ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಕ್ರೋಸಾಫ್ಟ್ ಜೊತೆ ಒಪ್ಪಂದ, ಡಿಪ್ಲೊಮಾಗೆ ಹೊಸ ರೂಪ: ಡಿಸಿಎಂ

|
Google Oneindia Kannada News

ಬೆಂಗಳೂರು, ಮೇ 21: ಇಂದು ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಪದವಿ ವಿದ್ಯಾರ್ಥಿಗಳ ಪರೀಕ್ಷೆ ನಡೆಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಪರಿಷತ್ ಸದಸ್ಯರ ಜೊತೆ ಈ ವಿಚಾರಗಳ ಬಗ್ಗೆ ಮಾತುಕತೆ ಮಾಡಿದ್ದಾರೆ.

Recommended Video

ಮಹಿಳೆಗೆ ಬೈದ ಸಚಿವ ಮಾಧುಸ್ವಾಮಿ ವಿರುದ್ಧ ಯಡಿಯೂರಪ್ಪ ಗರಂ | BS Yediyurappa | Madhu Swamy | Oneindia Kannada

ಪದವಿ ಪರೀಕ್ಷೆಗಳನ್ನು ಹೇಗೆ ನಡೆಸಬೇಕು, ಮಲ್ಟಿಪಲ್ ಪ್ರಶ್ನೆಗಳನ್ನ ನೀಡುವುದು, ಪರೀಕ್ಷಾ ಮೌಲ್ಯಮಾಪನ, ಉಪನ್ಯಾಸಕರ ರಜೆ, ಕೆಲಸ ಹೇಗೆ ನಿರ್ವಹಿಸಬೇಕು, ಆನ್ ಲೈನ್ ಕ್ಲಾಸ್ ಮಾಡುತ್ತಿರುವ ಬಗ್ಗೆ ಪರಿಷತ್ ಸದಸ್ಯರು ಅಭಿಪ್ರಾಯಗಳನ್ನ ನೀಡಿದರು.

ಇನ್ನೂ ನಿಗದಿಯಾಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕಇನ್ನೂ ನಿಗದಿಯಾಗದ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ದಿನಾಂಕ

ಪರಿಷತ್ ಸದಸ್ಯರು ಸರ್ಕಾರದ ನಿರ್ಧಾರಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೋವಿಡ್ 19 ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈಗಾಗಲೇ ನ್ಯಾಸ್ಕಾಂ, ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಶ್ವಥ್ ನಾರಾಯಣ್ ತಿಳಿಸಿದ್ದಾರೆ.

ವರ್ಗಾವಣೆಗೆ ಹೊಸ ಕಾಯ್ದೆ

ವರ್ಗಾವಣೆಗೆ ಹೊಸ ಕಾಯ್ದೆ

ವರ್ಗಾವಣೆಗೆ ಹೊಸ ಕಾಯ್ದೆ ತರಲು ಚಿಂತಿಸಿದ್ದೇವೆ. ಕೊರೊನಾದಿಂದಾಗಿ ಹೊಸ ಕಾಯ್ದೆ ತರಲು ಆಗಲಿಲ್ಲ. ಹೀಗಾಗಿ ಹೊಸ ನಿಯಮ ಬಗ್ಗೆಯೂ ಚರ್ಚೆ ನಡೆಸಿದ್ದೇವೆ ನಮ್ಮ ಶಿಕ್ಷಣ ಇಲಾಖೆಯ ತಜ್ಞರ ಅಭಿಪ್ರಾಯ ಪಡೆದಿದ್ದೇವೆ. ಈ ಶೈಕ್ಷಣಿಕ ವರ್ಷದಲ್ಲೇ ವರ್ಗಾವಣೆಗೆ ಹೊಸ ತರುತ್ತವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಹೇಳಿಕೆ ನೀಡಿದ್ದಾರೆ.

