ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಂಧ್ರಪ್ರದೇಶ ಮಾದರಿಯಲ್ಲಿ ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ವೇತನಕ್ಕೆ ಬೇಡಿಕೆ

|
Google Oneindia Kannada News

ಬೆಂಗಳೂರು, ಮೇ.17: ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಿಂದ ವಿವಿಧ ಬೇಡಿಕೆ ಈಡೇರಿಸುವಂತೆ ಇಂದು ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಕೊನೆಗೂ ಕೈಬಿಟ್ಟಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಆರೋಗ್ಯ ಇಲಾಖೆಯ ಆಯುಕ್ತ ರಂದೀಪ್ ಆಗಮಿಸಿ ಪ್ರತಿಭಟನಾಕಾರರನ್ನ ಉದ್ದೇಶಿಸಿ ಇದೇ ತಿಂಗಳ 22ನೇ ತಾರೀಖಿನಂದು ಸಭೆ ಕರೆಯುವುದಾಗಿ ತಿಳಿಸಿದರು.

ಇದೇ ವೇಳೆ ಮಾತನಾಡಿದ ಅವರು 'ವೇತನ ಹೆಚ್ಚಳದ ಬಗ್ಗೆ ನಮ್ಮ ಜೊತೆ ಈ ಹಿಂದೊಮ್ಮೆ ಚರ್ಚೆ ಮಾಡಿದ್ದೇವೆ. ಕೋವಿಡ್ ದಿನಗಳಿಂದ ಹಿಡಿದು ಎಲ್ಲಾ ಕಡೆಗಳಲ್ಲೂ ಉತ್ತಮ ಕೆಲಸ ನಿರ್ವಹಣೆ ಮಾಡಿದ್ದೀರಿ. ಅಗತ್ಯಕ್ಕಿಂತ ಹೆಚ್ಚಿನ ಕೆಲಸ ಮಾಡಿಸಿಕೊಂಡಲ್ಲಿ ಕಮಿಷನರ್ ಗಮನಕ್ಕೆ ತರಬೇಕಿದೆ ಆದ್ದರಿಂದ ಅವರ ಜೊತೆ ಮಾತನಾಡಿ ಸಭೆ ಬಗ್ಗೆ ತಿಳಿಸಲಾಗುವುದು ಎಂದರು.

10 ಸಾವಿರ ಸಂಬಳ ನಿಗದಿ ಮಾಡಿ

ಆಂಧ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ವೇತನ ಬಗ್ಗೆಯೂ ಮಾತಾಡಿದ ಅವರು ಕರ್ನಾಟಕ ರಾಜ್ಯದಲ್ಲಿಯೂ ಸಹ ಆಂಧ್ರ ಮಾದರಿಯಂತೆ 10 ಸಾವಿರ ಸಂಬಳ ನಿಗದಿ ಮಾಡಬೇಕು ಎಂದು ಆಶಾ ಕಾರ್ಯಕರ್ತೆಯರು ಬೇಡಿಕೆ ಸಲ್ಲಿಸಿದರು. ಈ ಸಂಬಂಧ ಮೇ 22 ರಂದು AIUTUC ಮುಖಂಡರೊಂದಿಗೆ ಸಭೆ ಕರೆದು ನಿರ್ಧಾರ ಮಾಡುವುದಾಗಿ ಆರೋಗ್ಯ ಇಲಾಖೆ ಮುಖ್ಯ ಆಯುಕ್ತ ರಂದೀಪ್ ಭರವಸೆ ಕೊಟ್ಟ ಬಳಿಕವೇ ಪ್ರತಿಭಟನೆ ಕೈ ಬಿಡಲಾಯಿತು.

Asha Wokers Massive Protest in Bengaluru

ಸ್ಥಳಕ್ಕೆ ಬಂದ ಎನ್ಎಚ್ಎಂ ಡೈರೆಕ್ಟರ್ ಪ್ರಭುಗೌಡಗೆ ದಿಕ್ಕಾರ..!

