ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಂದಲಹಳ್ಳಿ ಅಂಡರ್‌ಪಾಸ್ ಕಾಮಗಾರಿ ನಿಧಾನಗತಿ, ಟ್ರಾಫಿಕ್ ಜಾಮ್

|
Google Oneindia Kannada News

ಬೆಂಗಳೂರು,ಜನವರಿ 25: ಕಳೆದ ಒಂದು ವರ್ಷದಿಂದ ಕುಂದಲಹಳ್ಳಿ ಅಂಡರ್‌ಪಾಸ್ ಕಾಮಗಾರಿ ನೆನಗುದಿಗೆ ಬಿದ್ದಿದ್ದು, ನಿತ್ಯ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ.

ಬಿಬಿಎಂಪಿಯು ಆತುರದಲ್ಲಿ ಅಂಡರ್‌ಪಾಸ್ ನಿರ್ಮಿಸುವ ನಿರ್ಧಾರವನ್ನು ಕೈಗೊಂಡಿದ್ದು ನಿಜ ಆದರೆ ಕಾಮಗಾರ ಅಷ್ಟೇ ನಿಧಾನಗತಿಯಲ್ಲಿ ಸಾಗುತ್ತಿದೆ. ರಸ್ತೆಯಲ್ಲಿ ಬೋರ್ಡ್‌ಗಳನ್ನು ಹಾಕಿ, ಈ ರಸ್ತೆಯಲ್ಲಿ ಕಾಮಗಾರಿ ನಡೆಯುತ್ತಿದೆ ಎಂದು ಜನರಿಗೆ ಹೇಳುವ ಮುನ್ನವೇ ರಸ್ತೆಯನ್ನು ಅಗೆದಾಗಿತ್ತು.

ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಕಾಮಗಾರಿ ವೀಕ್ಷಣೆ ಮಾಡಿ ಮುಂದಿನ ನಾಲ್ಕು ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಎಂಜಿನಿಯರ್‌ಗಳಿಗೆ ಹೇಳಿದ್ದರು.

 At Kundalahalli Underpass Project Is Stuck

24 ಮಾಲೀಕರಿಗೆ 42.5 ಕೋಟಿ ರೂ ಪರಿಹಾರ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಸರ್ವೀಸ್ ರಸ್ತೆಯಲ್ಲಿ ಮುಂದಿನ ಕೆಲವು ದಿನಗಳೊಳಗಾಗಿ 36,000 ಚದರಡಿ ರಸ್ತೆಯನ್ನು ಖರೀದಿಸಬೇಕಿದೆ.

ಯಾವುದೇ ಕಾಮಗಾರಿ ನಡೆಯುತ್ತಿರುವುದು ಕಂಡುಬಂದಿಲ್ಲ.ಕಳೆದ ಆರು ತಿಂಗಳಿಂದ ಕಾಮಗಾರಿ ನಡೆಯುತ್ತಿಲ್ಲ. ಆ ಪ್ರದೇಶದಲ್ಲಿ ರಸ್ತೆಗಳ ಪರಿಸ್ಥಿತಿ ಕೂಡ ತುಂಬಾ ಕೆಟ್ಟದಾಗಿದೆ. ಸಿಗ್ನಲ್ ಫ್ರೀ ಜಂಕ್ಷನ್ ಆಗಿ ಮಾಡುವುದಾಗಿ ಭರವಸೆ ನೀಡಿದ್ದ ರಸ್ತೆಯಲ್ಲಿ ಇದೀಗ ಸಂಚರಿಸುವುದೇ ಕಷ್ಟವಾಗಿದೆ.

Recommended Video

ಗಣರಾಜ್ಯೋತ್ಸವಕ್ಕೆ ಸಾರ್ವಜನಿಕರಿಗೆ ಪ್ರವೇಶಕ್ಕೆ ಬ್ರೇಕ್- ರಾಜಧಾನಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ | Oneinda Kannada

ಮಾರ್ಚ್ 2019ರಿಂದ ಅಂಡರ್‌ಪಾಸ್ ಕಾಮಗಾರಿ ಶುರುವಾಗಿದೆ. ಆರು ತಿಂಗಳೊಳಗಾಗಿ ಕಾಮಗಾರಿ ಮುಗಿಯುತ್ತದೆ ಎಂದು ಭರವಸೆ ನೀಡಲಾಗಿತ್ತು.

English summary
The BBMP initial enthusiasm to start a project does not last till the work is complete. one such example is the state of Kundalahalli Junction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X