ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಮೆಟ್ರೋ ಕಾರ್ಡಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು!

|
Google Oneindia Kannada News

ಬೆಂಗಳೂರು, ಮಾರ್ಚ್ 17: ಕೊರೊನಾವೈರಸ್ ಸಾಂಕ್ರಾಮಿಕ ಹಾಗೂ ಲಾಕ್‌ಡೌನ್ ನಂತರದಲ್ಲಿ ಸಾರ್ವಜನಿಕ ಸಂಚಾರ ಬಲು ದುಬಾರಿ ಆಗುತ್ತಿದೆ. ಬೆಂಗಳೂರಿನಲ್ಲಿ ಪ್ರಯಾಣದ ದರ ಏರಿಕೆ ಬೆನ್ನಲ್ಲೇ ಮೆಟ್ರೋ ಕಾರ್ಡ್‌ಗಳಿಗೆ ಬೇಡಿಕೆಗೆ ಹೆಚ್ಚಾಗಿದೆ. ಸ್ಮಾರ್ಟ್‌ಕಾರ್ಡ್‌ ಪೂರೈಸುವುದಕ್ಕೆ ಸ್ವತಃ ಬಿಎಂಆರ್‌ಸಿಎಲ್ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ.

ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಿಸುವ ದೃಷ್ಟಿಯಿಂದ ಪ್ರಯಾಣಿಕರಿಗೆ ಸ್ಮಾರ್ಟ್‌ಕಾರ್ಡ್‌ ಬಳಕೆಯನ್ನು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಕಡ್ಡಾಯಗೊಳಿಸಿದೆ. ಟೋಕನ್ ಬದಲಿಗೆ ಸ್ಮಾರ್ಟ್‌ಕಾರ್ಡ್‌ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ.

ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಡಾ. ಎಚ್‌ಎನ್ ಅವರ ನಾಮಕರಣ ಮಾಡಲು ಸುರೇಶ್ ಕುಮಾರ್ ಮನವಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಡಾ. ಎಚ್‌ಎನ್ ಅವರ ನಾಮಕರಣ ಮಾಡಲು ಸುರೇಶ್ ಕುಮಾರ್ ಮನವಿ

ಭಾರತ ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಬೆಂಗಳೂರು ಮೆಟ್ರೋ ರೈಲು ಸಂಚಾರವನ್ನು ಕಳೆದ ಸಪ್ಟೆಂಬರ್ ತಿಂಗಳಿನಿಂದ ಪುನಾರಂಭಗೊಳಿಸಲಾಗಿತ್ತು. ಅಂದಿನಿಂದ ಪ್ರತಿ ತಿಂಗಳು ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೇಡಿಕೆಗೆ ತಕ್ಕಂತೆ ಸ್ಮಾರ್ಟ್‌ಕಾರ್ಡ್‌ಗಳ ಪೂರೈಕೆಯಲ್ಲಿ ಬಿಎಂಆರ್‌ಸಿಎಲ್ ಹಿಂದೆ ಬಿದ್ದಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಮೂರು ಪಟ್ಟು ಏರಿಕೆಯಾದ ಪ್ರಯಾಣಿಕರ ಸಂಖ್ಯೆ

ಮೂರು ಪಟ್ಟು ಏರಿಕೆಯಾದ ಪ್ರಯಾಣಿಕರ ಸಂಖ್ಯೆ

ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ಪುನಾರಂಭಗೊಂಡ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರ ಸಂಖ್ಯೆ ಕ್ರಮೇಣ ಏರಿಕೆ ಆಗುತ್ತಿದೆ. ಆರಂಭಿಕ ಹಂತದಲ್ಲಿ 50,000 ಇದ್ದ ಮೆಟ್ರೋ ಪ್ರಯಾಣಿಕರ ಸಂಖ್ಯೆಯು ಮಾರ್ಚ್ ವೇಳೆಗೆ 1.60 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಆರು ತಿಂಗಳ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಈ ಎಲ್ಲ ಪ್ರಯಾಣಿಕರಿಗೂ ಮೆಟ್ರೋ ಸ್ಮಾರ್ಟ್‌ಕಾರ್ಡ್‌ ಕಡ್ಡಾಯಗೊಳಿಸಲಾಗಿದೆ. ಈ ಹಿನ್ನೆಲೆ ಮೆಟ್ರೋ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

2 ನಿಲ್ದಾಣಗಳಲ್ಲೇ ಸ್ಮಾರ್ಟ್‌ಕಾರ್ಡ್‌ಗೆ ಹೆಚ್ಚು ಬೇಡಿಕೆ

2 ನಿಲ್ದಾಣಗಳಲ್ಲೇ ಸ್ಮಾರ್ಟ್‌ಕಾರ್ಡ್‌ಗೆ ಹೆಚ್ಚು ಬೇಡಿಕೆ

ಬೆಂಗಳೂರಿನ ಎರಡು ಮೆಟ್ರೋ ನಿಲ್ದಾಣಗಳಲ್ಲಿ ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮೆಜೆಸ್ಟಿಕ್ ನಲ್ಲಿರುವ ಕೆಂಪೇಗೌಡ ಮೆಟ್ರೋ ನಿಲ್ದಾಣ ಹಾಗೂ ಮೈಸೂರು ರಸ್ತೆ ಮತ್ತು ನಾಗಸಂದ್ರ ಮಾರ್ಗದಲ್ಲಿ ಹೆಚ್ಚು ಸ್ಮಾರ್ಟ್ ಕಾರ್ಡ್‌ಗಳು ಮಾರಾಟವಾಗುತ್ತಿವೆ. ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿಗಿಂತಲೂ ಮೊದಲು ಪ್ರತಿನಿತ್ಯ ಗರಿಷ್ಠ 600 ಸ್ಮಾರ್ಟ್‌ಕಾರ್ಡ್‌ಗಳು ಮಾರಾಟವಾಗುತ್ತಿದ್ದವು. ಆದರೆ ಇತ್ತೀಚಿಗೆ ಪ್ರತಿನಿತ್ಯ ಕನಿಷ್ಠ 1000 ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗಳು ಮಾರಾಟವಾಗುತ್ತಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

