ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತೇಜಸ್ವಿಸೂರ್ಯ - ಲೋಕಸಭೆಗೆ ಆಯ್ಕೆಯಾದ ಕಿರಿಯ ವಯಸ್ಸಿನ ಸಂಸದ

|
Google Oneindia Kannada News

Recommended Video

ಇತಿಹಾಸ ಸೃಷ್ಠಿಸಿದ ತೇಜಸ್ವಿಸೂರ್ಯ..!

ದಿವಂಗತ ಅನಂತ್ ಕುಮಾರ್ ಅವರು ಈ ಕ್ಷೇತ್ರದಲ್ಲಿ ಆರು ಬಾರಿ ಜಯ ಸಾಧಿಸಿ, ಬಿಜೆಪಿಗೆ ಸೇಫ್ ಎನಿಸುವ ವಾತಾವರಣ ಸೃಷ್ಟಿಸಿದ್ದ ಕ್ಷೇತ್ರದಲ್ಲಿ ಯುವ ಮುಖಂಡನೊಬ್ಬನನ್ನು ಕಣಕ್ಕಿಳಿಸಿದ್ದು ಅಚ್ಚರಿ ಮೂಡಿಸಿತ್ತು.

ಅನಂತ್ ಕುಮಾರ್ ಅವರ ನಿಧನ ನಂತರ ಅವರ ಪತ್ನಿ ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತಕುಮಾರ್ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಮಾಜಿ ಡಿಸಿಎಂ ಆರ್ ಅಶೋಕ್ ಅವರು ತೇಜಸ್ವಿನಿ ಅವರ ಹೆಸರನ್ನು ಶಿಫಾರಸು ಮಾಡಿದ್ದರು.

ವ್ಯಕ್ತಿಚಿತ್ರ: ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಪರ್ಧಿ ತೇಜಸ್ವಿ ಸೂರ್ಯವ್ಯಕ್ತಿಚಿತ್ರ: ಬೆಂಗಳೂರು ದಕ್ಷಿಣ ಕ್ಷೇತ್ರದ ಸ್ಪರ್ಧಿ ತೇಜಸ್ವಿ ಸೂರ್ಯ

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡಾ ಹೈಕಮಾಂಡಿಗೆ ತೇಜಸ್ವಿನಿ ಅವರ ಹೆಸರನ್ನು ಸೂಚಿಸಿದ್ದರು. ಆದರೆ, ಅಂತಿಮವಾಗಿ 28 ವರ್ಷ ವಯಸ್ಸಿನ ತೇಜಸ್ವಿ ಸೂರ್ಯ ಅವರಿಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕಿತು.

ಇಂದು ಮೇ 23ರಂದು 17ನೇ ಲೋಕಸಭೆಗೆ ಕರ್ನಾಟಕದಿಂದ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಸಂಸದರಲ್ಲಿ ಒಬ್ಬರಾಗಿ ತೇಜಸ್ವಿ ಸೂರ್ಯ ಹೊರ ಹೊಮ್ಮಿದ್ದಾರೆ. ಒಟ್ಟಾರೆ, ಭಾರತದಿಂದ ಆಯ್ಕೆಯಾದ ಅತಿ ಕಿರಿಯ ವಯಸ್ಸಿನ ಸಂಸದ/ದೆ ಎಂಬ ಕೀರ್ತಿ ಒಡಿಶಾದ ಬಿಜು ಜನತಾದಳದ ಕಿಯೋಹಾರ್ ಕ್ಷೇತ್ರದ ಸಂಸದೆ 25 ವರ್ಷದ ಚಂದ್ರಾಣಿ ಮುರ್ಮು ಅವರಿಗೆ ಸಲ್ಲುತ್ತದೆ.

