ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಶ್ವಾಸಮತ ಯಾಚನೆ ಮಾಡಿ, ಇಲ್ಲವಾದ್ರೆ ರಾಜೀನಾಮೆ ಕೊಡ್ತೀನಿ: ಸ್ಪೀಕರ್

|
Google Oneindia Kannada News

ಬೆಂಗಳೂರು, ಜುಲೈ 22: ವಿಶ್ವಾಸಮತ ಯಾಚನೆಯು ಜಗ ಪ್ರಸವದಂತೆ ದೀರ್ಘವಾಗುತ್ತಿದೆ. ಇದು ಸ್ವತಃ ಸ್ಪೀಕರ್ ಅವರಿಗೇ ರೇಜಿಗೆ ಹುಟ್ಟಿಸಿದ್ದು, ಇಂದು ವಿಶ್ವಾಸಮತ ಅಂಗೀಕಾರ ಮಾಡಲೇ ಬೇಕು ಎಂದು ಸಿಎಂ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದ್ದಾರೆ.

ಸೋಮವಾರ ವಿಶ್ವಾಸಮತ ಯಾಚನೆ ಮಾಡಿ ಎಂದು ಶುಕ್ರವಾರವೇ ಸ್ಪೀಕರ್ ರಮೇಶ್ ಕುಮಾರ್ ಅವರು ಸಿಎಂ ಅವರಿಗೆ ಮನವಿ ಮಾಡಿದ್ದರು. ಅದಕ್ಕೆ ಸಿಎಂ ಕುಮಾರಸ್ವಾಮಿ ಒಪ್ಪಿದ್ದರೂ ಸಹ ಆದರೆ ಇಂದು ಸಿಎಂ ಕುಮಾರಸ್ವಾಮಿ ಅವರು ಇನ್ನಷ್ಟು ಸಮಯವನ್ನು ಸ್ಪೀಕರ್ ಅವರ ಬಳಿ ಕೇಳಿದ್ದಾರೆ.

LIVE ಇಂದು ಎಷ್ಟು ಹೊತ್ತಾದರೂ ಕೂರುತ್ತೇನೆ: ಸ್ಪೀಕರ್ ಹೇಳಿಕೆLIVE ಇಂದು ಎಷ್ಟು ಹೊತ್ತಾದರೂ ಕೂರುತ್ತೇನೆ: ಸ್ಪೀಕರ್ ಹೇಳಿಕೆ

ಆದರೆ ಇದರಿಂದ ಅಸಮಾಧಾನಗೊಂಡ ಸ್ಪೀಕರ್ ರಮೇಶ್ ಕುಮಾರ್ ಅವರು, ಈಗಾಗಲೇ ಜನರಿಗೆ ನಮ್ಮ ಮೇಲೆ ವ್ಯತಿರಿಕ್ತ ಭಾವನೆ ಬಂದಿದೆ, ಮತ್ತೆ ನಾಳೆಗೆ ವಿಶ್ವಾಸಮತ ಮುಂದೂಡಿದರೆ ನಾನು ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಸ್ಪೀಕರ್ ಅವರು ಹೇಳಿದ್ದಾರೆ.

Ask for majority vote today or else i will resign: speaker Ramesh Kumar

ಇಂದು ರಾತ್ರಿ 9 ಗಂಟೆ ವೇಳೆಗೆ ವಿಶ್ವಾಸಮತ ಯಾಚನೆ ಮಾಡಿ, ಇಲ್ಲವಾದರೆ ನಾನೇ ರಾಜೀನಾಮೆ ಕೊಟ್ಟು ಹೊರ ನಡೆಯುತ್ತೇನೆ ಎಂದು ಸಿಎಂ ಮುಂದೆ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.

ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ, ನನ್ನ ಬಲಿಪಶು ಮಾಡಬೇಡಿ: ಸ್ಪೀಕರ್ ಜನ ವಿಲನ್ ರೀತಿಯಲ್ಲಿ ನೋಡುತ್ತಿದ್ದಾರೆ, ನನ್ನ ಬಲಿಪಶು ಮಾಡಬೇಡಿ: ಸ್ಪೀಕರ್

ಇಂದೇ ವಿಶ್ವಾಸಮತ ಯಾಚನೆ ಆಗಲಿ ಎಂಬುದು ಸ್ಪೀಕರ್ ಅವರ ಆಸೆಯೂ ಆಗಿದೆ. ಇಂದೂ ಸಹ ಸದನದಲ್ಲಿ ಹಲವು ಬಾರಿ ಸ್ಪೀಕರ್ ಅವರು ಶಾಸಕರಲ್ಲಿ ಸಹ ಮನವಿ ಮಾಡಿದರು. ವಿಶ್ವಾಸಮತ ಯಾಚನೆ ಈಗಾಗಲೇ ತಡವಾಗಿದೆ, ಇಂದೂ ಸಹ ಮತಯಾಚನೆ ಆಗಲಿಲ್ಲವೆಂದರೆ ನಾನು ಅಪರಾಧಿಸ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಅವರು ಹೇಳಿದರು.

ವಿಶ್ವಾಸಮತ ಯಾಚನೆ: ಇನ್ನೂ ಎರಡು ದಿನ ಸಮಯ ಕೊಡಿ ಎಂದ ಮುಖ್ಯಮಂತ್ರಿವಿಶ್ವಾಸಮತ ಯಾಚನೆ: ಇನ್ನೂ ಎರಡು ದಿನ ಸಮಯ ಕೊಡಿ ಎಂದ ಮುಖ್ಯಮಂತ್ರಿ

ಪಕ್ಷೇತರ ಶಾಸಕರು ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಿಕೊಂಡಿದ್ದು, ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ. ಹಾಗಾಗಿ ಅದರ ಫಲಿತಾಂಶ ನೋಡಿಕೊಂಡು ವಿಶ್ವಾಸಮತ ಯಾಚನೆ ಮಾಡುವುದು ಎಂಬ ಲೆಕ್ಕಾಚಾರ ದೋಸ್ತಿ ಪಕ್ಷಕ್ಕೆ ಇದ್ದಂತಿದೆ, ಹಾಗಾಗಿಯೇ ಕುಮಾರಸ್ವಾಮಿ ಅವರು ಹೆಚ್ಚಿನ ಕಾಲಾವಕಾಶ ಕೇಳಿದೆ ಎನ್ನಲಾಗುತ್ತಿದೆ.

English summary
Speaker Ramesh Kumar asks CM Kumaraswamy to majority today itself. He also threatens that he will resign to speaker post if he not ask for vote of confidence today itself.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X