ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರವಿಂದ್ ಸಂಸ್ಥೆಯಿಂದ 'ಶುದ್ಧ ನೀರು ಸಂಸ್ಕರಣೆ' ಉದ್ಯಮ 'ಕೈಗೋ'

|
Google Oneindia Kannada News

ಬೆಂಗಳೂರು, ಮಾರ್ಚ್ 19 2019: ಅರವಿಂದ್ ಲಿ. ಇಂದು ತ್ಯಾಜ್ಯ ನೀರು ನಿರ್ವಹಣೆ ಉದ್ಯಮ ವಿಭಾಗದಲ್ಲಿ ಘಟಕಗಳು, ಬಿಡಿಭಾಗಗಳು ಹಾಗೂ ಕಾರ್ಯಾಚರಣೆ ಹಾಗೂ ನಿರ್ವಹಣೆಯ ( ಓ ಆ್ಯಂಡ್ ಎಂ) ಸಂಸ್ಥೆ 'ಕೈಗೋ'ಗೆ ಚಾಲನೆ ನೀಡಿತು.

ಕೈಗೋ ಹಾಗೂ ಅದರ ಸೋದರ ಸಂಸ್ಥೆ ಎನ್ವಿಸೋಲ್ ಮೂಲಕ ಅರವಿಂದ್, ತ್ಯಾಜ್ಯ ನೀರು ಸಂಸ್ಕರಣೆ, ಕೈಗಾರಿಕಾ ತ್ಯಾಜ್ಯ ನೀರು ಸಂಸ್ಕರಣೆ, ಚರಂಡಿ ನೀರು ಸಂಸ್ಕರಣೆ, ನೀರಿನಲ್ಲಿನ ಉಪ್ಪಿನ ಅಂಶ ತೆಗೆಯುವುದು ಹಾಗೂ ಕಡಿಮೆ ವೆಚ್ಚದಲ್ಲಿ ದ್ರವ ಸೋರಿಕೆ ತಡೆಯುವ ಯೋಜನೆ, ಘಟಕಗಳು ಹಾಗೂ ಸೇವೆಯ ಸಂಪೂರ್ಣ ಸೇವೆ ಒದಗಿಸಲು ಸಜ್ಜಾಗಿದೆ. ಇದು ಇಪಿಸಿ ಹೂಡಿಕೆದಾರರು ಹಾಗೂ ನೀರು ಬಳಕೆಯನ್ನು ಆಧರಿಸಿರುವ ಜವಳಿ, ಟ್ಯಾನರಿಗಳು, ಔಷಧ ಉದ್ಯಮ, ತೈಲ ಹಾಗೂ ಅನಿಲ, ಆಹಾರ ಹಾಗೂ ಪಾನೀಯ ಉದ್ಯಮಗಳಿಗೆ ನೆರವಾಗಲಿದೆ.

ಈ ಘಟಕಗಳು ಹಾಗೂ ಬಿಡಿಭಾಗ ವಲಯಗಳು, ಪರಿಣಾಮಕಾರಿ ತ್ಯಾಜ್ಯ ನೀರು ಸಂಸ್ಕರಣಾ ವ್ಯವಸ್ಥೆಯ ನಿರ್ಮಾಣ ಹಾಗೂ ನಿರ್ವಹಣೆಗೆ ಬಳಕೆಯಾಗುವ ವಸ್ತುಗಳು ಹಾಗೂ ತಂತ್ರಜ್ಞಾನಗಳನ್ನು ಒಳಗೊಂಡಿರುತ್ತವೆ. ಇದರಲ್ಲಿ ಎಂಬಿಆರ್/ಆರ್ ಒ/ ಯುಎಫ್/ ಎನ್ಎಫ್ ಪದರಗಳಿರುತ್ತವೆ. ಇವು ಎಫ್ ಆರ್ ಪಿ ಪ್ರೆಷರ್ ಟ್ಯಾಂಕ್ಸ್ ಹಾಗೂ ಟ್ಯೂಬ್ ಗಳು, ಡೋಸಿಂಗ್ ಪಂಪ್ ಗಳು, ಡಿಎಎಫ್( ಡಿಸಾಲ್ವ್ಡ್ ಏರ್ ಫ್ಲೋಟೇಷನ್ ), ಪರದೆಗಳು ಹಾಗೂ ನೀರು ತೆಗೆಯುವ ವ್ಯವಸ್ಥೆ, ಎಂಬಿಬಿಆರ್ ಮೀಡಿಯ, ಜೆಟ್‌ ಮಿಕ್ಸರ್ ಗಳು, ರಾಸಾಯನಿಕಗಳ ಅಪಾಯಕಾರಿ ಅಂಶಗಳನ್ನು ತೆಗೆದು ಸಂಸ್ಕರಿಸುವ ಡಿಫ್ಯೂಸರ್ ಗಳನ್ನು ಒಳಗೊಂಡಿರುತ್ತವೆ.