ಗ್ಯಾಲರಿ: ಭರ್ಜರಿ ಜಯದೊಂದಿಗೆ ಸಂಭ್ರಮಾಚರಣೆಯಲ್ಲಿ ಬಿಜೆಪಿ
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 18ರಂದು ಎರಡನೇ ಹಂತದ ಮತದಾನ ನಡೆಸಲಾಯಿತು. ಮೇ 23ರಂದು ಫಲಿತಾಂಶ ಹೊರ ಬಂದಿದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರು ಸ್ಪರ್ಧಿಸಿದ್ದರು.

ಬ್ರಿಟನ್ ಪಾರ್ಲಿಮೆಂಟಿಗೆ ತೆರಳಿದ್ದ ಕಿರಿಯ ಸಂಸದರು

ಬ್ರಿಟನ್ ಪಾರ್ಲಿಮೆಂಟಿಗೆ ತೆರಳಿದ್ದ ಕಿರಿಯ ಸಂಸದರು

ಬ್ರಿಟನ್ ಪಾರ್ಲಿಮೆಂಟ್‍ನಲ್ಲಿ ಭಾಗವಹಿಸಲು ಆಯ್ಕೆಯಾದವರ ಕಿರಿಯ ಮುಖಂಡರ ಪೈಕಿ ತೇಜಸ್ವಿ ಸೂರ್ಯ ಕೂಡಾ ಒಬ್ಬರಾಗಿದ್ದರು. ಜೆಡಿಎಸ್ ನಿಂದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ಸಿನಿಂದ ರಿಜ್ವಾನ್ ಅರ್ಷದ್ ಅವರು ಆಯ್ಕೆಯಾಗಿದ್ದರು. ಬ್ರಿಟನ್ ಸಂಸತ್ತಿನ ಕಾರ್ಯ ನಿರ್ವಹಣೆ ಬಗ್ಗೆ ಅರಿವು ಮೂಡಿಸುವ ಪ್ರವಾಸ ಇದಾಗಿತ್ತು. ಇಂದು ಈ ಮೂವರು ಯುವ ನಾಯಕರು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿರುವುದು ಗಮನಾರ್ಹ. ಈ ಪೈಕಿ ಪ್ರಜ್ವಲ್ ಹಾಗೂ ತೇಜಸ್ವಿ ಇಬ್ಬರು ಗೆಲುವು ಸಾಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ. ರಿಜ್ವಾನ್ ಅವರು ಪಿಸಿ ಮೋಹನ್ ವಿರುದ್ಧ ಸೋಲು ಕಂಡಿದ್ದಾರೆ. ಮಾಧ್ಯಮಗಳಲ್ಲಿ ದೇಶ, ಪಕ್ಷದ ಪರವಾಗಿ ಚರ್ಚೆಗಳಲ್ಲಿ ಭಾಗವಹಿಸಿ ತೇಜಸ್ವಿ ಸೂರ್ಯ ಅವರು ಸೈ ಎನಿಸಿಕೊಂಡಿದ್ದಾರೆ.

ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ? ಚುನಾವಣೆ ಫಲಿತಾಂಶ 2019: ರಾಜ್ಯವಾರು ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಉಪ ಚುನಾವಣೆಗೂ ಹೆಸರು ಕೇಳಿ ಬಂದಿತ್ತು

ಉಪ ಚುನಾವಣೆಗೂ ಹೆಸರು ಕೇಳಿ ಬಂದಿತ್ತು

ಈ ಹಿಂದೆ ಜಯನಗರದ ಶಾಸಕ ಬಿಎನ್ ವಿಜಯ್ ಕುಮಾರ್ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಗಾಗಿ ಅಭ್ಯರ್ಥಿ ಆಯ್ಕೆ ಹುಡುಕಾಟದಲ್ಲಿದ್ದಾಗಲೂ ತೇಜಸ್ವಿ ಸೂರ್ಯ ಅವರ ಹೆಸರು ಕೇಳಿಬಂದಿತ್ತು.ಆದರೆ, ಸ್ಪರ್ಧೆ ನಿರಾಕರಿಸಿದ್ದರೂ ಪಕ್ಷ ನೀಡುವ ಯಾವುದೇ ಕಾರ್ಯವನ್ನು ಅಚ್ಚುಕಟ್ಟಾಗಿ ನಿಭಾಯಿಸುವೆ ಎಂದಿದ್ದರು. ಅಂದು ವಿಜಯ್ ಕುಮಾರ್ ಅವರ ಸಹೋದರ ಪ್ರಹ್ಲಾದ್ ಬಾಬು ಅವರಿಗೆ ಟಿಕೆಟ್ ನೀಡಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ವಿರುದ್ಧ ಪ್ರಹ್ಲಾದ್ ಸೋಲು ಕಂಡಿದ್ದರು.

