• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಆಷಾಢ ಪ್ರಥಮ ಏಕಾದಶಿ: ಉಪವಾಸ ಏಕೆ? ಉತ್ತರಾದಿಮಠದಲ್ಲಿ ಏನೆಲ್ಲ ಕಾರ್ಯಕ್ರಮ?

|
   ಆಷಾಢ ಶುದ್ಧ ಏಕಾದಶಿ ಇಂದು : ಉಪವಾಸದ ಹಿಂದಿನ ಮಹತ್ವ ಏನು? | Oneindia Kannada

   ಬೆಂಗಳೂರು, ಜುಲೈ 23: ಇಂದು ಆಷಾಢ ಶುದ್ಧ ಏಕಾದಶಿ. ಎಲ್ಲ ಶುಭ ಆಚರಣೆಗಳಿಗೂ ಬ್ರೇಕ್ ಹಾಕುವ ಆಷಾಢ ಮಾಸದಲ್ಲಿ ಬರುವ ಪ್ರಥಮ ಏಕಾದಶಿಗೆ ತನ್ನದೇ ಆದ ಮಹತ್ವವಿದೆ. ಈ ದಿನ ಉಪವಾಸ ಮಾಡಿದರೆ ಎಲ್ಲಾ ಪಾಪವೂ ನಾಶವಾಗುತ್ತದೆ ಎಂಬ ನಂಬಿಕೆ ಹಿಂದು ಧರ್ಮದಲ್ಲಿದೆ.

   ವ್ಯಕ್ತಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಮಾಡುವ ತಪ್ಪನ್ನು ಮನ್ನಿಸುವಂತೆ ಕೋರಿ ಈ ದಿನ ಹಲವರು ಉಪವಾಸ ಸತ್ಯಾಗ್ರಹ ಆಚರಿಸುತ್ತಾರೆ. ಭಗವಾನ್ ವಿಷ್ಣುವು ನಿದ್ರೆಗೆ ತೆರಳುವ ಕಾಲ ಇದ್ದಾದ್ದರಿಂದ ಇಂದಿನಿದ ಚಾತುರ್ಮಾಸ ವ್ರತವೂ ಆರಂಭವಾಗುತ್ತದೆ.

   ಏಕಾದಶಿ ಉಪವಾಸಕ್ಕೂ ನೊಬೆಲ್ ಪ್ರಶಸ್ತಿಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ?

   ಈ ವರ್ಷ ಆಷಾಢ ಏಕಾದಶಿ ಜುಲೈ 23, ಸೋಮವಾರದಂದು ಬಂದಿದೆ. ನೀರಸ ಮಾಸ ಎಂದೇ ಕರೆಸಿಕೊಳ್ಳುವ ಆಷಾಢದಲ್ಲಿ ಎಲ್ಲಾ ವ್ಯಾಪಾರ ವಹಿವಾಟಿಗೂ ಬ್ರೇಕ್ ಹಾಕಲಾಗುತ್ತದೆ. ಆದರೆ ಪ್ರಥಮ ಏಕಾದಶಿಯನ್ನು ಮಾತ್ರ ಎಲ್ಲೆಡೆ ಶ್ರದ್ಧೆ, ಭಕ್ತಿಯಿಂದ ಆಚರಿಸಲಾಗುತ್ತದೆ.

   ಉಪವಾಸದ ಮಹತ್ವ

   ಉಪವಾಸದ ಮಹತ್ವ

   "ಯಾರು ಏಕಾದಶಿಯಂದು ಉಪವಾಸ ಮಾಡುತ್ತಾರೋ, ನಾನು ಅಂಥವರ ಪಾಪವನ್ನೆಲ್ಲ ಸುಟ್ಟುಬಿಡುತ್ತೇನೆ, ಅಷ್ಟೇ ಅಲ್ಲ, ಅಂಥವರ ಹೃದಯದಲ್ಲಿ ನಾನು ವಾಸಿಸುತ್ತೇನೆ" ಎಂದು ಭಗವಾನ್ ಶ್ರೀಕೃಷ್ಣನ ಅರ್ಜುನನಿಗೆ ಹೇಳುತ್ತಾನೆ(ಭಗವದ್ಗೀತೆ, ಅಧ್ಯಾಯ 1). ಆದ್ದರಿಂದ ಎಲ್ಲಾ ಏಕಾದಶಿಯೂ ಶ್ರೇಷ್ಠವೇ. ಅದರಲ್ಲೂ ಆಷಾಢ ಮಾಸದ ಶುದ್ಧ ಏಕಾದಶಿಗೆ ತನ್ನದೇ ಆದ ಮಹತ್ವವಿದೆ. ಈ ದಿನ ಉಪವಾಸ ಮಾಡಿ ಮಾಡಿದ ತಪ್ಪನ್ನೆಲ್ಲ ಮನ್ನಿಸು ಎಂದು ದೇವರನ್ನು ಪ್ರಾರ್ಥಿಸಿ, ಸಂಕಲ್ಪ ಮಾಡುವ ದಿನ.

   ಆಷಾಢ ಏಕಾದಶಿ ದಿನ ಉಪವಾಸ ಏಕೆ ಮಾಡಬೇಕು?

   ಚಾತುರ್ಮಾಸ ಆರಂಭ

   ಚಾತುರ್ಮಾಸ ಆರಂಭ

   ಆಷಾಡ ಶುದ್ಧ ಏಕಾದಶಿಯಿಂದ ಭಗವಾನ್ ವಿಷ್ಣುವು ನಿದ್ರಿಸಲು ತೆರಳುತ್ತಾನೆ. ಕಾರ್ತಿಕ ಮಾಸದ ಶುದ್ಧ ಏಕಾದಶಿಯವರೆಗೂ ವಿಷ್ಣು ನಿದ್ರಿಸುವುದರಿಂದ ಆ ಅವಧಿಯಂದು ಚಾತುರ್ಮಾಸದ ಆಚರಣೆ ನಡೆಯುತ್ತದೆ. ಮಠಾಧೀಶರೆಲ್ಲ ಈ ಅವಧಿಯಲ್ಲಿ ಕಠಿಣ ವ್ರತನಿಯಮ ಪಾಲಿಸುತ್ತಾರೆ.

