ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ವಿ.ನಿಲ್ದಾಣದಲ್ಲಿ 24X 7 ಆರೋಗ್ಯ ಸೇವೆ ಈಗ ಲಭ್ಯ

By Mahesh
|
Google Oneindia Kannada News

ಬೆಂಗಳೂರು, ಜುಲೈ 17: ಸುಮಾರು 10 ಸಾವಿರ ಚದರ ಅಡಿ ವಿಸ್ತೀರ್ಣ ವ್ಯಾಪ್ತಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಸೇವೆ ಒದಗಿಸಲು ಆಸ್ಟೆರ್ ಡಿಎಂ ಹೆಲ್ತ್ ಕೇರ್ ಸಂಸ್ಥೆ ಮುಂದಾಗಿದೆ. ಈ ಕುರಿತಂತೆ ಬೆಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ಲಿಮಿಟೆಡ್ (ಬಿಐಎಎಲ್) ಜತೆಗೆ ಏಳು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಪ್ರಯಾಣಿಕರ ಒತ್ತಡವನ್ನು ಗಣನೆಗೆ ತೆಗೆದುಕೊಂಡರೆ ಇದು ದೆಹಲಿ ಮತ್ತು ಮುಂಬೈ ನಂತರ ಮೂರನೇ ಅತಿ ಪ್ರಯಾಣಿಕ ದಟ್ಟಣೆ ಇರುವ ವಿಮಾನ ನಿಲ್ದಾಣವಾಗಿದೆ. [ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಹೊಸ ರಸ್ತೆ]

24 ಗಂಟೆ ಸೇವೆ: ಒಪ್ಪಂದದ ಅನುಸಾರ ಅಸ್ಟೇರ್ ಡಿಎಂ ಹೆಲ್ತ್ ಕೇರ್ ಬಿಐಎಎಲ್ ನಲ್ಲಿ ದಿನದ 24 ಗಂಟೆಯ ಏರ್‍ಪೋರ್ಟ್ ಕ್ಲಿನಿಕ್ ಹೊಂದಲು, ತುರ್ತು ಸೇವೆಯನ್ನು ಒದಗಿಸಲು, ಗುಣಮಟ್ಟದ ಆರೋಗ್ಯ ಸೇವೆಯನ್ನು ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ತುರ್ತು ಸಂದರ್ಭದಲ್ಲಿ ಒದಗಿಸಲು ನೆರವಾಗಲಿದೆ. ಹೆಲ್ತ್ ಕೇರ್ ಗ್ರೂಪ್ ಇದರ ಜೊತೆಗೆ 2017ರ ವೇಳಗೆ ಸ್ಟ್ಯಾಂಡ್ ಅಲೋನ್ ವೈದ್ಯಕೀಯ ಸೇವೆ ಸೌಲಭ್ಯ ಕಲ್ಪಿಸಲು ಒತ್ತು ನೀಡಲಿದೆ. [ವಿಮಾನ ನಿಲ್ದಾಣಕ್ಕೆ ಚಾಲುಕ್ಯರ, ರಾಷ್ಟ್ರಕೂಟರ ಹೆಸರಿಡಿ: ಪಾಪು]

Aster DM Healthcare ties up with BIAL- KIAB

ಅಸ್ಟೇರ್ ಸಿಎಂಐ ಹಾಸ್ಪಿಟಲ್ ನ ಸಿಇಒ ಡಾ.ನಿತೀಶ್ ಶೆಟ್ಟಿ: ಆಸ್ಟೇರ್ ಸಿಎಂಐ ಹಾಸ್ಪಿಟಲ್ ಉದ್ದೇಶಿತ ಒಡಂಬಡಿಕೆ ಕುರಿತು ಹೆಚ್ಚು ಸಂತಸಕರವಾಗಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯತಾಣಿಕರು ಸೇರಿದಂತೆ ಉತ್ತಮಸೇವೆ ಸಲ್ಲಿಸಲು ಇದೊಂದು ಅವಕಾಶ. ಇದನ್ನು ಬೆಂಗಳೂರು ಅತ್ಯುತ್ತಮ ಆರೋಗ್ಯಸೇವೆ ಒದಗಿಸುವ ನಗರ ಎಂಬುದನ್ನು ಬಿಂಬಿಸಲು ಬಳಸಿಕೊಳ್ಳಲಿದ್ದೇವೆ.[ಬೆಂಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಓಲಾ ಜೋನ್]