3 ಲಕ್ಷ ಸ್ಮಾರ್ಟ್‌ಕಾರ್ಡ್‌ಗಾಗಿ ಮನವಿ

3 ಲಕ್ಷ ಸ್ಮಾರ್ಟ್‌ಕಾರ್ಡ್‌ಗಾಗಿ ಮನವಿ

ಬೆಂಗಳೂರಿನಲ್ಲಿ ಮೆಟ್ರೋ ಸ್ಮಾರ್ಟ್‌ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಹಳೆಯ ಗುತ್ತಿಗೆದಾರರಿಂದ 3 ಲಕ್ಷ ಹೊಸ ಸ್ಮಾರ್ಟ್‌ಕಾರ್ಡ್‌ಗಳನ್ನು ಸರಬರಾಜು ಮಾಡುವಂತೆ ಆದೇಶಿಸಲಾಗಿದೆ. ಮೂರು ವಾರಗಳಲ್ಲಿ 3 ಲಕ್ಷ ಸ್ಮಾರ್ಟ್‌ಕಾರ್ಡ್‌ಗಳನ್ನು ಹಳೆ ಗುತ್ತಿಗೆದಾರರಿಂದ ಪಡೆದುಕೊಳ್ಳಲಾಗುತ್ತದೆ. ಇದರ ಜೊತೆಗೆ ಹೊಸ ಗುತ್ತಿಗೆ ಮೂಲಕ 9 ಲಕ್ಷ ಸ್ಮಾರ್ಟ್‌ಕಾರ್ಡ್‌ಗಳನ್ನು ಪಡೆದುಕೊಳ್ಳಲಾಗುತ್ತದೆ. ಏಪ್ರಿಲ್ ನಾಲ್ಕನೇ ವಾರದಿಂದ ಈ ಸ್ಮಾರ್ಟ್‌ಕಾರ್ಡ್‌ಗಳ ಸರಬರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಸ್ಪಷ್ಟಪಡಿಸಿದೆ.

ಪೇಪರ್ ಟಿಕೆಟ್ ಮತ್ತು ಟೋಕನ್ ಪ್ರಸ್ತಾವನೆ

ಪೇಪರ್ ಟಿಕೆಟ್ ಮತ್ತು ಟೋಕನ್ ಪ್ರಸ್ತಾವನೆ

ಸ್ಮಾರ್ಟ್‌ಕಾರ್ಡ್‌ಗಳ ಕೊರತೆ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಪೇಪರ್ ಟಿಕೆಟ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕು. ಪೇಪರ್ ಟಿಕೆಟ್‌ನಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನವನ್ನು ಗುರುತಿಸುವ ವ್ಯವಸ್ಥೆ ಅಳವಡಿಸಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಈ ವ್ಯವಸ್ಥೆಯಿಂದ ಸಾಮಾಜಿಕ ಅಂತರ ಮತ್ತು ಶಿಷ್ಟಾಚಾರ ಪಾಲನೆಗೆ ಧಕ್ಕೆ ಆಗುತ್ತದೆ ಎಂದು ತಿಳಿದು ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದರ ಜೊತೆಗೆ ಟೋಕನ್ ವ್ಯವಸ್ಥೆಯನ್ನು ಜಾರಿಗೊಳಿಸುವುದಕ್ಕೂ ನಿರಾಕರಿಸಲಾಗಿದೆ.

ಸಾಮಾಜಿಕ ಅಂತರ ಸೇರಿ ಕೊವಿಡ್-19 ಶಿಷ್ಟಾಚಾರ ಪಾಲನೆ

ಸಾಮಾಜಿಕ ಅಂತರ ಸೇರಿ ಕೊವಿಡ್-19 ಶಿಷ್ಟಾಚಾರ ಪಾಲನೆ

ಬೆಂಗಳೂರು ಮೆಟ್ರೋ ರೈಲು ಸಂಚಾರಕ್ಕೆ ಸಿಲಿಕಾನ್ ಸಿಟಿ ಜನರು ಹೆಚ್ಚಾಗಿ ಅವಲಂಬಿಸಿದ್ದಾರೆ. ಮೆಟ್ರೋ ರೈಲಿನಲ್ಲಿ ನಿಗದಿತ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಕೊರೊನಾವೈರಸ್ ನಿಯಮಗಳನ್ನು ಪಾಲನೆ ಮಾಡಿಕೊಂಡು ಸಂಚರಿಸುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಹಿನ್ನೆಲೆ ನಿರ್ದಿಷ್ಟ ಪ್ರಮಾಣದಲ್ಲಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿ ಕೊಡಲಾಗುತ್ತಿದೆ.

Recommended Video

ಸಿಡಿ ಪ್ರಕರಣದ ಕಿಂಗ್‌ಪಿನ್‌ ಜೊತೆ ಡಿಕೆಶಿ ಇರುವ ಫೋಟೋ ಶೇರ್‌ ಮಾಡಿದ ಬಿಜೆಪಿ! | Oneindia Kannada

English summary
As Metro Ridership Climbed Post-lockdown, Namma Metro Struggled to Meet Demand for Smart Cards.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X