ಬಿಜೆಪಿ ಶಾಸಕರೇ ಇರುವ ಕ್ಷೇತ್ರ

ಬಿಜೆಪಿ ಶಾಸಕರೇ ಇರುವ ಕ್ಷೇತ್ರ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನಿಂದ ಹಿರಿಯ ಮುಖಂಡ ಬಿ.ಕೆ ಹರಿಪ್ರಸಾದ್ ಅವರು ಸ್ಪರ್ಧಿಸಿದ್ದರು. ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಬೆಂಗಳೂರು ನಗರದ ಪ್ರಖ್ಯಾತ ಬಡಾವಣೆಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ ಕ್ಷೇತ್ರ ಇದಾಗಿದೆ. ಬಿ.ಟಿ.ಎಂ ಲೇಔಟ್, ಜಯನಗರ ಹೊರತು ಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಪ್ರಾಬಲ್ಯದ ಕ್ಷೇತ್ರ

ಬಿಜೆಪಿ ಅಭ್ಯರ್ಥಿಗಳ ಪ್ರಾಬಲ್ಯದ ಕ್ಷೇತ್ರ

1996 ರಿಂದ 2014ರ ತನಕ ಬಿಜೆಪಿ ಅಭ್ಯರ್ಥಿಗಳೇ ಗೆದ್ದ ಕ್ಷೇತ್ರವಿದು. ಬ್ರಾಹ್ಮಣ ಮತದಾರರೇ ಇಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ. 1999ರ ನಂತರ ಮತ್ತೆ ಈ ಕ್ಷೇತ್ರಕ್ಕೆ ಮರಳಿರುವ ಹರಿಪ್ರಸಾದ್ ಅವರನ್ನು ಸೋಲಿಸಿ ಯುವ ಮುಖಂಡ ತೇಜಸ್ವಿ ಸೂರ್ಯ ವಿಜಯ ಮಾಲೆ ಧರಿಸಿದ್ದಾರೆ.

2019ರ ಬೆಂಗಳೂರು ದಕ್ಷಿಣ ಕ್ಷೇತ್ರದ ಫಲಿತಾಂಶ

2019ರ ಬೆಂಗಳೂರು ದಕ್ಷಿಣ ಕ್ಷೇತ್ರದ ಫಲಿತಾಂಶ

ಬಿಜೆಪಿಯ ಅಭ್ಯರ್ಥಿ ತೇಜಸ್ವಿ ಸೂರ್ಯ 7,39,229 ಮತ(62.2%)ಗಳನ್ನು ಗಳಿಸಿದರೆ, ಕಾಂಗ್ರೆಸ್ಸಿನ ಬಿ.ಕೆ ಹರಿಪ್ರಸಾದ್ ಅವರು 4,08,037(34.33%) ಮಾತ್ರ ಗಳಿಸಿ ಸೋಲು ಕಂಡಿದ್ದಾರೆ.

ಎಣಿಕೆಯಾದ 11,88,491 ಮತಗಳ ಪೈಕಿ 11,85,137 ಇವಿಎಂ ಮತ, 3354 ಅಂಚೆ ಮತಗಳು ಹಾಗೂ 9938 ನೋಟಾ ಮತಗಳು ಬಿದ್ದಿವೆ.

English summary
Tejasvi Surya, has become become youngest MP in the country, after he registered a thumping victory in Bangalore South, defeating Congress' BK Hariprasad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X