ಪ್ರತಿಭಟನೆ ಮಾಡುತ್ತಿದ್ದ ಸ್ಥಳಕ್ಕೆ ಬಂದ ಎನ್ಎಚ್ಎಂ ಡೈರೆಕ್ಟರ್ ಪ್ರಭುಗೌಡ (ಆಶಾ ಪ್ರೋಗ್ರಾಮ್ ಡೈರೆಕ್ಟರ್) ಬೇಡಿಕೆಗೆ ಸ್ಪಂದಿಸಿ ಪ್ರತಿಭಟನಾಕಾರರ ಉದ್ದೇಶಿಸಿ ಮಾತನಾಡುವಂತೆ ಪ್ರತಿಭಟನೆಕಾರರು ಒತ್ತಾಯ ಮಾಡಿದರು. ಅದಕ್ಕೆ ನಿರಾಕರಿಸಿದ ಪ್ರಭುಗೌಡ 'ನಾನು ಮಾತಾಡುವುದಿಲ್ಲ ಕಮಿಷನರ್ ಬಂದು ಮಾತಾಡ್ತಾರೆ' ಎಂಬ ಮಾತಿಗೆ ಆಕ್ರೋಶಗೊಂಡ ಪ್ರತಿಭಟನಾಕಾರರು ಎನ್ಎಚ್ಎಂ ಡೈರೆಕ್ಟರ್ ಪ್ರಭುಗೌಡ ವಿರುದ್ಧ ಧಿಕ್ಕಾರ ಕೂಗಿದರು. ಕೊನೆಗೂ ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಮಾತಾಡಿದರು. ಸಭೆಯಲ್ಲಿ ಆಶಾ ಕಾರ್ಯಕರ್ತರ ಬೇಡಿಕೆಗಳ ಬಗ್ಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಕಮಿಷನರ್ ಬಂದು ಎಲ್ಲವೂ ನಿಮ್ಮ ಬಳಿಯೇ ಮಾತಾಡುತ್ತಾರೆ ಎಂದು ಹೇಳಿದರು.

Asha Wokers Massive Protest in Bengaluru

ನಗರದಲ್ಲಿ ಟ್ರಾಫಿಕ್ ಜಾಮ್..!

ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣದಿಂದ ಹೊರಟ ಆಶಾ ಕಾರ್ಯಕರ್ತೆಯರ ರ್ಯಾಲಿಯಿಂದ ನಗರದ ಶಿವಾನಂದ ವೃತ್ತ, ಓಕಳಿಪುರಂ, ಕೆಆರ್ ಸರ್ಕಲ್, ಮೆಜೆಸ್ಟಿಕ್ ಸುತ್ತಮುತ್ತ ವಾಹನ ಸವಾರರು ಟ್ರಾಫಿಕ್ ನಿಂದ ಪರದಾಡುವಂತಾಯಿತು. ಮಳೆಯ ನಡುವೆಯೂ ಪ್ರತಿಭಟನೆ ಮುಮದುವರೆಸಿದ್ದ ಆಶಾ ಕಾರ್ಯಕರ್ತೆಯರ ಸ್ಥಳಕ್ಕೆ ಆರೋಗ್ಯ ಇಲಾಖೆ ಆಯುಕ್ತ ಬರುವವರೆಗೂ ಪ್ರತಿಭಟನೆ ಮುಂದುವರೆಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.

ಒಟ್ಟಾರೆ ದಿನಾಂಕ 22 ರಂದು ನಡೆಯಲಿರುವ ಕಮಿಷನರ್ ಸಭೆಯಲ್ಲಿ ಯಾವ ನಿರ್ಧಾರ ಬರುತ್ತೆ ಅನ್ನೋದನ್ನ ತಿಳಿದು ಮುಂದಿನ ಹೋರಾಟದ ಬಗ್ಗೆ ಸಭೆ ಬಳಿಕ ನಿರ್ಧಾರ ಮಾಡಲಿರುವ AIUTUC ನಿರ್ಧಾರ ಮೇಲೆ ಮುಂದಿನ ಹೋರಾಟದ ಬಗ್ಗೆ ತಿಳಿಯಲಿದೆ.

Recommended Video

ಪ್ರವಾಹದಿಂದ ತತ್ತರಿಸಿದ ಅಸ್ಸಾಂ:ಸಂಕಷ್ಟದಲ್ಲಿ ಸಿಲುಕಿದ 4 ಲಕ್ಷಕ್ಕೂ ಹೆಚ್ಚು ಜನ | Oneindia Kannada

English summary
There was a massive protest by Asha activists in Bangalore today, It is hoped that a high-level official meeting will on the 22nd, Health Department Commissioner Randeep announces meeting on 22
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X