ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಎಟಿಎಂ ಹಂತಕನ ವಿವರಗಳು ಲಭ್ಯ

|
Google Oneindia Kannada News

ಬೆಂಗಳೂರು, ಡಿ.4 : ನ.19ರಂದು ಬೆಂಗಳೂರಿನ ಎಟಿಎಂ ಕೇಂದ್ರದಲ್ಲಿ ಜ್ಯೋತಿ ಉದಯ್ ಮೇಲೆ ಹಲ್ಲೆ ಮಾಡಿದ ಆರೋಪಿಯ ವಿವರಗಳನ್ನು ಪೊಲೀಸರ ಕಲೆಹಾಕಿದ್ದಾರೆ. ಪೊಲೀಸರ ಶಂಕೆ ನಿಜವಾಗಿದ್ದು, ಆರೋಪಿಯ ಮೂಲ ಆಂಧ್ರಪ್ರದೇಶವಾಗಿದೆ. ತನ್ನ ಸ್ವಗ್ರಾಮ ಚರಮಲ ವಾಂಡ್ಲದಲ್ಲಿಯೇ 2008ರಲ್ಲಿ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ ಆರೋಪವೂ ಇವನ ಮೇಲಿದೆ.

ಜ್ಯೋತಿ ಉದಯ್ ಮೇಲಿನ ಹಲ್ಲೆ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವ ಬೆಂಗಳೂರು ಪೊಲೀಸರು ಆರೋಪಿಯ ವಿವರ ಪತ್ತೆ ಹಚ್ಚಿದ್ದಾರೆ. ಆರೋಪಿ ಹೆಸರು ನಾರಾಯಣ ರೆಡ್ಡಿ ಎಂಬ ಮಾಹಿತಿ ಲಭ್ಯವಾಗಿದೆ. ಚರಮಲ ವಾಂಡ್ಲದಲ್ಲಿ ಆರೋಪಿ ವಾಸವಾಗಿದ್ದ ಮತ್ತು ಅಲ್ಲಿ 2008ರಲ್ಲಿ ಮಹಿಳೆಯನ್ನು ಕೊಲೆ ಮಾಡಿದ ನಂತರ ಗ್ರಾಮಕ್ಕೆ ಆಗಮಿಸಿರಲಿಲ್ಲ ಎಂದು ತಿಳಿದುಬಂದಿದೆ.

ATM attack

ಆರೋಪಿ ವಿವರಗಳು : ಎಟಿಎಂ ಹಲ್ಲೆ ಪ್ರಕರಣದ ಆರೋಪಿ ನಾರಾಯಣ ರೆಡ್ಡಿ ಮೂಲತಃ ಆಂಧ್ರಪ್ರದೇಶದ ಕದರಿಯ ಚರಮಲ ವಾಂಡ್ಲ ಗ್ರಾಮಕ್ಕೆ ಸೇರಿದವನು. ತಂದೆ-ತಾಯಿಗಳನ್ನು ಕಳೆದುಕೊಂಡಿದ್ದ ಈತ ಏಕಾಂಗಿಯಾಗಿ ವಾಸಿಸುತ್ತಿದ್ದ. ತಂದೆ-ತಾಯಿ ಮರಣದ ನಂತೆ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. (ಎಟಿಎಂ ಪ್ರಕರಣ : ಪಾತಕಿ ಆಂಧ್ರದಲ್ಲೂ ಕೊಲೆ ಮಾಡಿದ್ದ)

2008ರಲ್ಲಿ ಆರೋಪಿ ನಾರಾಯಣ ರೆಡ್ಡಿ ಸ್ವ ಗ್ರಾಮ ಚರಮಲ ವಾಂಡ್ಲದಲ್ಲಿ ಕ್ಲುಲ್ಲಕ ಕಾರಣಕ್ಕೆ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ್ದ, ನಂತರ ಗ್ರಾಮದಲ್ಲಿ ಕಾಣಿಸಿಕೊಂಡಿಲ್ಲ ಎಂದು ಗ್ರಾಮಸ್ಥರು ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆರೋಪಿಯ ಮೂಲ ಆಂಧ್ರಪ್ರದೇಶವಿರಬಹುದು ಎಂದು ಪೊಲೀಸರು ಮೊದಲು ಶಂಕೆ ವ್ಯಕ್ತಪಡಿಸಿದ್ದರು. ಸದ್ಯ ಅದು ನಿಜವಾಗಿದ್ದು, ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. (ಎಟಿಎಂ ಹಲ್ಲೆ : ಆರೋಪಿ ಮೂಲ ಆಂಧ್ರಪ್ರದೇಶ)

ಪೊಲೀಸರಿಗೆ ಇಷ್ಟು ಮಾಹಿತಿ ದೊರಕಿರುವುದು ಅವರ ತನಿಖೆಗೆ ಬಹಳ ಸಹಕಾರಿಯಾಗಿದೆ. ಸದ್ಯ ಆಂಧ್ರಪ್ರದೇಶ ಪೊಲೀಸರ ಸಹಕಾರದೊಂದಿಗೆ ಆರೋಪಿಗಾಗಿ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಇತ್ತ ಹಲ್ಲೆಗೊಳಗಾದ ಜ್ಯೋತಿ ಉದಯ್ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
In the latest development Bangalore police collected ATM attack accused details. accused belongs to Andhra Pradesh and his name is Narayana Reddy. He also accused in 2008 woman murder case at Andhra Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X