ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆ ಹಣ ನನ್ನದು ಎಂದು ಸಾಬೀತಾದ್ರೆ, ರಾಜಕೀಯ ನಿವೃತ್ತಿ : ಸುರೇಶ್

By Mahesh
|
Google Oneindia Kannada News

ಬೆಂಗಳೂರು, ಮೇ 09: ಭಾರತೀಯ ಜನತಾ ಪಕ್ಷದ ಸರಳ, ಸಜ್ಜನ ರಾಜಕಾರಣಿ ಎಂದೇ ಜನಜನಿತರಾಗಿರುವ ರಾಜಾಜಿನಗರದ ಶಾಸಕ, ಅಭ್ಯರ್ಥಿ ಸುರೇಶ್‌ ಕುಮಾರ್‌ ಅವರು ತಮ್ಮ ಮಗಳ ಮೇಲೆ ಬಂದಿರುವ ಚುನಾವಣಾ ಅಕ್ರಮ ಆರೋಪವನ್ನು ಅಲ್ಲಗೆಳೆದಿದ್ದಾರೆ.

ವೋಟಿಗಾಗಿ ನೋಟು ಹಂಚುವ ಪರಿಸ್ಥಿತಿ ನಮಗೆ ಬಂದಿಲ್ಲ, ಆ ಹಣ ನನ್ನದು ಎಂದು ಸಾಬೀತಾದ್ರೆ ಕೂಡಲೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಆದರೆ, ಒಬ್ಬ ಯುವತಿ ಮೇಲೆ, ದಬ್ಬಾಳಿಕೆ ಮಾಡಿ, ಸುಳ್ಳು ಆರೋಪ ಹೊರೆಸುತ್ತಿರುವ ಕಾಂಗ್ರೆಸ್ಸಿಗರು, ಕಾರ್ಪೊರೇಟರ್ ಕೃಷ್ಣಮೂರ್ತಿ ಅವರು ಏನು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

Karnataka Assembly Elections 2018 : BJP MLA Suresh Kumar denies reports of his daughters arrest

ಶಾಸಕ ಸುರೇಶ್ ಕುಮಾರ್ ಅವರ ಪುತ್ರಿ ಅಕ್ರಮವಾಗಿ ಹಣ ಹಂಚುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಕೆಲ ಖಾಸಗಿ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಸ್ವತಃ ಸುರೇಶ್ ಕುಮಾರ್ ಅವರ ಪುತ್ರಿ ನೀಡಿದ್ದರು. ನಾನು ಹಣ ಹಂಚಿಲ್ಲ, ನನ್ನ ಮೇಲೆ ಹಲ್ಲೆ ಯತ್ನ ನಡೆದಿದೆ ಇದೆಲ್ಲವೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾರ್ಪೊರೇಟರ್ ಕೃಷ್ಣಮೂರ್ತಿ ಅವರ ಪೂರ್ವ ನಿಯೋಜಿತ ಕೃತ್ಯ ಎಂದಿದ್ದಾರೆ.

ವೀರಪ್ಪ ಮೊಯ್ಲಿ ಟ್ವೀಟಾಸ್ತ್ರ ಸ್ವಾಗತಿಸಿದ ಶಾಸಕ ಸುರೇಶ್ ಕುಮಾರ್ ವೀರಪ್ಪ ಮೊಯ್ಲಿ ಟ್ವೀಟಾಸ್ತ್ರ ಸ್ವಾಗತಿಸಿದ ಶಾಸಕ ಸುರೇಶ್ ಕುಮಾರ್

ಇದಾದ ಬಳಿಕ ಸುರೇಶ್ ಕುಮಾರ್ ಅವರು ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಗೂ ವಿಡಿಯೋ ಸಂದೇಶ ಮೂಲಕ 'ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ಸುರೇಶ್‌ ಕುಮಾರ್ ಅವರ ಮಗಳು ದಿಶಾ ಎಸ್. ಕುಮಾರ್ ಮತದಾರರಿಗೆ ಆಕ್ರಮವಾಗಿ ಹಣ ಹಂಚುತ್ತಿದ್ದರು ಎಂದು ಕೆಲವರು ವಾಟ್ಸಾಪ್ ಮತ್ತು ಫೇಸ್‌ಬುಕ್‌ ನಲ್ಲಿ ಸಂದೇಶ ರವಾನಿಸುತ್ತಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಸುರೇಶ್‌ ಕುಮಾರ್ ಸ್ಪಷ್ಟನೆ ನೀಡಿ ಸ್ಟೇಟಸ್‌ ಹಾಗೂ ವಿಡಿಯೊ ಹಾಕಿದ್ದಾರೆ.

