ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯಲ್ಲೇ ಪ್ರತಿಭಟನೆ ಮುಂದುವರೆಸಲು ನಿರ್ಧರಿಸಿದ ಆಶಾ ಕಾರ್ಯಕರ್ತೆಯರು

|
Google Oneindia Kannada News

ಬೆಂಗಳೂರು, ಜನವರಿ 3: 15 ತಿಂಗಳಿಂದ ಬಾಕಿ ಇರುವ ಪ್ರೋತ್ಸಾಹ ಧನವನ್ನು ನೀಡುವಂತೆ ಒತ್ತಾಯಿಸಿ ಶುಕ್ರವಾರ ಆಶಾ ಕಾರ್ಯಕರ್ತೆಯರು ಭಾರೀ ಸಂಖ್ಯೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಸುಮಾರು 10 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಿಂದಾಗಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮೆಜಿಸ್ಟಿಕ್ ಸುತ್ತಮುತ್ತ ಟ್ರಾಪಿಕ್ ಜಾಮ್ ಉಂಟಾಗಿತ್ತು.

ಸಚಿವ ಶ್ರೀರಾಮಲು ಭರವಸೆ

ಸಚಿವ ಶ್ರೀರಾಮಲು ಭರವಸೆ

ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಶ್ರೀರಾಮಲು ಒಂದು ತಿಂಗಳೊಳಗಾಗಿ ಭೇಡಿಕೆ ಈಡೇರಿಸುತ್ತೇನೆ ಎಂದು ಸಚಿವರು ಭರವಸೆ ನೀಡಿದರು. ಭೇಡಿಕೆ ಈಡೇರುವವರೆಗೆ ಕೆಲಸಕ್ಕೆ ತೆರಳದೇ ಮನೆಯಲ್ಲಿ ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತೆಯರು ಶುಕ್ರವಾರದ ಪ್ರತಿಭಟನೆಯನ್ನು ಮೊಟಕುಗೊಳಿಸಿದರು.

ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ: ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್ಆಶಾ ಕಾರ್ಯಕರ್ತೆಯರ ಬೃಹತ್ ಪ್ರತಿಭಟನೆ: ಮೆಜೆಸ್ಟಿಕ್ ಸುತ್ತ ಟ್ರಾಫಿಕ್ ಜಾಮ್

ಯಾವುದೇ ಪ್ರಯೋಜನವಾಗಿಲ್ಲ

ಯಾವುದೇ ಪ್ರಯೋಜನವಾಗಿಲ್ಲ

ಹಲವು ದಿನಗಳ ಹಿಂದೆಯೇ ಹಲವು ಬಾರಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, 300 ರೂ, 500 ಹೀಗೆ ಒಬ್ಬೊಬ್ಬರಿಗೆ ಮನಸಿಗೆ ಬಂದಂತೆ ಹಣವನ್ನು ಹಾಕಿದ್ದಾರೆ. ಹದಿನೈದು ತಿಂಗಳಿನಿಂದ ಎಷ್ಟು ಹಣ ನೀಡಬೇಕೋ ಅಷ್ಟು ಹಣವನ್ನು ನೀಡಿಲ್ಲ ಎಂದು ಆಶಾ ಕಾರ್ಯಕರ್ತೆಯರ ದೂರಿದರು.

ಕೆಲಸ ನಿಲ್ಲಿಸಿದ್ದಾರೆ

ಕೆಲಸ ನಿಲ್ಲಿಸಿದ್ದಾರೆ

ಆಶಾ ಕಾರ್ಯಕರ್ತೆಯರು ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇವರು ಕೆಲಸ ಮಾಡುತ್ತಾರೆ. ಒಂದು ಸಾವಿರ ಜನಸಂಖ್ಯೆಗೆ ಒಬ್ಬರಂತೆ ರಾಜ್ಯದಲ್ಲಿ 41 ಸಾವಿರ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಮೂವತ್ತು ಜಿಲ್ಲೆಗಳಿಂದ 41 ಸಾವಿರ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ. ಪ್ರತಿಭಟನೆ ಹಿನ್ನೆಲೆ ನಿನ್ನೆಯಿಂದಲೇ ಕೆಲಸ ನಿಲ್ಲಿಸಿದ್ದಾರೆ ಎಂದು ರಾಜಲಕ್ಷ್ಮಿ ತಿಳಿಸಿದರು.

ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ

ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ

ಕೇಂದ್ರ ಸರ್ಕಾರದಿಂದ ಕಳೆದ ಹದಿನೈದು ತಿಂಗಳಿನಿಂದ ಪ್ರೋತ್ಸಾಹ ಧನ ಬಂದಿಲ್ಲ. ಕಾರ್ಯಕರ್ತೆಯರಿಗೆ ಬರಬೇಕಾದ ಎಂಸಿಟಿಸಿ(ಮದರ್ ಚೈಲ್ಡ್‌ ಟ್ರ್ಯಾಕಿಂಗ್ ಸಿಸ್ಟಂ) ರಾಷ್ಟ್ರೀಯ ಆರೋಗ್ಯ ಅಭಿಯಾನದ ಹಣ ಕೇಂದ್ರ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಪ್ರತಿ ಆಶಾ ಕಾರ್ಯಕರ್ತೆಯರಿಗೆ ಸುಮಾರು 25 ರಿಂದ 30 ಸಾವಿರ ಹಣ ಬಾಕಿ ಬರಬೇಕಿದೆ ಎಂದರು.

English summary
Asha Karyakartas Massive Protest Ends In Bengaluru infront of Fredom Park. Traffic Jam around Majestic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X