ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನ ಹಾಗೂ ಅಶೋಕ್ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಅಶ್ವತ್ಥ ನಾರಾಯಣ

|
Google Oneindia Kannada News

ಬೆಂಗಳೂರು, ಆಗಸ್ಟ್ 26: ನನ್ನ ಹಾಗೂ ಅಶೋಕ್ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ ಎಂದು ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಯಾವ ಜವಾಬ್ದಾರಿ ಕೊಟ್ಟರೂ ಕೂಡ ಸಮರ್ಥವಾಗಿ ನಿಬಾಯಿಸುತ್ತೇನೆ.

ಇಂದು ಸಚಿವರಿಗೆ ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಹುದ್ದೆ ಪಕ್ಕಾಇಂದು ಸಚಿವರಿಗೆ ಖಾತೆ ಹಂಚಿಕೆ, ಉಪ ಮುಖ್ಯಮಂತ್ರಿ ಹುದ್ದೆ ಪಕ್ಕಾ

ಆದರೆ ಖಾತೆ ಹಂಚಿಕೆ ವಿಳಂಬದಿಂದ ಯಾವುದೇ ಅಭಿವೃದ್ದಿ ಕಾರ್ಯಗಳು ನಿಂತಿಲ್ಲ ನನ್ನ ಹಾಗೂ ಅಶೋಕ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಅವೆಲ್ಲಾ ಊಹಾಪೋಹ..ಕೆಲವರಿಗೆ ಅಪೇಕ್ಷೆ ಇರುತ್ತದೆ..ಮುಖ್ಯಮಂತ್ರಿಯವರು ಕೇಂದ್ರದ ಪ್ರಮುಖರ ಸಲಹೆ ಪಡೆದಿದ್ದಾರಷ್ಟೆ.

Recommended Video

ಕುಮಾರಸ್ವಾಮಿಗೆ ಕೈ ಕೊಟ್ಟವರಿಗೆ ಬುದ್ಧಿ ಕಲಿಸಿದ ದೇವೇಗೌಡ್ರು | Oneindia Kannada

ಹೈ ಕಮಾಂಡ್ ಸಂಸ್ಕೃತಿ ಏನಲ್ಲ.ಎಲ್ಲವೂ ಲೊಕಲೈಸ್ಡ್ ಆಗಿದೆ. ಸಿಎಂ ನಿರ್ಧಾರದಂತೆ ಆಗಿದೆ. ಬಿಜೆಪಿಯಲ್ಲಿ ಯಾವುದೇ ಬಣವಿಲ್ಲ.ಎಲ್ಲರೂ ಒಗ್ಗಟ್ಟಾಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

 ಡಿಸಿಎಂ ಹುದ್ದೆ ಸೃಷ್ಟಿ ಏಕಾಏಕಿ ನಿರ್ಧಾರ ಅಲ್ಲ

ಡಿಸಿಎಂ ಹುದ್ದೆ ಸೃಷ್ಟಿ ಏಕಾಏಕಿ ನಿರ್ಧಾರ ಅಲ್ಲ

ಒಂದು ವಾರದ ಹಿಂದೆಯೇ ಡಿಸಿಎಂ ಹುದ್ದೆ ಸೃಷ್ಟಿಯ ನಿರ್ಧಾರ ಬಿಜೆಪಿ ಹೈಕಮಾಂಡ್ ನಿರ್ಧರಿಸಿತ್ತು.

ಡಿಸಿಎಂ ಹುದ್ದೆಗಳ ಸೃಷ್ಟಿಯ ನಿರ್ಧಾರ ಕೈಗೊಂಡ ಬಳಿಕವೇ ಸಚಿವ ಸಂಪುಟ ಸದಸ್ಯರ ಹೆಸರನ್ನು ಅಂತಿಮ ಮಾಡಿತ್ತು.

ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ ಮತ್ತು ಡಾ. ಅಶ್ವತ್ಥ ನಾರಾಯಣ್ ಅವರನ್ನು ಡಿಸಿಎಂ ಮಾಡುವ ನಿರ್ಧಾರ ಒಂದು ವಾರದ ಹಿಂದೆಯೇ ಕೈಗೊಂಡಿದ್ದ ನಿರ್ಧಾರವಾಗಿದೆ.

