ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿಗೆ ಕಠಿಣವಾದ ಪ್ರಶ್ನೆಗಳನ್ನು ಕೇಳಿ: ಪಿ.ಚಿದಂಬರಂ

|
Google Oneindia Kannada News

ಬೆಂಗಳೂರು, ಮಾರ್ಚ್ 11; ಬಹುತೇಕ ಹಗರಣಗಳು ಆಭರಣ ಉದ್ಯದಲ್ಲೇ ಏಕೆ ನಡೆಯುತ್ತಿವೆ, ಪ್ರಮುಖ ಆರೋಪಿಗಳು ಗುಜರಾತಿನವರೇ ಏಕೆ ಆಗಿದ್ದಾರೆ?, ಈ ರೀತಿಯ ಹಗರಣ ಬೇರೆ ವಲಯದಲ್ಲಿ ಅಥವಾ ಬೇರೆ ರಾಜ್ಯದಲ್ಲಿ ಏಕೆ ಆಗುವುದಿಲ್ಲ? ಹೀಗೆಂದು ಪ್ರಶ್ನೆ ಮಾಡಿದವರು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ.

ನಗರದ ಬಿಷಪ್ ಕಾಟನ್ ಶಾಲೆಯಲ್ಲಿ ತಮ್ಮ ಸ್ಪೀಕಿಂಗ್ ಟ್ರುತ್ ಟು ಪವರ್ - ಮೈ ಅಲ್ಟರ್ನೆಟೀವ್ ವ್ಯೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಜರಾತ್‌ನಲ್ಲಿ ಹಗರಣ ಕೋರರಿಗೆ ಯಾರೋ ಸಹಾಯ ಮಾಡುತ್ತಿದ್ದಾರೆ, ಆದರೆ ಯಾರು ಸಹಾಯ ಮಾಡುತ್ತಿದ್ದಾರೆ, ಹೇಗೆ ಸಹಾಯ ಮಾಡುತ್ತಿದ್ದಾರೆ ಎಂದು ಅವರು ಅನುಮಾವ ವ್ಯಕ್ತಪಡಿಸಿದರು.

ask-hard-questions-to-central-government-p-chidambaram

ಕಳೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಅತ್ಯುತ್ತಮವಾಗಿ ಕೇಂದ್ರಕ್ಕೆ, ಬಿಜೆಪಿಗೆ ಪ್ರಶ್ನೆಗಳನ್ನು ಜನ, ಅಲ್ಲಿನ ನಾಯಕರು ಕೇಳಿದ್ದಾರೆ, ಪ್ರಶ್ನೆಗಳನ್ನು ಕೇಳುವ ಮುಂದಿನ ಸರದಿ ಕರ್ನಾಟಕ್ಕದ್ದೇ ಆಗಿದೆ ಎಂದು ಅವರು ಹೇಳಿದರು.

ನಾವು ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಂದ್ರಕ್ಕೆ ಕೇಳಬೇಕು, ಕಠಿಣವಾದ ಪ್ರಶ್ನೆಗಳನ್ನು ಕೇಳಬೇಕು ಆಗಲೇ ವಾಸ್ತವಕ್ಕೆ ಬೆನ್ನು ಮಾಡಿರುವ ಕೇಂದ್ರದ ಕಣ್ಣು ತೆರೆಸಲು ಸಾಧ್ಯ ಎಂದ ಅವರು, ದೇಶದಲ್ಲಿ ಉದ್ಯೋಗ ಸಮಸ್ಯೆ ಇರುವುದು ಕೇಂದ್ರಕ್ಕೆ ಗೊತ್ತು ಆದರೆ ಅದು ಪಕೋಡಾ ಮಾರಲು ಹೇಳುತ್ತದೆ, ಇದು ಗಾಯದ ಮೇಲೆ ಬರೆ ಎಳೆದಂತೆ ಎಂದು ಅವರು ಹೇಳಿದರು.

ಪಕೋಡಾ ಪೊಲಿಟಿಕ್ಸ್: ಪಿ.ಚಿದಂಬರಂ ಗೆ ಬಿಜೆಪಿ ತರಾಟೆಪಕೋಡಾ ಪೊಲಿಟಿಕ್ಸ್: ಪಿ.ಚಿದಂಬರಂ ಗೆ ಬಿಜೆಪಿ ತರಾಟೆ

ದೇಶದ ದೂರಸಂಪರ್ಕ ವಲಯದ ಬಗ್ಗೆ ಸಿಎಗಿ ನೀಡಿರುವ ವರದಿ ಸಂಪೂರ್ಣ ಉತ್ಪ್ರೇಕ್ಷೆಯಿಂದ ಕೂಡಿದೆ ಎಂದ ಚಿದಂಬರಂ ಅವರು, ನಾವು ಬ್ಯುಸಿನೆಸ್‌ನ ಸಮಸ್ಯೆಗಳನ್ನು ಬ್ಯುಸಿನೆಸ್‌ನ ಸಮಸ್ಯೆಗಳನ್ನಾಗಿಯೇ ನೋಡಬೇಕು. ಆದರೆ ಕೆಲವು ರಾಜಕೀಯ ಪಕ್ಷಗಳು ಬ್ಯುಸಿನೆಸ್‌ ಸಮಸ್ಯೆಗಳಿಗೆ ರಾಜಕೀಯ ತಿರುವು ನೀಡಿ ಬಿಡುತ್ತವೆ ಆದರೆ ಅದಕ್ಕೆ ಇಡೀ ದೇಶ ಬೆಲೆ ತೆರಬೇಕಾಗುತ್ತದೆ ಎಂದು ಅವರು ಹೇಳಿದರು.

ಐಎನ್ಎಕ್ಸ್ ಮೀಡಿಯಾ ಪ್ರಕರಣ, ಪಿ. ಚಿದಂಬರಂ ವಿಚಾರಣೆ ಸಾಧ್ಯತೆಐಎನ್ಎಕ್ಸ್ ಮೀಡಿಯಾ ಪ್ರಕರಣ, ಪಿ. ಚಿದಂಬರಂ ವಿಚಾರಣೆ ಸಾಧ್ಯತೆ

English summary
Congress senior leader P.Chidambaram released his book in Bengaluru today. in his speech he said every one should ask questions to BJP government. In Gujarat people ask hard questions now its Karnataka's turn.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X