ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಮೃತಪಟ್ಟ ಎಎಸ್‌ಐಗೆ ಕೊರೊನಾ ಸೋಂಕು ದೃಢ

|
Google Oneindia Kannada News

ಬೆಂಗಳೂರು, ಜೂನ್ 28 : ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಮೃತಪಟ್ಟ ಎಎಸ್‌ಐಗೆ ಕೊರೊನಾ ಸೋಂಕು ತಗುಲಿತ್ತು ಎಂಬುದು ಭಾನುವಾರ ಖಚಿತವಾಗಿದೆ. ಮನೆಯಲ್ಲಿ ಜಾರಿಬಿದ್ದಿದ್ದ ಎಎಸ್‌ಐ ಆಸ್ಪತ್ರೆಗೆ ಕರೆದುಕೊಂಡು ಹೋಗುವಾರ ಸಾವನ್ನಪ್ಪಿದ್ದರು.

57 ವರ್ಷದ ಎಎಸ್‌ಐ ವೈಟ್‌ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ ಅವರು ಮೃತಪಟ್ಟ ಬಳಿಕ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿತ್ತು. ಭಾನುವಾರ ವರದಿ ಬಂದಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ 3 ದಿನ ಸೀಲ್ ಡೌನ್ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ 3 ದಿನ ಸೀಲ್ ಡೌನ್

55 ವರ್ಷ ಮೇಲ್ಪಟ್ಟ ಅಧಿಕಾರಿಗಳು ಮನೆಯಲ್ಲಿ ಇರುವಂತೆ ಜೂನ್ 10ರಂದು ಸೂಚನೆ ನೀಡಲಾಗಿತ್ತು. ಶನಿವಾರ ರಾತ್ರಿ ಮನೆಯ ಬಾತ್‌ ರೂಂನಲ್ಲಿ ಜಾರಿ ಬಿದ್ದಿದ್ದ ಎಎಸ್‌ಐ ಮೃತಪಟ್ಟಿದ್ದರು. ಇವರ ಜೊತೆ ಸಂಪರ್ಕದಲ್ಲಿದ್ದವರ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ.

ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್

ASI Died In June 27 Tested Positive For COVID 19

ಬೆಂಗಳೂರು ನಗರದಲ್ಲಿ ಕಾರ್ಯ ನಿರ್ವಹಣೆ ಮಾಡುವ ಸುಮಾರು 50 ಪೊಲೀಸ್ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಸಿಬ್ಬಂದಿಗೆ ಸೋಂಕು ತಗುಲಿದ್ದು ಖಚಿತವಾದ ಬಳಿಕ ನಗರ ಪೊಲೀಸ್ ಆಯುಕ್ತರ ಕಚೇರಿಯನ್ನೇ ಮೂರು ದಿನಗಳ ಕಾಲ ಮುಚ್ಚಲಾಗಿದೆ.

ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್ ಎಮ್ಮೆ ನೋಡಿಕೊಳ್ಳಲು ರಜೆ ಬೇಕು; ಪೊಲೀಸ್ ಕಾನ್ಸ್‌ಟೇಬಲ್ ರಜೆ ಪತ್ರ ವೈರಲ್

ವಿಲ್ಸನ್ ಗಾರ್ಡನ್ ಠಾಣೆಯ ಎಎಸ್‌ಐ, ಕಲಾಸಿಪಾಳ್ಯ ಠಾಣೆ ಕಾನ್ಸ್‌ಟೇಬಲ್ ಸೇರಿದಂತೆ ನಗರದ ನಾಲ್ವರು ಸಿಬ್ಬಂದಿಗಳು ಇದುವರೆಗೂ ಮೃತಪಟ್ಟಿದ್ದಾರೆ. ಹಲವು ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.

English summary
57 Year old Whitefield police station ASI tested positive for Coronavirus. He died on Saturday night after collapsed in his residence. In hospital he was declared dead on arrival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X