ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಸ್ಪತ್ರೆಯಿಂದ ಮನೆ ಸೇರಿದ ಜ್ಯೋತಿ ಉದಯ್

By Mahesh
|
Google Oneindia Kannada News

ಬೆಂಗಳೂರು, ಡಿ.21: ನಗರ ಜೆ.ಸಿ.ರಸ್ತೆಯ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್ ಅವರು ಶನಿವಾರ ಬಿಜಿಎಸ್ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದಾರೆ. ಆಸ್ಪತ್ರೆಯಿಂದ ಮನೆ ಸೇರುವ ಮುನ್ನ ಸುದ್ದಿಗಾರರೊಂದಿಗೆ ಹಲ್ಲೆ ಹಾಗೂ ನಂತರದ ಸಾವು ಬದುಕಿನ ನಡುವಿನ ಹೋರಾಟದ ಬಗ್ಗೆ ವಿವರಿಸಿದರು. ಮನೆ ತಲುಪಿದ ಮೇಲೆ ಮಗಳ ಮೂರನೇ ಹುಟ್ಟುಹಬ್ಬ ಆಚರಣೆ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದರು.

'ನಾನು ಎಂದಿನಂತೆ ಎಟಿಎಂ ನಿಂದ ಹಣ ತೆಗೆಯುತ್ತಿದ್ದೆ. ಆ ವೇಳೆಗೆ ಬಂದ ಅಪರಿಚಿತನೊಬ್ಬ ಹಣ ಕೊಡು ಎಂದು ಒತ್ತಾಯಿಸಿದ . ನಾನು ನಿರಾಕರಿಸಿ, ಕಿರುಚಲು ಯತ್ನಿಸಿದಾಗ ಅವನ ಕೈಯಿಂದ ನನ್ನ ಬಾಯಿಯನ್ನು ಮುಚ್ಚಿದ. ಗನ್ ಹಿಡಿದು ಹೆದರಿಸಿದಾಗ ನಾನು ಹೆದರಲಿಲ್ಲ. ಆದರೆ, ಬಳಿಕ ಅವನು ಬ್ಯಾಗ್ ನಿಂದ ಮಾರಕಸ್ತ್ರ ತೆಗೆದು ನನಗೆ ಬಡಿದ ಅನಂತರ ಏನಾಯಿತೆಂದು ನನಗೆ ತಿಳಿದಿಲ್ಲ' ಎಂದು ಗೋಷ್ಠಿಯಲ್ಲಿ ಕಣ್ಣಿರಿಟ್ಟರು.

ಆಸ್ಪತ್ರೆಯ ಉಪಾಧ್ಯಕ್ಷ ಡಾ.ವೆಂಕಟರಮಣ ಅವರು ಮಾತನಾಡಿ, 'ಜ್ಯೋತಿ ಉದಯ್ ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಜನವರಿ 15ರ ನಂತರ ಅವರು ನಡೆದಾಡುವ ಸ್ಥಿತಿಗೆ ಬರಲಿದ್ದಾರೆ. ಜ್ಯೋತಿ ಅವರಿಗೆ ಫಿಸಿಯೋಥೆರಪಿ ಮಾಡಲಾಗಿದ್ದು, ಮತ್ತೊಮ್ಮೆ ಫಿಸಿಯೋಥೆರಪಿಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಬೇಕಾಗುತ್ತದೆ' ಎಂದು ತಿಳಿಸಿದರು.

ATM Attack Victim Jyothi Finally Heads Home

ಸುಮಾರು 2 ಅಥವಾ ಮೂರು ತಿಂಗಳ ಬಳಿಕ ಅವರು ತಮ್ಮ ಕೆಲಸಕ್ಕೆ ಮರಳಬಹುದು. ಆದರೆ, ದಿನಕ್ಕೆ ಎರಡರಿಂದ ಮೂರು ಗಂಟೆಗಳ ಕಾಲ ಮಾತ್ರ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಡಾ.ವೆಂಕಟರಮಣ ಹೇಳಿದರು.

ಎಟಿಎಂ ಕೇಂದ್ರಕ್ಕೆ ನ.19 ರಂದು ಬೆಳಗ್ಗೆ 7.15 ರ ಸುಮಾರಿಗೆ ಹಣ ಡ್ರಾ ಮಾಡಲು ಬಂದ ಕಾರ್ಪೊರೇಷನ್ ಬ್ಯಾಂಕ್ ನ ವ್ಯವಸ್ಥಾಪಕಿ ಜ್ಯೋತಿ ಉದಯ್ ಅವರ ಮೇಲೆ ಹಲ್ಲೆ ನಡೆದಿತ್ತು. ಕೆಂಗೇರಿ ಬಳಿ ಇರುವ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇನ್ನೂ ಕೆಲ ದಿನಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಘಟನೆ ನಡೆದು ಸುಮಾರು ಒಂದು ತಿಂಗಳು ಕಳೆದಿದ್ದರೂ, ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ಆರೋಪಿಯ ಭಾವಚಿತ್ರ ಹೊರತುಪಡಿಸಿ ಆತನ ಬಗ್ಗೆ ಯಾವುದೇ ಮಾಹಿತಿ ಪೊಲೀಸರಿಗೆ ಲಭ್ಯವಾಗಿಲ್ಲ. ಹಿಂದೂಪುರದಲ್ಲಿ ಜ್ಯೋತಿ ಅವರ ಮೊಬೈಲ್ ‌ಅನ್ನು ಮಾರಾಟ ಮಾಡಿ ಅಲ್ಲಿಂದ ಕಾಲ್ಕಿತ್ತ ನಂತರ ಆತನ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗಿಲ್ಲ. ಈ ಮುಂಚೆ 1 ಲಕ್ಷ ರುಪಾಯಿ ಬಹುಮಾನ ಘೋಷಿಸಿದ್ದ ಪೊಲೀಸರು, ಇದೀಗ ಅದನ್ನು 5 ಲಕ್ಷ ರುಪಾಯಿಗೆ ಏರಿಸಲಾಗಿದೆ.

English summary
The ATM attack victim Jyothi Uday has been discharged from BGS hospital today(Dec.21) After battling for her life for over a month, having sustaining grievous head injuries during the mugging in an ATM kiosk on November 19, all she wants to do now is celebrate her daughter’s third birthday, which was to be celebrated on November 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X