ಬಿಐಎಎಲ್ ಹಿರಿಯ ನಿರ್ದೇಶಕ (ಹಣಕಾಸು ಮತ್ತು ಸೇವೆಗಳು) ಭಾಸ್ಕರ್ ಬೊಡಪಟಿ : ಬಿಐಎಎಲ್ ಎಂದಿಗೂ ಗುಣಮಟ್ಟ ಮತ್ತು ಸುರಕ್ಷಿತ ಸೇವೆಯನ್ನು ಎಲ್ಲ ಭಾಗಿದಾರರಿಗೆ ಒದಗಿಸಲು, ಮುಖ್ಯವಾಗಿ ಪ್ರಯಾಣಿಕರಿಗೆ ಸೇವೆ ಒದಗಿಸಲು ಬದ್ಧವಾಗಿದೆ. ಈ ಕಾರ್ಯತಂತ್ರದ ಒಡಂಬಡಿಕೆ ಮೂಲಕ ಆಸ್ಟೇರ್ ಗ್ರೂಪ್, ಈ ಬದ್ಧತೆಯನ್ನು ಬಲಯುತಗೊಳಿಸುವಲ್ಲಿ ಇನ್ನೊಂದು ಹೆಜ್ಜೆ ಇಟ್ಟಿದೆ. ವಿಮಾನನಿಲ್ದಾಣ ಮೂಲಕ ಪಯಣಿಸುವ ದಿನದ 24 ಗಂಟೆ ಅತ್ಯುತ್ತಮ ಆರೋಗ್ಯ ಸೇವೆಯನ್ನು ಸ್ವೀಕರಿಸಲಿದ್ದಾರೆ' ಎಂದರು.[ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಸಾಧನೆ ಗರಿ]

ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಬೆಂಗಳೂರು (ಕೆಐಎಬಿ) ಅತ್ಯುತ್ತಮ ಮಾರ್ಗವಾಗಿ ದಕ್ಷಿಣ ಭಾರತದ ಅತ್ಯುತ್ತಮ ಜನನಿಬಿಡ ವಿಮಾನ ನಿಲ್ದಾಣ ಎಂಬ ಹಿರಿಮೆಗೆ ಪಾತ್ರವಾಗಿದೆ. ಕೆಐಎಬಿ ಶೇ 25.2ರಷ್ಟು ಪ್ರಯಾಣಿಕ ದಟ್ಟಣೆ, ಶೇ 12.7ರಷ್ಟು ವಿಮಾನ ಯಾನ ದಟ್ಟಣೆಯನ್ನು 2015ರಲ್ಲಿ ದಾಖಲಿಸಿದೆ. ಇತ್ತೀಚೆಗೆ ವಿಮಾನ ನಿಲ್ದಾಣವು 100 ಮಿಲಿಯನ್ ಪ್ರಯಾಣಿಕರು, ಎಂಟು ವರ್ಷದ ಅವಧಿಯಲ್ಲಿ ದಾಖಲಿಸಿದೆ ಎಂದರು. ಈ ಗಣನೀಯ ಸಂಖ್ಯೆ ಸುಸಜ್ಜಿತವಾದ ಆರೋಗ್ಯ ಸೇವೆ ಹೊಂದುವುದರ ಅಗತ್ಯ ಪ್ರತಿಪಾದಿಸಿದೆ ಎಂದು ಹೇಳಿದರು.

English summary
Aster DM Healthcare has signed a 7-year agreement with Bangalore International Airport Limited (BIAL) as their healthcare partners to manage around 10,000 sq. ft medical Kempegowda International Airport Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X