ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭಾರಿ ಮಳೆಯ ಮಧ್ಯೆ ಮುಂದುವರಿದ ಆಶಾ ಕಾರ್ಯಕರ್ತರ ಧರಣಿ

By Sachhidananda Acharya
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 8: ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸುಮಾರು 15 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರ ಆಗಾಗ ಸುರಿಯುವ ಜಡಿ ಮಳೆ ಮತ್ತು ಬಿಸಿಲಿನ ಮಧ್ಯೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (AIUTUC) ವತಿಯಿಂದ ಈ ಅನಿರ್ಧಿಷ್ಟಾವಧಿ, ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ.

ASHA workers protest steped into second day in Bengaluru

ಫ್ರೀಡಂ ಪಾರ್ಕ್ ನಲ್ಲಿ ಪೆಂಡಾಲ್ ಹಾಕಲಾಗಿದ್ದು ಮಳೆ ಬಂದರೆ ಮಾತ್ರ ಕಾರ್ಯಕರ್ತರಿಗೆ ಇಲ್ಲಿ ಯಾವುದೇ ಆಶ್ರಯವಿಲ್ಲ. ಪಕ್ಕದಲ್ಲಿ ಕಲ್ಯಾಣ ಮಂಟಪ ಬುಕ್ ಮಾಡಲಾಗಿದೆಯಾದರೂ 15,000 ಸಾವಿರ ಜನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಶುಕ್ರವಾರ ಮಂಧ್ಯಾಹ್ನ ಸುರಿದ ಭಾರೀ ಮಳೆಯಲ್ಲಿ ರಸ್ತೆಯಲ್ಲೇ ಕೊಡೆ ಹಿಡಿದುಕೊಂಡು ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರ ಬೇಡಿಕೆಗಳೇನು?

1. ಎಲ್ಲಾ ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ 18,000 ಮಾಸಿಕ ವೇತನ ನಿಗದಿಪಡಿಸಿ, ಪ್ರತಿ ತಿಂಗಳು ನೀಡಬೇಕು.
2. 'ಆಶಾ ಸಾಫ್ಟ್' ರದ್ದುಪಡಿಸಿ, ಆಶಾಗಳು ದುಡಿದಷ್ಟು ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ಪ್ರತಿ ತಿಂಗಳು ನೀಡಲು ಕ್ರಮ ಕೈಗೊಳ್ಳಬೇಕು.
3. ಆಶಾ ಕಾರ್ಯಕರ್ತೆಯರನ್ನು ಖಾಯಂಗೊಳಿಸಿ ಹಾಗೂ ಪಿ.ಎಫ್, ಇಎಸ್ಐ, ಪಿಂಚಣಿ ಸೌಲಭ್ಯಗಳನ್ನು ಒದಗಿಸಬೇಕು.

ಈ ಬೇಡಿಕೆಗಳಲ್ಲದೆ ಇನ್ನೂ 5 ಬೇಡಿಕೆಗಳು ಸೇರಿ ಒಟ್ಟು 8 ಬೇಡಿಕೆಗಳನ್ನು ಆಶಾ ಕಾರ್ಯಕರ್ತರು ಸರಕಾರದ ಮುಂದೆ ಇಟ್ಟಿದ್ದಾರೆ.

ASHA workers protest steped into second day in Bengaluru

ಆಶಾ ಕಾರ್ಯಕರ್ತರು ಜನತೆಯ ಮಧ್ಯೆ ಇದ್ದು ಇಲಾಖೆಯ ಸೇವೆಗಳನ್ನು ಅಚ್ಚುಕಟ್ಟಾಗಿ ತಲುಪಿಸುವಲ್ಲಿ ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಮ್ಮ ಕಷ್ಟಕ್ಕೆ, ದುಡಿಮೆಗೆ ತಕ್ಕಂತೆ ವೇತನ ಸಿಗುತ್ತಿಲ್ಲ. ಕೇವಲ 3,000 ರೂಪಾಯಿ ವೇತನ ನೀಡಲಾಗುತ್ತಿದೆ ಎಂಬುದು ಕಾರ್ಯಕರ್ತರ ಅಳಲು.

ಇನ್ನು ಗುರುವಾರ ಪ್ರತಿಭಟನಾ ಸ್ಥಳಕ್ಕೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನ ರಜನೀಶ್ ಮತ್ತು ಆರೋಗ್ಯ ಸಚಿವ ರಮೇಶ್ ಕುಮಾರ್ ಕುಮಾರ್ ಭೇಟಿ ನೀಡಿ ಕಾರ್ಯಕರ್ತರ ಮನವೊಲಿಸಲು ಪ್ರಯತ್ನಪಟ್ಟರು. ವೇತನವನ್ನು 5 ಸಾವಿರ ರೂಪಾಯಿಗೆ ಏರಿಸುವ ಭರವಸೆ ನೀಡಿದರು. ಆದರೆ ಇದಕ್ಕೆ ಆಶಾ ಕಾರ್ಯಕರ್ತರು ಜಗ್ಗದೆ ಪ್ರತಿಭಟನೆ ಮುಂದುವರಿಸಿದ್ದಾರೆ.

ASHA workers protest steped into second day in Bengaluru

ಶುಕ್ರವಾರ ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಜಾಗಕ್ಕೆ ಬಿಜೆಪಿ ಶಾಸಕ ಸುರೇಶ್ ಕುಮಾರ್, ಬಿ.ಎನ್ ವಿಜಯಕುಮಾರ್, ಜೆಡಿಎಸ್ ಶಾಸಕ ಶರಣವ ಭೇಟಿ ನೀಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

English summary
ASHA workers protest steped into second day at the Freedom Park in Bangalore. Demanding a fixed monthly honorarium and abolition of ASHA Soft, ASHAs from across the State started a massive indefinite day and night protest at Freedom Park in Bengaluru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X