ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದ್ಯಾರ್ಥಿನಿ ಮೇಲೆ ಹಲ್ಲೆ: ಪರಂ ವಿರುದ್ಧ ಟ್ವಿಟ್ಟರ್ ಮಂದಿ ಗರಂ

By Mahesh
|
Google Oneindia Kannada News

ಬೆಂಗಳೂರು, ಫೆ. 04: ತಾಂಜೇನಿಯಾ ಮೂಲದ ವಿದ್ಯಾರ್ಥಿನಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ ಅವರು ಗುರುವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದು ಹೊಸ ವಿವಾದಕ್ಕೆ ಕಾರಣವಾಗಿದೆ. ಅರೆ ಬೆತ್ತಲೆಗೊಳಿಸಿ ಹಲ್ಲೆ ನಡೆಸಲಾಗಿದೆ ಎಂಬ ವರದಿಯನ್ನು ಅಲ್ಲಗೆಳೆದ ಪರಮೇಶ್ವರ ಅವರು ಹಲ್ಲೆ ನಡೆದಿಲ್ಲ, ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದಿದ್ದಾರೆ. ಸಚಿವರ ಹೇಳಿಕೆಯನ್ನು ಖಂಡಿಸಿ ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ಕಿಚಾಯಿಸಲಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಮೇಶ್ವರ ಅವರು, ಪ್ರಕರಣಕ್ಕೆ ಸಂಬಂಧಿಸಿ ಲೋಕೇಶ್ ಬಂಗಾರಿ, ವೆಂಕಟೇಶ್ ರಾಮಯ್ಯ, ಸಲೀಂ ಪಾಷಾ, ಭಾನುಪ್ರಕಾಶ್ ಮತ್ತು ರೆಹಮತುಲ್ಲಾ ಎಂಬುವರನ್ನು ಬಂಧಿಸಲಾಗಿದೆ ಎಂದು ಹೇಳಿದರು. ಯುವತಿಯನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಲ್ಲ. ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಬಗ್ಗೆಯೂ ಸ್ಪಷ್ಟ ಉಲ್ಲೇಖಗಳಿಲ್ಲ ಎಂದು ಹೇಳಿದರು. [ಲೈಂಗಿಕ ದೌರ್ಜನ್ಯ ನಡೆದಿಲ್ಲ, ಪ್ರಕರಣ ಸಿಸಿಬಿಗೆ: ಪರಮೇಶ್ವರ]

ಘಟನೆಗೆ ಕುಡಿದು ವಾಹನ ಚಲಾಯಿಸಿದ್ದೇ ಮೂಲ ಕಾರಣ. ದಂಪತಿಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದಾದ ನಂತರ ಗಲಾಟೆ ಆರಂಭವಾಗಿದೆ. ಈ ಎಲ್ಲ ವಿವರಗಳನ್ನು ಪೊಲೀಸರು ದಾಖಲು ಮಾಡಿದ್ದಾರೆ ಎಂದಿದ್ದರು.

 ಪ್ರಕರಣದ ಸಮಗ್ರ ವರದಿವಿದೇಶಾಂಗ ಸಚಿವಾಲಯಕ್ಕೆ

ಪ್ರಕರಣದ ಸಮಗ್ರ ವರದಿವಿದೇಶಾಂಗ ಸಚಿವಾಲಯಕ್ಕೆ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಮ್ಮ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಈ ಪ್ರಕರಣದ ಸಮಗ್ರ ವರದಿಯನ್ನು ಮುಖ್ಯ ಕಾರ್ಯದರ್ಶಿಯವರು ಕೇಂದ್ರದ ವಿದೇಶಾಂಗ ಸಚಿವಾಲಯಕ್ಕೆ ಇಂದು ಕಳುಹಿಸುವರು ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದರು.

ಗೃಹ ಸಚಿವರ ಹೇಳಿಕೆ ಖಂಡಿಸಿದ ಸಾರ್ವಜನಿಕರು

ಗೃಹ ಸಚಿವರ ಹೇಳಿಕೆ ಖಂಡಿಸಿದ ಸಾರ್ವಜನಿಕರು ಟ್ವೀಟ್ ಮಾಡಿದ್ದು ಹೀಗೆ..

ನಾಚಿಕೆಗೇಡು ! ಕರ್ನಾಟಕ ಸರ್ಕಾರಕ್ಕೆ

ನಾಚಿಕೆಗೇಡು ! ಕರ್ನಾಟಕ ಸರ್ಕಾರಕ್ಕೆ, ಪ್ರಕರಣವನ್ನು ಮುಚ್ಚಿ ಹಾಕುವ ಯತ್ನ ನಡೆದಿದೆ.

ಪತ್ರಕರ್ತೆ ಬರ್ಖಾದತ್ ರಿಂದ ಖಂಡನೆ

ಪತ್ರಕರ್ತೆ ಬರ್ಖಾದತ್ ರಿಂದಲೂ ಖಂಡನೆ, ನಾಚಿಕೆಗೇಡಿನ ಹೇಳಿಕೆ ಎಂದ ಬರ್ಖಾ

ಕೇಸ್ ಖತಂ ಆಗಿದೆ ಎಂದ ಮೇಲೆ ಇನ್ನೇನು

ಕೇಸ್ ಖತಂ ಆಗಿದೆ ಎಂದ ಮೇಲೆ ಇನ್ನೇನು ಹೇಳುವುದು ಬಾಕಿ ಇದೆ.

ಅವಧಿ ಮುಗಿದರೂ ಇಲ್ಲೇ ವಾಸ

ವೀಸಾದ ಅವಧಿ ಮುಗಿದರೂ ಹಲವಾರು ವಿದ್ಯಾರ್ಥಿಗಳು ಬೆಂಗಳೂರಿನಲ್ಲಿಯೇ ವಾಸ ಮಾಡುತ್ತಿರುವ ಮಾಹಿತಿಯೂ ದೊರೆತಿದೆ ಎಂದು ಪರಮೇಶ್ವರ್ ಹೇಳಿದರು.

English summary
The Home Minister of Karnataka, Dr G Parameshwara mocked by twitteraties for his insensitive statement on assault on a Tanzanian women student. Prameshwar said student was not stripped and assaulted. Now the case has been transferred to the City Crime Branch.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X