ಹೊಸದಾಗಿ 310 ಪ್ರಿನ್ಸಿಪಾಲರ ನೇಮಕ

ಹೊಸದಾಗಿ 310 ಪ್ರಿನ್ಸಿಪಾಲರ ನೇಮಕ

ಹೊಸದಾಗಿ 310 ಪ್ರಿನ್ಸಿಪಾಲರ ನೇಮಕ ಮಾಡಿದ್ದು, ಈಗಾಗಲೇ ಹುದ್ದೆಗೆ ಭರ್ತಿ ಮಾಡುವ ಬಗ್ಗೆ ಕ್ರಮ ತೆಗೆದುಕೊಂಡಿದ್ದೇವೆ. ವೆಬ್ ಪೋರ್ಟಲ್ ತರಬೇತಿ ವ್ಯವಸ್ಥೆ ತಂದಿದ್ದೇವೆ. ಸಿಇಟಿ, ನೀಟ್‌ಗೆ ತರಬೇತಿ ನೀಡುತ್ತಿದ್ದೇವೆ. ಹೊಸ ಶಿಕ್ಷಣ ನೀತಿಯನ್ನ ಜಾರಿಗೆ ತರಲು ನಿರ್ಧರಿಸಿದ್ದೇವೆ. ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಬರಲಿದೆ. ಈ ಬಗ್ಗೆಯೂ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ ಎಂದಿದ್ದಾರೆ.

ಡಿಪ್ಲೊಮಾಗೆ ಹೊಸ ರೂಪ

ಡಿಪ್ಲೊಮಾಗೆ ಹೊಸ ರೂಪ

ಡಿಪ್ಲೊಮಾಗೆ ಸೇರುವವರು ಕಡಿಮೆಯಾಗಿದ್ದಾರೆ. ಹೀಗಾಗಿ ಡಿಪ್ಲೊಮಾಗೆ ಹೊಸ ರೂಪ ನೀಡಲು ಚಿಂತನೆ ನಡೆದಿದೆ. ಶಿಕ್ಷಣ ಮಟ್ಟವನ್ನ ಸರಿಪಡಿಸುವ ನಿಟ್ಟಿನಲ್ಲಿ ಸ್ಕಿಲ್ ಟ್ರೈನಿಂಗ್ ಮಾದರಿಯಲ್ಲಿ ಪಠ್ಯಕ್ರಮ ಮಾಡುತ್ತೇವೆ. ಜೊತೆಗೆ ಹೊಸ ಕಾರ್ಯಕ್ರಮಗಳನ್ನ ತರಲು ಉದ್ದೇಶಿಸಿದ್ದೇವೆ. ಡಿಪ್ಲೊಮಾಗೆ ಹೊಸ ರೂಪ ಕೊಡಲು ಸಿದ್ಧತೆ ನಡೆಸಿದ್ದೇವೆ. ನ್ಯಾಸ್ಕಾಂ, ಮೈಕ್ರೋಸಾಫ್ಟ್ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ಹೊಸ ಶಿಕ್ಷಣ ನೀಡುವುದಕ್ಕೆ ತೀರ್ಮಾನ. ಈ ಶೈಕ್ಷಣಿಕ ವರ್ಷದಲ್ಲೇ ಸುಧಾರಣೆ ತರಲು ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ಕಾಲೇಜು ಶಿಕ್ಷಕರ ಒಂದೇ ವಾಟ್ಸಾಪ್ ಗ್ರೂಪ್

ಕಾಲೇಜು ಶಿಕ್ಷಕರ ಒಂದೇ ವಾಟ್ಸಾಪ್ ಗ್ರೂಪ್

ಸರ್ಕಾರಿ ಕಾಲೇಜು ಶಿಕ್ಷಕರನ್ನು ಒಂದೇ ವಾಟ್ಸಾಪ್ ಗ್ರೂಪ್ ನಡಿ ತಂದಿದ್ದೇವೆ. ಐಟಿಬಿಟಿ ಉನ್ನತ ಶಿಕ್ಷಣ ಸಂಯೋಜನೆ ಮಾಡಿ ಕಾರ್ಯಕ್ರಮ ಮಾಡುತ್ತಿದ್ದೇವೆ. ತಂತ್ರಜ್ಙಾನ ಬಳಕೆಗೆ ಹೆಚ್ಚಿನ ಒತ್ತನ್ನ ನೀಡಿದ್ದೇವೆ. ವಿವಿ ಸಂಸ್ಥೆಗೆ ಟಾಸ್ಕ್ ಫೋರ್ಸ್ ರಚಿಸಿದ್ದೇವೆ. ಅದನ್ನ ಉತ್ತಮ ಸಂಸ್ಥೆಯಾಗಿ ಬೆಳೆಸಲು ಚಿಂತನೆ ಇದೆ. ಅಟೋನಮಸ್ ಕಾಲೇಜಾಗಿ ಉತ್ತಮ ಪಡಿಸುತ್ತೇವೆ ಡಿಸಿಎಂ ಅಶ್ಚಥ್ ನಾರಾಯಣ್ ಹೇಳಿಕೆ ವಿವರಿಸಿದ್ದಾರೆ.

English summary
DCM CN Aswath Narayan discussed about conducting Undergraduate students examinations with Council Members at Vidhana Soudha today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X