ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರತ ರತ್ನ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನ: ಅದಮ್ಯ ಚೇತನದಿಂದ ಅನ್ನದಾನ, ಸಂಗೀತ ನಮನ

|
Google Oneindia Kannada News

ಬೆಂಗಳೂರು, ಡಿಸೆಂಬರ್‌ 25: ಧೀಮಂತ ನಾಯಕ, ಕವಿ ಹೃದಯಿ, ಅಜಾತ ಶತ್ರು, ಮಾಜಿ ಪ್ರಧಾನಮಂತ್ರಿ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಜನ್ಮ ದಿನಾಚರಣೆಯನ್ನು ಅದಮ್ಯ ಚೇತನ ಹಾಗೂ ಅನಂತಕುಮಾರ್ ಪ್ರತಿಷ್ಠಾನದಿಂದ ವಿಶೇಷವಾಗಿ ಆಚರಿಸಲಾಯಿತು.

Recommended Video

#Atal Bihari Vajpayee birth anniversary:ಅಜಾತ ಶತ್ರು ಅಟಲ್ ಜನ್ಮ ಜಯಂತಿ | Oneindia Kannada

ಅದಮ್ಯ ಚೇತನ ಸಂಸ್ಥೆಯ ಪಕ್ಕದಲ್ಲಿರುವ ಕನ್ನಡ ಕಟ್ಟೆಯಲ್ಲಿ ಮತ್ತು ಜಯನಗರದ 4ನೇ ಹಂತದ ಜೈನ ಮಂದಿರದ ಬಳಿ ಅದಮ್ಯ ಚೇತನ ಸಂಸ್ಥೆಯ ಬಳಿ ಪ್ರತಿನಿತ್ಯ ಉಚಿತವಾಗಿ ನೀಡಲಾಗುತ್ತಿರುವ ನಿತ್ಯ ಅನ್ನದಾನದಲ್ಲಿ ಸಿಹಿ ಊಟವನ್ನೂ ಬಡಿಸಿ ಸಂಭ್ರಮಿಸಲಾಯಿತು.

ವಾಜಪೇಯಿ ದೃಷ್ಟಿಕೋನವೇ ಭಾರತದ ಬಾಂಧವ್ಯ ಗಟ್ಟಿಯಾಗಿರಲು ಕಾರಣ; ಜೈಶಂಕರ್ವಾಜಪೇಯಿ ದೃಷ್ಟಿಕೋನವೇ ಭಾರತದ ಬಾಂಧವ್ಯ ಗಟ್ಟಿಯಾಗಿರಲು ಕಾರಣ; ಜೈಶಂಕರ್

ಸಂಜೆ ಅನಂತಕುಮಾರ್ ಪ್ರತಿಷ್ಠಾನದಿಂದ ಅಟಲ್‌ ಬಿಹಾರಿ ವಾಜಪೇಯಿ ವಿರಚಿತ ಆಯ್ದ ಹಾಡುಗಳ ಸಂಗೀತ ನಮನವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಟಲ್‌ ಜಿ ವಿರಚಿತ ಹಾಡುಗಳನ್ನು ಡಾ.ಪದ್ಮಿನಿ ಓಕ್‌ ಅವರು ಸುಶ್ರಾವ್ಯವಾಗಿ ಹಾಡಿದರು.

Bengaluru: Atal Bihari Vajpayee Birth Anniversary Celebrated From Adamya Chetana

ಕ್ಯಾ ಖೋಯಾ ಕ್ಯಾ ಪಾಯಾ ಜಗಮೇ, ಭಾರತ್‌ ಜಮೀನ್ ಕ ತುಕಡಾ ನಹೀ ಹೀಗೆ ಹಲವು ಹಾಡುಗಳನ್ನು ಹಾಡಲಾಯಿತು. ಹಾಗೂ ಅವುಗಳ ಭಾವಾರ್ಥವನ್ನು ತಿಳಿಸಿಕೊಡಲಾಯಿತು. ಐಶ್ವರ್ಯ ಅನಂತಕುಮಾರ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮವನ್ನು ಫೇಸ್‌ಬುಕ್‌ ಲೈವ್‌ ಮೂಲಕ ಲಕ್ಷಾಂತರ ಜನರು ದೇಶಾದ್ಯಂತ ವೀಕ್ಷಿಸಿದರು.

Bengaluru: Atal Bihari Vajpayee Birth Anniversary Celebrated From Adamya Chetana

ದಿ.ಅನಂತಕುಮಾರ್ ಅವರು ಅಟಲ್‌ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಮೊದಲ ಬಾರಿಗೆ ಕೇಂದ್ರದ ಮಂತ್ರಿಗಳಾಗಿದ್ದನ್ನು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ಡಾ.ತೇಜಸ್ವಿನಿ ಅನಂತಕುಮಾರ್ ನೆನೆಪಿಸಿಕೊಂಡರು. ಮೊದಲ ಬಾರಿ ಪ್ರಮಾಣವಚನ ಸ್ವೀಕಾರ ಹಾಗೂ ಖಾತೆ ಹಂಚಿಕೆಯ ವೇಳೆ ಅಟಲ್‌ ಜಿ ಅವರೊಂದಿಗಿನ ಒಡನಾಟವನ್ನು ಅವರು ಮೆಲುಕು ಹಾಕಿದರು.

English summary
The birth anniversary of former Prime Minister Atal Bihari Vajpayee was specially celebrated by the Adamya Chetana and Ananthakumar Foundation in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X