸ್ವತಃ ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ನಿರ್ವಹಿಸುತ್ತಿದ್ದಾರೆ. ಆರೋಪಿ ತೆಗೆದುಕೊಂಡು ಹೋಗಿರುವ ಜ್ಯೋತಿ ಅವರ ಮೊಬೈಲ್ ಜಾಡು ಹಿಡಿದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಆರೋಪಿ ಬಗ್ಗೆ ಮಾಹಿತಿ : ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿ ಅವರ ಮೊಬೈಲ್ ದೋಚಿರುವ ಆರೋಪಿ ಅದನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದುಪುರದಲ್ಲಿ ಮಾರಾಟ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ದೊರಕಿದೆ. ಬೆಂಗಳೂರಿನ ಸಿಸಿಬಿ ಪೊಲೀಸರು ಆರೋಪಿಯಿಂದ ಮೊಬೈಲ್ ಖರೀಸಿದಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಜ್ಯೋತಿ ಅವರ ಮೇಲೆ ಹಲ್ಲೆ ನಡೆದ ದಿನ ಬೆಳಗ್ಗೆ 8.30ರ ಸುಮಾರಿಗೆ ಬ್ಯಾಂಕ್ ಸಿಬ್ಬಂದಿ ಜ್ಯೋತಿ ಅವರ ಮೊಬೈಲ್ ಗೆ ಕರೆ ಮಾಡಿದ್ದಾರೆ. ಆಗ ಅದು ನಾಟ್ ರೀಚಬಲ್ ಆಗಿತ್ತು. ಅದೇ ಅವರ ಮೊಬೈಲ್ ಗೆ ಬಂದ ಕೊನೆಯ ಕರೆಯಾಗಿತ್ತು. ಸದ್ಯ ಪೊಲೀಸರು ಅವರ ಮೊಬೈಲ್ ಕರೆಗಳ ವಿವರ ಸಂಗ್ರಹಿಸುತ್ತಿದ್ದಾರೆ.

ಜ್ಯೋತಿ ಅವರ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿ ಅವರಿಗೆ ಪರಿಚಯವಿರುವ ವ್ಯಕ್ತಿಯೇ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಎಟಿಎಂ ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸಿರುವ ಪೊಲೀಸರು, ಕೇವಲ ಹಣಕ್ಕಾಗಿ ಈ ಕೃತ್ಯ ಮಾಡಿದಂತಿಲ್ಲ. ವೈಕಕ್ತಿಕ ಕಾರಣಗಳಿಂದಲೂ ಹಲ್ಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.

ಬ್ಯಾಂಕ್ ನಿಂದ ಚಿಕಿತ್ಸಾ ವೆಚ್ಚ : ಎಟಿಎಂನಲ್ಲಿ ದುಷ್ಕರ್ಮಿಯಿಂದ ಹಲ್ಲೆಗೊಳಗಾದ ಕಾರ್ಪೋರೇಷನ್ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್ ಅವರ ಚಿಕಿತ್ಸಾ ವೆಚ್ಚವನ್ನು ಬ್ಯಾಂಕ್ ಭರಿಸಲಿದೆ ಎಂದು ಬೆಂಗಳೂರು ವೃತ್ತದ ಕಾರ್ಯಕಾರಿ ವ್ಯವಸ್ಥಾಪಕಿ ಎಸ್.ಎಂ.ಸ್ವಾತಿ ಹೇಳಿದ್ದಾರೆ. ಘಟನೆಗೆ ವಿವಾದ ವ್ಯಕ್ತಪಡಿಸಿರುವ ಅವರು ಸರ್ಕಾರದ ಸೂಚನೆಯಂತೆ ಎಟಿಎಂಗಳಿಗೆ ಭದ್ರತೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. (ಭದ್ರತಾ ಸಿಬ್ಬಂದಿ ನೇಮಿಸಿ, ಇಲ್ಲ ಎಟಿಎಂ ಮುಚ್ಚಿ)

English summary
Special teams of the Bangalore police have left for neighboring states to track down the man who brutally attacked a woman inside an unguarded ATM of Corporation Bank near corporation Circle on Tuesday, November 19. Jyothi Uday now recovering at BGS Global Hospital said doctor K.N.Venkataramana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X