ಸುರೇಶ್‌ ಕುಮಾರ್ ಫೇಸ್ ಬುಕ್ ಸ್ಟೇಟಸ್‌ :
ರಾಜಾಜಿನಗರದಲ್ಲಿ ಬಿಜೆಪಿ ವತಿಯಿಂದ, ಅದರಲ್ಲೂ ನನ್ನ ಮಗಳ ಕಡೆಯಿಂದ ಚುನಾವಣಾ ಸಂಬಂಧ ಹಣ ಹಂಚುವಿಕೆ ಆಗುತ್ತಿರುವಾಗ, ನನ್ನ ಮಗಳನ್ನು ಪೋಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆಯೆಂಬ ಸುದ್ಧಿ ಅಪ್ಪಟ ಸುಳ್ಳು ಸುದ್ಧಿ.‌

ಯಾವುದೇ ರೀತಿಯ ಹಣ ಹಂಚುವಿಕೆ ನಾವು ಮಾಡಿಲ್ಲ. ಮಾಡುವುದಿಲ್ಲ.‌

ಸೋಷಿಯಲ್ ಮೀಡಿಯಾ ತಂಡದ ಜೊತೆ ನನ್ನ‌ ಮಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳಷ್ಟೇ. ನಮ್ಮ ಸೋಷಿಯಲ್‌ ಮೀಡಿಯಾ ತಂಡದ ಜೊತೆ ನಮ್ಮ‌ ಪಕ್ಷದ ಯುವ ಮೋರ್ಚಾ ಪದಾಧಿಕಾರಿ ಯಶಸ್ ರವರ ಕಚೇರಿಯಲ್ಲಿ ಚರ್ಚಿಸುತ್ತಿದ್ದಳು.

ಮುನಿರತ್ನ ಕುಕ್ಕರ್ ರಾಜಕಾರಣಕ್ಕೆ ಮುನಿದ ಹುಚ್ಚಾ ವೆಂಕಟ್‌ ಮುನಿರತ್ನ ಕುಕ್ಕರ್ ರಾಜಕಾರಣಕ್ಕೆ ಮುನಿದ ಹುಚ್ಚಾ ವೆಂಕಟ್‌

ಯಾವುದೇ ರೀತಿಯ ಅಕ್ರಮ ಕಾರ್ಯದಲ್ಲಿ ನನ್ನ ಮಗಳು, ನನ್ನ ಪಕ್ಷ ಭಾಗಿಯಾಗಿಲ್ಲವೆಂದು ಸ್ಪಷ್ಟಗೊಳಿಸುತ್ತಿದ್ದೇನೆ.‌ ಚುನಾವಣೆ ದಿನಾಂಕ ಹತ್ತಿರ ಬರುವಂತೆ ಈ ರೀತಿಯ ಸುದ್ಧಿಗಳು ಇನ್ನಷ್ಟು ಹೆಚ್ಚಾಗುತ್ತವೆ ಎಂದಿದ್ದಾರೆ.

ವಿಡಿಯೋದಲ್ಲಿ ನೀಡಿರುವ ಸ್ಪಷ್ಟನೆ ಇಲ್ಲಿದೆ:

ಈ ಕ್ಷೇತ್ರದಲ್ಲಿ 1994ರಿಂದ ನಾಲ್ಕು ಬಾರಿ ಜಯಗಳಿಸಿರುವ ಸುರೇಶ್ ಕುಮಾರ್ ಅವರ ವಿರುದ್ಧ ಈ ಬಾರಿ ಕಾಂಗ್ರೆಸ್ಸಿನಿಂದ ಮಾಜಿ ಮೇಯರ್ ಜಿ ಪದ್ಮಾವತಿ ಅವರು ಕಣಕ್ಕಿಳಿದಿದ್ದಾರೆ. ಮೇ 12ರಂದು ಮತದಾನ ನಡೆಯಲಿದ್ದು, ಮೇ 15ರಂದು ಭವಿಷ್ಯ ತಿಳಿಯಲಿದೆ.

English summary
Former BJP minister Suresh Kumar rubbished reports of his daughter distributing money in Rajajajinagar assembly constituency. Suresh Kumar in a video posted on his Facebook wall outrightly rejected the news about his daughter's arrest by Bengaluru police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X