Arvind Ltd launches water components and O&M services business ‘KaiGO’

ಅರವಿಂದ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಈ ಯೋಜನೆ, ಶೂನ್ಯ ದ್ರವ ಸೋರಿಕೆ(ಝೆಡ್ಎಲ್‌ಡಿ) ತಂತ್ರಜ್ಞಾನವನ್ನು ಕೈಗೆಟಕುವ ದರ ಸ್ಥಳೀಯ ಮಟ್ಟದಲ್ಲಿ ದೊರೆಯುವಂತೆ ವ್ಯವಸ್ಥೆ ಕಲ್ಪಿಸಿ, ವಿದೇಶಿ ಪೂರೈಕೆದಾರರ ಮೇಲಿನ ಅವಲಂಬನೆಯನ್ನು ತಗ್ಗಿಸುತ್ತದೆ. ಇದು ಪೂರೈಕೆದಾರರ ಸರಣಿ ಸಂಪರ್ಕ ಒದಗಿಸುವ ಮೂಲಕ ಗ್ರಾಹಕರ ಶೇ.50ರಷ್ಟು ಸಮಯವನ್ನು ಉಳಿಸುತ್ತದೆ.

ಅರವಿಂದ್ ಸಂಸ್ಥೆ, ಸ್ಥಳೀಯ ಉತ್ಪಾದನೆಯ ಶಕ್ತ ಸಂಸ್ಥೆಗೆ ಅವಲಂಬಿತ ಓ ಆ್ಯಂಡ್ ಎಂ ಸೇವೆ ಯನ್ನು ಒಂದೇ ಸೂರಿನಡಿ ಒದಗಿಸಲು ನೆರವಾಗುತ್ತದೆ. ಕೈಗೋ ಉತ್ಪಾದನಾ ಘಟಕದ ಸ್ಥಳೀಯ ತಯಾರಿಕೆಗೆ ಹಾಗೂ ಬೃಹತ್ ಸಂಶೋಧನೆ ಹಾಗೂ ಅಭಿವೃದ್ಧಿ ತಂಡಕ್ಕೆ ಉತ್ತೇಜನ ನೀಡುತ್ತಿದೆ. ಈ ಸಂಸ್ಥೆಯಲ್ಲಿ ಸಪ್ಲೈ ಮೆಂಬ್ರೇನ್‌ ಬಯೋ ರಿಯಾಕ್ಟರ್ಸ್ (ಎಂಬಿಆರ್) ಅಲ್ಲಿ ಕೇವಲ ಭಾರತೀಯ ಉದ್ಯಮಿಗಳಿದ್ದಾರೆ. ಇದು ಕೈಗಾರಿಕಾ ತ್ಯಾಜ್ಯ ನಿರ್ವಹಣೆಗೆ ತುಂಬಾ ಮುಖ್ಯ. ಕೈಗೋ ಎಫ್ಆರ್ ಪಿ ಟ್ಯಾಂಕ್ ಹಾಗೂ ಟ್ಯೂಬ್ ಗಳನ್ನು ಕೂಡ ನಿರ್ಮಿಸುತ್ತದೆ.

ಕೈಗೋದ ಸೋದರ ಸಂಸ್ಥೆ ಎನ್ವಿಸೋಲ್, ವಿಶ್ವಾದ್ಯಂತ 38 ನೋಂದಾಯಿತ ಹಕ್ಕುಸ್ವಾಮ್ಯಗಳನ್ನು ಹೊಂದಿದೆ. ಕಂಪನಿಯು ಪ್ರಸ್ತುತ ಜಗತ್ತಿನ 15 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

English summary
Arvind Limited launched water components and O&M services business KaiGO.KaiGO and Envisol will focus on creating end-to-end solutions across projects, components and services for water treatment, industrial waste water treatment, sewage treatment, desalination and zero liquid discharge.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X