ಅದೇ ಕಾರಣಕ್ಕೆ ಸಚಿವರಾಗಿ ಪದಗ್ರಹಣ ವೇಳೆ ಮೊದಲ ಮೂರು ಸಚಿವರಾಗಿ ಕಾರಜೋಳ, ಸವದಿ ಮತ್ತು ಅಶ್ವತ್ಥ ನಾರಾಯಣ ಪ್ರಮಾಣ ವಚನಕ್ಕೆ ಸೂಚಿಸಿದ್ದ ಬಿಜೆಪಿ ಹೈಕಮಾಂಡ್.

 ಡಿಸಿಎಂ ಹುದ್ದೆ ಬಗ್ಗೆ ಅಶ್ವತ್ಥ ನಾರಾಯಣ ಏನಂದ್ರು?

ಡಿಸಿಎಂ ಹುದ್ದೆ ಬಗ್ಗೆ ಅಶ್ವತ್ಥ ನಾರಾಯಣ ಏನಂದ್ರು?

ಆ ಬಗ್ಗೆ ನಾನು ಏನೂ ಹೇಳಲ್ಲ, ಯಡಿಯೂರಪ್ಪ ಮಾತ್ರ ಆ ಬಗ್ಗೆ ಮಾತಾಡ್ತಾರೆ. ನಾಳೆಯ ಕಾರ್ಯಕ್ರಮದ ಬಗ್ಗೆ ಮಾತ್ರ ನಾನು ಮಾತಾಡ್ತೇನೆ. ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಪಕವಾಗಿ ನಿಭಾಯಿಸ್ತೇನೆ. ನೆರೆ ಸೇರಿದಂತೆ ಎಲ್ಲವೂ ತ್ವರಿತವಾಗಿ ನಡೆಯುತ್ತಿವೆ. ಅಭಿವೃದ್ಧಿ ಸೇರಿಸಂತೆ ಯಾವದೂ ಕೊರತೆ ಆಗಿಲ್ಲ ಎಂದು ಹೇಳಿದರು.

ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!ಕರ್ನಾಟಕ ಬಿಜೆಪಿ ಪಾಲಿಗೆ 'ಡಿಸಿಎಂ' ಕುರ್ಚಿಯೇ ಟೈಂ ಬಾಂಬ್; ಬಿಎಸ್ ವೈ ಜ್ವಾಲಾಮುಖಿ!

 ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ

ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ

ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ.ಲೋಕಸಭಾ ಚುನಾವಣೆಯಲ್ಲಿ 26 ಸಂಸದರನ್ನು ಗೆಲ್ಲಿಸಿದ್ದಾರೆ.ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದೇ ಯಡಿಯೂರಪ್ಪನವರು‌.ಅವರಿಂದಾಗಿಯೇ ಪಕ್ಷ ಭಲಿಷ್ಟವಾಗಿ ಬೆಳೆದಿದೆ.ನಳೀನ್ ಕುಮಾರ್ ಕಟೀಲ್ ಬಿಎಸ್ ವೈ ಗೆ ಸಮರ್ಥ ಉತ್ತರಾಧಿಕಾರಿ ಎಂದು ಹೇಳಿದರು.

 ನಳಿನ್ ಕುಮಾರ್ ಕಟೀಲು ಅಧಿಕಾರ ಸ್ವೀಕಾರ

ನಳಿನ್ ಕುಮಾರ್ ಕಟೀಲು ಅಧಿಕಾರ ಸ್ವೀಕಾರ

ಮಂಗಳವಾರ 10:30ಕ್ಕೆ ಬಿಜೆಪಿ ನೂತನ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧಿಕಾರ ಸ್ವೀಕಾರ ಕಾರ್ಯಕ್ರಮವಿದೆ. ಬೆಳಗ್ಗೆ 9 ಗಂಟೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಲಾಗುತ್ತದೆ. 9:30ಕ್ಕೆ ಕಾಡು ಮಲ್ಲೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ 10:30ಕ್ಕೆ ಬಿಜೆಪಿ ಕಚೇರಿಯ ಮುಂಭಾಗದಲ್ಲಿ ಅಧಿಕಾರ ಸ್ವೀಕಾರ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

English summary
Ashwath Narayan said that there were no differences between me and Ashok.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X