   ಯಾವ ಆಹಾರ ಶ್ರೇಷ್ಠ

   ಯಾವ ಆಹಾರ ಶ್ರೇಷ್ಠ

   ನೀರನ್ನೂ ಸೇವಿಸದಷ್ಟು ಕಠಿಣ ಉಪವಾಸ ಮಾಡುವ ಅಗತ್ಯವೇನೂ ಇಲ್ಲ. ಈ ದಿನ ಬೇಳೆ-ಕಾಳು ಅಥವಾ ಬೇಯಿಸಿದ ಖಾದ್ಯ ತಿನ್ನುವುದು ವರ್ಜ್ಯ. ಹಣ್ಣುಗಳು, ಒಣಹಣ್ಣುಗಳನ್ನು ಸೇವಿಸಬಹುದು. ಉಪವಾಸ ಮಾಡಿ ದೇವರ ನಾಮಸ್ಮರಣೆ ಮಾಡುತ್ತ ಕಾಲಕಳೆದರೆ ಹಲವು ತೀರ್ಥಕ್ಷೇತ್ರಗಳನ್ನು ಸಂಧಿಸಿದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ನಂಬಿಕೆ. ಪ್ರಾಪಂಚಿಕ ವ್ಯಾಮೋಹಗಳನ್ನು ಕೆಲಕಾಲವಾದರೂ ಕಡಿದುಕೊಂಡು ಸಚ್ಚಾರಿತ್ರ್ಯದಿಂದ ಬದುಕುವ ಸಂಕಲ್ಪಕ್ಕಾಗಿ ಈ ಉಪವಾಸ.

   ವೈಜ್ಞಾನಿಕ ಮಹತ್ವ

   ವೈಜ್ಞಾನಿಕ ಮಹತ್ವ

   ಉಪವಾಸ ಮಾಡುವುದರಿಂದ ದೇಹದ ಆರೋಗ್ಯವೂ ಸುಸ್ಥಿತಯಲ್ಲಿರುತ್ತದೆ. ಅದೂ ಅಲ್ಲದೆ, ಬೇರೆಲ್ಲ ಜಂಜಡ ಮರೆತು ಮನಸ್ಸನ್ನು ಉತ್ತಮ ಕಾರ್ಯಗಳತ್ತ ಕೇಂದ್ರೀಕರಿಸುವುದರಿಂದ ಮಾನಸಿಕ ನೆಮ್ಮದಿಯೂ ಸಾಧ್ಯ. ಹದಿನೈದು ದಿನಕ್ಕೊಮಮೆ ಉಪವಾಸ ಮಾಡುವುದರಿಂದ ಜೀರ್ಣಕ್ರಿಯೆಯೂ ಸರಾಗವಾಗಿ ಆಗುತ್ತದೆ.

   ಉತ್ತರಾಧಿ ಮಠದ ಕಾರ್ಯಕ್ರಮದ ವಿವರ

   ಉತ್ತರಾಧಿ ಮಠದ ಕಾರ್ಯಕ್ರಮದ ವಿವರ

   ಬೆಂಗಳೂರಿನ ಉತ್ತರಾಧಿ ಮಠದಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದಲೇ ಮುದ್ರಾಧಾರಣೆ ಆರಂಭವಾಗಿದೆ. ಪ್ರಥಮ ಏಕಾದಶಿ ದಿನ ಉತ್ತರಾದಿ ಮಠದ ಕಾರ್ಯಕ್ರಮದ ವಿವರ ಇಲ್ಲಿದೆ.

   * ಎರಡು ಎರಡು ತಾಸಿನ 5 ಗುಂಪುಗಳು

   * ಬೆಳಿಗ್ಗೆ 06:00, 08:00, 10:00 ಮತ್ತು ಸಂಜೆ 5:00, 07:00

   * ಮಧ್ಯಾಹ್ನ 12:00 ರಿಂದ 4:30 ಸಂಸ್ಥಾನ ಪೂಜೆ(ಈ ಸಮಯದಲ್ಲಿ ಮುದ್ರೆ ಇರುವುದಿಲ್ಲ)

   * ಒಟ್ಟು ನಾಲ್ಕು ಪ್ರವೇಶ ದ್ವಾರಗಳಿರುತ್ತವೆ

   ದ್ವಾರಸಂಖ್ಯೆ 1: ಎಸ್ ಬಿಐ ಎಟಿಎಂ ಪಕ್ಕದಲ್ಲಿ.

   ದ್ವಾರಸಂಖ್ಯೆ 2: ಎಸ್ ಬಿಐ ಎಟಿಎಂ ಎದುರಲ್ಲಿ.

   ದ್ವಾರಸಂಖ್ಯೆ 3: ನರಸಿಂಹದೇವರ ದೇವಸ್ಥಾನದ ಎದುರಲ್ಲಿ

   ದ್ವಾರಸಂಖ್ಯೆ 4: ನರಸಿಂಹದೇವರ ದೇವಸ್ಥಾನದ ಬದಿಯಲ್ಲಿ

   English summary
   People of Karnataka are celebrating ashadha ekadashi festival today(July 23). Here is a brief details about the importance of ekadashi fasting and programme list of Uttaradi Mutt Bengaluru. The festival is for worshipping lord Vishnu.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more