ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಸ ಗುಡಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ಅರವಿಂದ ಲಿಂಬಾವಳಿ

|
Google Oneindia Kannada News

ಬೆಂಗಳೂರು, ಫೆ.2 : ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಪಣತೂರಿನಲ್ಲಿ ಕಸ ಗುಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹಣವನ್ನು ದುಂದುವೆಚ್ಚ ಮಾಡದೆ ವೃದ್ಧಾಶ್ರಮಗಳಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಕರೆ ನೀಡಿದರು.

ಪ್ರತಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನದಲ್ಲಿ ಅರವಿಂದ ಲಿಂಬಾವಳಿ ಪಾಲ್ಗೊಳ್ಳುತ್ತಾರೆ. ಫೆ.1ರ ಭಾನುವಾರ ಅವರ ಹುಟ್ಟುಹಬ್ಬ ಆದರೂ ಅವರು ಎರಡು ಗಂಟೆ ತಮ್ಮ ಕ್ಷೇತ್ರದಲ್ಲಿ ಸ್ವಚ್ಛ ಭಾರತ ಅಭಿಯಾನದಲ್ಲಿ ಅವರು ಪಾಲ್ಗೊಂಡಿದ್ದರು.[ಹುಟ್ಟೂರಿನ ಬೀದಿ ಗುಡಿಸಿದ ಸುರೇಶ್ ರೈನಾ]

ತಮ್ಮ ಹುಟ್ಟುಹಬ್ಬದ ದಿನವಾದರೂ ಕಸ ಗುಡಿಸುವುದನ್ನು ನಿಲ್ಲಿಸಬಾರದೆಂಬ ಉದ್ದೇಶದಿಂದ ಪಣತೂರಿನಲ್ಲಿ ಕಸ ಗುಡಿಸುವ ಅಭಿಯಾನದಲ್ಲಿ ಪಾಲ್ಗೊಂಡು ನಂತರ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಅರವಿಂದ ಲಿಂಬಾವಳಿ ಹೇಳಿದರು. [ಅಂತೂ ಇಂತೂ ಸ್ವಚ್ಛವಾಯಿತು ವಿಕ್ಟೋರಿಯಾ ಆಸ್ಪತ್ರೆ]

ಹಣವನ್ನು ದುಂದುವೆಚ್ಚ ಮಾಡದೆ ವೃದ್ಧಾಶ್ರಮಗಳಿಗೆ ಹಾಗೂ ವಿಕಲಚೇತನ ಮಕ್ಕಳಿಗೆ ಸಹಾಯ ಮಾಡಬೇಕು ಎಂದು ಲಿಂಬಾವಳಿ ಅಭಿಯಾನಿಗಳಿಗೆ ಕರೆ ನೀಡಿದರು. ಹುಟ್ಟು ಹಬ್ಬದ ಪ್ರಯುಕ್ತ ವೈಟ್‌ ಫೀಲ್ಡ್ ಚರ್ಚ್ ನಲ್ಲಿರುವ ಬುದ್ಧಿಮಾಂಧ್ಯ ಮಕ್ಕಳಿಗೆ ಹಣ್ಣ ಹಂಪಲು, ಸೋಪು ವಿತರಣೆ ಮಾಡಿದರು. ಚಿತ್ರಗಳಲ್ಲಿ ನೋಡಿ ಲಿಂಬಾವಳಿ ಸ್ವಚ್ಛ ಭಾರತ ಅಭಿಯಾನ

ಕಸ ಗುಡಿಸುವ ಮೂಲಕ ಹುಟ್ಟು ಹಬ್ಬ ಆಚರಣೆ

ಕಸ ಗುಡಿಸುವ ಮೂಲಕ ಹುಟ್ಟು ಹಬ್ಬ ಆಚರಣೆ

ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಅವರು ಭಾನುವಾರ ಪಣತೂರಿನಲ್ಲಿ ಕಸ ಗುಡಿಸುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಪ್ರತಿ ಭಾನುವಾರ ಸ್ವಚ್ಛ ಭಾರತ ಅಭಿಯಾನ

ಪ್ರತಿ ಭಾನುವಾರ ಸ್ವಚ್ಛ ಭಾರತ ಅಭಿಯಾನ

ಅರವಿಂದ ಲಿಂಬಾವಳಿ ಅವರು ಪ್ರತಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಾರೆ. ಭಾನುವಾರ ತಮ್ಮ ಹುಟ್ಟು ಹಬ್ಬವಾದರೂ ಅವರು ಅಭಿಯಾನದಲ್ಲಿ ಎರಡು ಗಂಟೆಗಳ ಕಾಲ ಪಾಲ್ಗೊಂಡಿದ್ದರು.

ಅಭಿಯಾನ ನಿಲ್ಲಬಾರದು

ಅಭಿಯಾನ ನಿಲ್ಲಬಾರದು

ತಮ್ಮ ಹುಟ್ಟುಹಬ್ಬದ ದಿನವಾದರೂ ಕಸ ಗುಡಿಸುವುದನ್ನು ನಿಲ್ಲಿಸಬಾರದೆಂಬ ಉದ್ದೇಶದಿಂದ ಪಣತೂರಿನಲ್ಲಿ ಕಸ ಗುಡಿಸುವ ಅಭಿಯಾನದಲ್ಲಿ ಪಾಲ್ಗೊಂಡು ನಂತರ ಮುಂದಿನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಅರವಿಂದ ಲಿಂಬಾವಳಿ ಹೇಳಿದರು.

ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿ

ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿ

ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಂಡ ನಂತರ ಅರವಿಂದ ಲಿಂಬಾವಳಿ ಅವರು ವರ್ತೂರಿನ ಶ್ರೀ ಕಾಶಿವಿಶ್ವನಾಥ ದೇವಾಲಯದ ಜೀರ್ಣೋದ್ಧಾರ ಮತ್ತು ಕುಂಭಾಬಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

ಸ್ವಚ್ಛ ಭಾರತ ಅಭಿಯಾನ ಮತ್ತು ದೇವಾಲಯದ ಭೇಟಿ ಬಳಿಕ ಅರವಿಂದ ಲಿಂಬಾವಳಿ ಅವರು, ವೈಟ್‌ಫೀಲ್ಡ್‌ ಚರ್ಚ್‌ನಲ್ಲಿರುವ ಬುದ್ಧಿಮಾಂಧ್ಯ ಮಕ್ಕಳಿಗೆ ಹಣ್ಣ ಹಂಪಲು, ಸೋಪು ವಿತರಣೆ ಮಾಡಿದರು.

English summary
Mahadevapura BJP MLA Aravind Limbavali joined Swachh Bharat campaign in Bengaluru on this his birthday on Sunday, February 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X