ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಜ್ರಿವಾಲ್ ಡಾಕ್ಟರ್ ಅಪಾಯಿಂಟ್ಮೆಂಟ್ ಕೇಳಿಲ್ಲವಂತೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆ.19: ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್ ಅವರು ಬಹುಕಾಲದಿಂದ ಕೆಮ್ಮಿನ ಬಾಧೆಗೆ ಒಳಗಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಕೇಜ್ರಿವಾಲ್​​ ಕೆಮ್ಮಿನ ಪ್ರಸಂಗ ಕೇಳಿದ ಪ್ರಧಾನಿ ಮೋದಿ ಅವರು ಬೆಂಗಳೂರಿನ ಡಾ. ನಾಗೇಂದ್ರ ಅವರ ಆಡ್ರೆಸ್ ಕೊಟ್ಟಿರುವುದು ಎಲ್ಲವೂ ನಡೆದಿದೆ. ಅದರೆ, ಇನ್ನೂ ಕೂಡಾ ಕೇಜ್ರಿವಾಲ್ ಅವರು ಅಪಾಯಿಟ್ಮೆಂಟ್ ಬೇಕು ಎಂದು ಕೇಳಿಲ್ಲ ಎಂದು ಡಾ. ನಾಗೇಂದ್ರ ಅವರ ಕ್ಲಿನಿಕ್ ನಿಂದ ತಿಳಿದು ಬಂದಿದೆ.

ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ ಸಿಎಂ ಅರವಿಂದ್ ಅವರಿಗೆ ಸಲಹೆ ನೀಡಿದ್ದರ ಬಗ್ಗೆ ಭಾರಿ ಚರ್ಚೆ ನಡೆದಿದೆ. ಜೊತೆಗೆ ಮೋದಿ ಅವರು ಹೆಸರಿಸಿದ ಬೆಂಗಳೂರಿನ ಡಾಕ್ಟರ್ ಯಾರು? ಏತಕ್ಕೆ ಅದೇ ಡಾಕ್ಟರ್ ಸಂದರ್ಶಿಸಲು ಸೂಚಿಸಿದರು ಎಂಬುದರ ಬಗ್ಗೆ ಕೂಡಾ ಚರ್ಚೆ ಜಾರಿಯಲ್ಲಿದೆ.

ಈ ನಡುವೆ ಡಾ. ನಾಗೇಂದ್ರ ಅವರನ್ನು ಒನ್ ಇಂಡಿಯಾ ಪ್ರತಿನಿಧಿ ಸಂಪರ್ಕಿಸಿದಾಗ, ಅರವಿಂದ್ ಕೇಜ್ರಿವಾಲ್ ಕಡೆಯಿಂದ ಅಪಾಯಿಂಟ್ಮೆಂಟ್ ಕೋರಿ ಯಾವುದೇ ಮನವಿ ಬಂದಿಲ್ಲ. ಮನವಿ ಬಂದರೆ ಎಲ್ಲಾ ರೋಗಿಗಳನ್ನು ಕಾಣುವಂತೆ ಅವರನ್ನು ಕಂಡು ಅವರ ಸಮಸ್ಯೆ ಬಗೆಹರಿಸಲು ಯತ್ನಿಸುತ್ತೇನೆ. ಬಹುಕಾಲದಿಂದ ಕೆಮ್ಮಿನ ಸಮಸ್ಯೆ ಇದ್ದರೆ ಬರೀ ಮದ್ದಿನಿಂದ ಪ್ರಯೋಜನವಾಗುವುದಿಲ್ಲ. ಅದಕ್ಕೆ ದೈಹಿಕ ಕಸರತ್ತು, ಧ್ಯಾನ ಎಲ್ಲವೂ ಸೇರಿಕೊಳ್ಳಬೇಕು ಎಂದು ಡಾ. ನಾಗೇಂದ್ರ ಹೇಳಿದ್ದಾರೆ.

Arvind Kejriwal's cough: Appoint with Dr Nagendra yet to be sought

ಕೇಜ್ರಿವಾಲ್ ಕೆಮ್ಮು ಫೇಮಸ್: ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ತಂಪು ಹವೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಫ್ಲರ್ ಬಳಸುವುದು ಸಕತ್ ಫೇಮಸ್ ಆಗಿದೆ. ಜೊತೆಗೆ ಅವರ ಕೆಮ್ಮಿನ ಬಗ್ಗೆ ಅನೇಕ ಕಡೆ ಸೀರಿಯಸ್ ಆಗಿ ಚರ್ಚೆಗಳು ನಡೆದಿವೆ.

ಡಾ. ನಾಗೇಂದ್ರ ಬಗ್ಗೆ ಮೋದಿ ಮೆಚ್ಚುಗೆ: ಈ ಹಿಂದೆ ಸಮಾರಂಭವೊಂದರಲ್ಲಿ ಮೋದಿ ಅವರಿಗೆ ಡಾ.ನಾಗೇಂದ್ರ ಅವರ ಪರಿಚಯವಾಗಿದೆ. ನಾಗೇಂದ್ರ ಅವರ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯಲ್ಲಿ ರೋಗಿಗಳ ಆರೈಕೆ ಮಾಡುವ ವಿಧಾನಕ್ಕೆ ಪ್ರಧಾನಿ ಮೋದಿ ಅವರು ಮಾರು ಹೋಗಿದ್ದರು. ನಾಯಿ ಕೆಮ್ಮು, ದೀರ್ಘಕಾಲಿಕ ಆಸ್ತಮಾ, ಒಣ ಕೆಮ್ಮು, ಸ್ಮೋಕರ್ಸ್ ಕೆಮ್ಮು ಹೀಗೆ ವಿವಿಧ ಕೆಮ್ಮು ರೋಗಕ್ಕೆ ಆರೋಗ್ಯ ಕೇಂದ್ರದಲ್ಲಿ ನೀಡುವ ಚಿಕಿತ್ಸೆಯನ್ನು ಮೋದಿ ಕಂಡಿದ್ದರು. ಹೀಗಾಗಿ ಅರವಿಂದ್ ಅವರಿಗೆ ಡಾ. ನಾಗೇಂದ್ರರನ್ನು ಸಂಪರ್ಕಿಸಲು ಸಲಹೆ ನೀಡಿದ್ದಾರೆ.

ಡಾ. ನಾಗೇಂದ್ರ ಬಗ್ಗೆ: ಡಾ. ಎಚ್ ಆರ್ ನಾಗೇಂದ್ರ ಅವರು ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಡೀಮ್ಡ್ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿದ್ದಾರೆ.

ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದರೂ ವಿವೇಕಾನಂದ ಕೇಂದ್ರ ಸೇರಿದ ಮೇಲೆ ಯೋಗ, ಧ್ಯಾನ, ಸಂಶೋಧನೆಯಲ್ಲಿ ತೊಡಗಿಕೊಂಡರು. ಯೋಗ ಚಿಕಿತ್ಸೆಗಾಗಿ ಇವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ.

English summary
Has Arvind Kejriwal sought an appointment from Dr H R Nagendra as yet? Not yet says Dr Nagendra who is a chancellor at the Swami Vivekananda Yoga Anusandhana Samsthana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X